* ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ
* CWC ಸಭೆಯಲ್ಲಿ ಮಹತ್ವದ ನಿರ್ಧಾರ
* ಕಾಂಗ್ರೆಸ್ ಮುಂದಿನ ಸಾರಥಿ ಬಗ್ಗೆ ಮಹತ್ವದ ನಿರ್ಧಾರ
ನವದೆಹಲಿ(ಅ.16): ಪಕ್ಷದ ಸದಸ್ಯತ್ವ ಅಭಿಯಾನ ಮತ್ತು ಉನ್ನತ ಮಟ್ಟದ ಸಾಂಸ್ಥಿಕ ಚುನಾವಣೆಗಳಿಗೆ ತಳಮಟ್ಟದ ಕಾರ್ಯಕ್ರಮವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್(Congress) ಕಾರ್ಯಕಾರಿ ಸಮಿತಿಯ ಸಭೆ(Congress Working Committee) ಆಯೋಜಿಸಲಾಗಿದೆ. ಭಾರೀ ಮಹತ್ವ ಪಡೆದಿರುವ ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷರ(AICC President) ಆಯ್ಕೆಯನ್ನು ಮುಂದಿನ ವರ್ಷ ಸೆಪ್ಟೆಂಬರ್ ಒಳಗೆ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಂದರೆ, ಸೆಪ್ಟೆಂಬರ್ 2022 ರವರೆಗೆ, ಸೋನಿಯಾ ಗಾಂಧಿ ಅವರು ಪಕ್ಷದ ಹಂಗಾಮಿ ಅಧ್ಯಕ್ಷರಾಗಿರುತ್ತಾರೆ.
ಜಿ-23 ನಾಯಕರ ಜೊತೆ ಹೈಕಮಾಂಡ್ ಸಂಧಾನ, ಪ್ರಿಯಾಂಕಾಗೆ ಹೊಣೆ!
undefined
ಕಾಂಗ್ರೆಸ್ ಮುಂದಿನ ವರ್ಷ ಸೆಪ್ಟೆಂಬರ್ ವೇಳೆಗೆ ಸಾಂಸ್ಥಿಕ ಬದಲಾವಣೆಯನ್ನು ತರಲು ಯೋಜಿಸಿದೆ. 'ಜಿ -23' ನಾಯಕರು ಬಹಳ ದಿನಗಳಿಂದ ಬೇಡಿಕೆಯಿಟ್ಟಿದೆ, ಆದರೆ ಸದ್ಯಕ್ಕೆ ಪಂಜಾಬ್(Punja), ಉತ್ತರ ಪ್ರದೇಶ/(Uttar Pradesh) ಸೇರಿದಂತೆ ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ(Assembly Elections) ಮೇಲೆ ಮಾತ್ರ ಗಮನ ಕೇಂದ್ರೀಕರಿಸಲು ನಿರ್ಧರಿಸಲಾಗಿದೆ. ಕೋವಿಡ್ -19 ಸಾಂಕ್ರಾಮಿಕದ(Covid 19) ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಮೊದಲ ಸಭೆ ಇದಾಗಿದ್ದು, ಇದರಲ್ಲಿ ಎಲ್ಲಾ ನಾಯಕರು ಹಾಜರಿದ್ದರು.
ಸೋನಿಯಾ ಗಾಂಧಿ, ಲೋಕಸಭಾ ಸಂಸದ ರಾಹುಲ್ ಗಾಂಧಿ(rahul Gandhi) ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi Vadra), ಹಾಗೂ ಮಾಜಿ ಕೇಂದ್ರ ಸಚಿವರಾದ ಪಿ ಚಿದಂಬರಂ(P Chidambaram) ಮತ್ತು ಛತ್ತೀಸ್‌ಗಢದ ಮುಖ್ಯಮಂತ್ರಿಗಳು (ಭೂಪೇಶ್ ಬಘೇಲ್) ಮತ್ತು ಪಂಜಾಬ್ (ಚರಣಜಿತ್ ಚನ್ನಿ) ಸೇರಿದಂತೆ ಒಟ್ಟು 57 ಜನರು ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿದ್ದರು. ಇದು G-23 ನ ಕೆಲವು ಸದಸ್ಯರನ್ನು ಒಳಗೊಂಡಿತ್ತು.
ಸೋನಿಯಾ ಉತ್ತರಾಧಿಕಾರಿ ಯಾರು?: ಅ.16ಕ್ಕೆ ಕಾಂಗ್ರೆಸ್ ಸಭೆ
ಸಭೆಯ ಆರಂಭದಲ್ಲೇ, ಸೋನಿಯಾ ಗಾಂಧಿ ತನ್ನ ಭಾಷಣದಲ್ಲಿ ಜಿ -23 ನಾಯಕರಿಗೆ, ತನ್ನನ್ನು ಟೀಕಿಸುತ್ತಿದ್ದವರಿಗೆ ಯಾವುದೇ ನಾಯಕರು ಮಾಧ್ಯಮದ ಮೂಲಕ ಮಾತನಾಡಬಾರದು ಎಂದು ಸಲಹೆ ನೀಡಿದ್ದಾರೆ. ಏಕಕಾಲದಲ್ಲಿ, ಸೋನಿಯಾ ಗಾಂಧಿ ಅವರು "ಪೂರ್ಣ ಸಮಯದ ಮತ್ತು ಪ್ರಾಯೋಗಿಕ ಕಾಂಗ್ರೆಸ್ ಅಧ್ಯಕ್ಷೆ" ಎಂದು ತಮ್ಮ ಸ್ಥಾನವನ್ನು ವಿವರಿಸಿದರು. ರಾಹುಲ್ ಗಾಂಧಿ ರಾಜೀನಾಮೆ ನೀಡಿದ ನಂತರ 2019 ರಿಂದ ಸೋನಿಯಾ ಗಾಂಧಿ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿದ್ದಾರೆ.
ಬಿಜೆಪಿ ಹಾದಿಯಲ್ಲಿ ಕಾಂಗ್ರೆಸ್: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಮುಖ?
ಕಾಂಗ್ರೆಸ್ ಯುವ ಮುಖ ಹಾಗೂ ಪಕ್ಷಕ್ಕೆ ನಿಷ್ಠರಾಗಿರುವವರಿಗೆ ಮಹತ್ವದ ಜವಾಬ್ದಾರಿ ನೀಡಲು ಮುಂದಾಗಿದೆ. ಸದ್ಯ ಪಕ್ಷ ಬಲವರ್ಧನೆಗೆ ಪೈಲಟ್(Sachin Pilot) ಅಥವಾ ಗೆಹ್ಲೋಟ್‌ಗೆ ಎಐಸಿಸಿ(AICC) ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ
ಜಿ-23:
ಪಕ್ಷದಲ್ಲಿ ಪರಿಣಾಮಕಾರಿ ನಾಯಕತ್ವದ ಬೇಡಿಕೆ ಇಟ್ಟು ಕಾಂಗ್ರೆಸ್‌ನ 23 ನಾಯಕರು ಬಹಿರಂಗ ಪತ್ರ ಬರೆದ ಬಳಿಕ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಹೈಕಮಾಂಡ್ ವಿರುದ್ಧ ಹಲವು ಹಿರಿಯ ನಾಯಕರು ಬಹಿರಂಗವಾಗಿ ಆಸಮಾಧಾನ ವ್ಯಕ್ತಪಡಿಸಿದ್ದರು. ಕಳೆದ ತಿಂಗಳು ಕೂಡಾ ಆಜಾದ್ ಅವರು ಕಾರ‍್ಯಕಾರಿ ಸಮಿತಿಯ ಸಭೆ ನಡೆಸುವಂತೆ ಪತ್ರ ಬರೆದಿದ್ದರು. ಇತ್ತೀಚೆಗಷ್ಟೇ ‘ಪಕ್ಷದಲ್ಲಿ ಯಾರೂ ಅಧ್ಯಕ್ಷರಿಲ್ಲ. ಯಾರು ನಿರ್ಧಾರ ಕೈಗೊಳ್ಳುತ್ತಾರೆ ಎಂಬುದೂ ಗೊತ್ತಾಗುವುದಿಲ್ಲ’ ಎಂದು ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಎಂದು ಹೇಳಿದ್ದರು.