Electoral Bond: ಲಾಟರಿ ಕಿಂಗ್‌ ಕಂಪನಿಯಿಂದ ಟಿಎಂಸಿಗೆ 542 ಕೋಟಿ, ಬಿಜೆಪಿಗೆ 'ಮೇಘಾ' ಗರಿಷ್ಠ ಡೋನರ್‌!

By Santosh Naik  |  First Published Mar 21, 2024, 8:28 PM IST

ಚುನಾವಣಾ ಬಾಂಡ್‌ನ ನಂಬರ್‌ಗಳ ವಿವರಗಳನ್ನು ಎಸ್‌ಬಿಐ ಕೇಂದ್ರ ಚುನಾವಣಾ ಆಯೋಗಕ್ಕೆ ನೀಡಿದ್ದು, ಇದೇ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ಗೂ ತಿಳಿಸಿದೆ. ಇದರ ಬೆನ್ನಲ್ಲಿಯೇ ಚುನಾವಣಾ ಆಯೋಗ ಸಂಪೂರ್ಣ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೀಡಿದ್ದು, ಇದರ ಆರಂಭಿಕ ವಿವರಗಳು ಇಲ್ಲಿವೆ.
 


ನವದೆಹಲಿ (ಮಾ.21):  ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ ಬಳಿಕ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಚುನಾವಣಾ ಬಾಂಡ್‌ ನೀಡಿದವರು ಹಾಗೂ ಪಡೆದವರ ನಡುವಿನ ಲಿಂಕ್‌ ಎನ್ನಲಾಗುವ ಅಲ್ಫಾ ನ್ಯುಮರಿಕ್‌ ನಂಬರ್‌ನ ವಿವರಗಳನ್ನು ಒಳಗೊಂಡಂತೆ ಚುನಾವಣಾ ಬಾಂಡ್‌ನ ಮಾಹಿತಿಯನ್ನು ಕೇಂದ್ರ  ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿದೆ. ಬೃಹತ್‌ ಪ್ರಮಾಣದ ಡೇಟಾವನ್ನು ಹೊಂದಿರುವ ಈ ಫೈಲ್‌ನ ಆರಂಭಿಕ ವರದಿಗಳು ಪ್ರಕಟವಾಗುತ್ತಿದೆ. ಲಾಟರಿ ಕಿಂಗ್‌ ಸ್ಯಾಂಟಿಯಾಗೋ ಮಾರ್ಟಿನ್‌ ಅವರ ಫ್ಯುಚರ್‌ ಗೇಮಿಂಗ್‌ ಮತ್ತು ಹೋಟೆಲ್‌ ಸರ್ವೀಸಸ್‌ ಕಂಪನಿ ಗರಿಷ್ಠ ಪ್ರಮಾಣದಲ್ಲಿ ಚುನಾವಣಾ ಬಾಂಡ್‌ಗೆ ಹಣ ನೀಡಿತ್ತು. ಇದರಲ್ಲಿ ಹೆಚ್ಚಿನ ಹಣವನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳೇ ಪಡೆದಿವೆ ಎನ್ನುವ ರೀತಿಯಲ್ಲಿ ವರದಿಯಾಗಿದ್ದವು. ಆದರೆ, ಇದರ ವಿವರಗಳು ಪ್ರಕಟವಾಗಿದ್ದು, ಫ್ಯುಚರ್‌ ಗೇಮಿಂಗ್‌ ತನ್ನ ಗರಿಷ್ಠ ಮೊತ್ತವನ್ನು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವಾದ ಟಿಎಂಸಿಗೆ ನೀಡಿದೆ. ಟಿಎಂಸಿಗೆ ಫ್ಯುಚರ್‌ ಗೇಮಿಂಗ್‌ 542 ಕೋಟಿ ರೂಪಾಯಿ ಚುನಾವಣಾ ಬಾಂಡ್‌ ದೇಣಿಗೆ ನೀಡಿದ್ದರೆ, ನಂತರದ ಸ್ಥಾನದಲ್ಲಿ ಡಿಎಂಕೆ ಇದೆ. ಡಿಎಂಕೆಗೆ 503 ಕೋಟಿ ಸಂದಾಯವಾಗಿದೆ. ಇನ್ನು ಆಂಧ್ರ ಪ್ರದೇಶದ ವೈಎಸ್‌ಆರ್‌ ಕಾಂಗ್ರೆಸ್‌ಗೆ 159 ಕೋಟಿ ರೂಪಾಯಿ, ಬಿಜೆಪಿ 100 ಕೋಟಿ ರೂಪಾಯಿ ಹಾಗೂ ಕಾಂಗ್ರೆಸ್‌ಗೆ 50 ಕೋಟಿ ರೂಪಾಯಿಯನ್ನು ಈ ಕಂಪನಿ ನೀಡಿದೆ.

ಇನ್ನು ಮೇಘಾ ಇಂಜಿನಿಯರಿಂಗ್‌ ಕಂಪನಿಯ ಗರಿಷ್ಠ ದೇಣಿಗೆ ಬಿಜೆಪಿಗೆ ಸಿಕ್ಕಿದೆ. ಬಿಜೆಪಿಗೆ ಈ ಕಂಪನಿ 584 ಕೋಟಿ ರೂಪಾಯಿಯನ್ನು ಚುನಾವಣಾ ಬಾಂಡ್‌ ಮೂಲಕ ದೇಣಿಗೆಯಾಗಿ ನೀಡಿದೆ. ಇದೇ ಕಂಪನಿ ಡಿಎಂಕೆಗೆ 85 ಕೋಟಿ, ವೈಎಸ್‌ಆರ್‌ ಕಾಂಗ್ರೆಸ್‌ಗೆ 37 ಕೋಟಿ, ಟಿಡಿಪಿಗೆ 28 ಕೋಟಿ ಹಾಗೂ ಕಾಂಗ್ರೆಸ್‌ಗೆ 18 ಕೋಟಿ ಹಣ ನೀಡಿದೆ.

ಇನ್ನು ರಿಲಯನ್ಸ್‌ ಬೆಂಬಲಿತ ಕಂಪನಿ ಎಂದು ಊಹೆ ಮಾಡಲಾಗಿರುವ ಕ್ವಿಕ್‌ ಸಪ್ಲೈ ಚೈನ್‌ ಕಂಪನಿಗೆ ಬಿಜೆಪಿಗೆ ಗರಿಷ್ಠ 375 ಕೋಟಿ ರೂಪಾಯಿ ಚುನಾವಣಾ ಬಾಂಡ್‌ಅನ್ನು ದೇಣಿಗೆಯಾಗಿ ನೀಡಿದೆ. ಇದೇ ಕಂಪನಿ ಮಹಾರಾಷ್ಟ್ರದ ಶಿವಸೇನೆಗೆ 25 ಕೋಟಿ ಹಾಗೂ ಕಾಂಗ್ರೆಸ್‌ಗೆ 10 ಕೋಟಿ ರೂಪಾಯಿ ದೇಣಿಗೆ ನೀಡಿದೆ.

ವಿವಿಧ ಕಂಪನಿಗಳ ವಿವರ
ಹಲ್ದಿಯಾ ಎನರ್ಜಿ
ಟಿಎಂಸಿ: 281 ಕೋಟಿ
ಬಿಜೆಪಿ: 81 ಕೋಟಿ
ಕಾಂಗ್ರೆಸ್‌: 15 ಕೋಟಿ

Tap to resize

Latest Videos

ವೇದಾಂತ
ಬಿಜೆಪಿ: 230 ಕೋಟಿ
ಕಾಂಗ್ರೆಸ್‌: 125 ಕೋಟಿ
ವೈಎಸ್‌ಆರ್‌: 1.75 ಕೋಟಿ
ಟಿಎಂಸಿ: 20 ಲಕ್ಷ

ವೆಸ್ಟರ್ನ್‌ ಯುಪಿ ಪವರ್‌ ಟ್ರಾನ್ಸ್‌ಮಿಷನ್‌
ಕಾಂಗ್ರೆಸ್‌: 110 ಕೋಟಿ
ಬಿಜೆಪಿ: 80 ಕೋಟಿ
ಟಿಡಿಪಿ: 20 ಕೋಟಿ

ಮದನ್‌ಲಾಲ್‌ &ಕೆವೆಂಟರ್‌ ಫುಡ್‌ಪಾರ್ಕ್‌
ಬಿಜೆಪಿ: 320 ಕೋಟಿ
ಕಾಂಗ್ರೆಸ್‌: 30 ಕೋಟಿ
ಟಿಎಂಸಿ: 20 ಕೋಟಿ

ಭಾರ್ತಿ ಏರ್‌ಟೆಲ್‌
ಬಿಜೆಪಿ: 236.4 ಕೋಟಿ
ಕಾಂಗ್ರೆಸ್‌: 8 ಕೋಟಿ

ಡಿಎಲ್‌ಎಫ್‌
ಬಿಜೆಪಿ: 170 ಕೋಟಿ

ಬಿಜೆ ಶಿರ್ಕೆ
ಶಿವಸೇನಾ: 85 ಕೋಟಿ
ಬಿಜೆಪಿ 30.5 ಕೋಟಿ
ಕಾಂಗ್ರೆಸ್‌: 2 ಕೋಟಿ 

ಧಾರಿವಾಲ್ ಇನ್ಫ್ರಾಸ್ಟ್ರಕ್ಚರ್‌
ಟಿಎಂಸಿ: 90 ಕೋಟಿ
ಬಿಜೆಪಿ: 25 ಕೋಟಿ

 

Breaking: ಎಸ್‌ಬಿಐನಿಂದ ಪಡೆದ ಚುನಾವಣಾ ಬಾಂಡ್‌ ವಿವರ ಪ್ರಕಟಿಸಿದ ಚುನಾವಣಾ ಆಯೋಗ

ದೇಶದಲ್ಲಿ ಇಡಿ, ಐಟಿ, ಮಾಧ್ಯಮ ಸೇರಿದಂತೆ ಎಲ್ಲವು ಏಕಪಕ್ಷಿಯವಾಗಿದೆ: ಮಲ್ಲಿಕಾರ್ಜುನ ಖರ್ಗೆ ಆರೋಪ

ಬಿಜೆಪಿಯ ಚುನಾವಣಾ ಬಾಂಡ್‌ ಡೋನರ್‌ಗಳು

ಕಾಂಗ್ರೆಸ್‌ನ ಡೋನರ್‌ಗಳ ಲಿಸ್ಟ್‌

ಟಿಎಂಸಿ ಡೋನರ್‌ಗಳ ಲಿಸ್ಟ್‌

 

ಆಮ್‌ ಆದ್ಮಿ ಪಾರ್ಟಿ ಡೋನರ್‌ ಲಿಸ್ಟ್‌

 

 

 

click me!