ಗಡೀಲಿ ಬಿಎಸ್‌ಎಫ್‌ ಅಧಿಕಾರ ವಿಸ್ತರಣೆ: ವಿಪಕ್ಷಗಳ ಆಕ್ಷೇಪ!

By Kannadaprabha NewsFirst Published Oct 16, 2021, 12:53 PM IST
Highlights

* ಗಡಿಯಲ್ಲಿ 15 ರಿಂದ 50 ಕಿಲೋಮೀಟರ್‌ಗೆ ವಿಸ್ತರಣೆ

* ಗಡೀಲಿ ಬಿಎಸ್‌ಎಫ್‌ ಅಧಿಕಾರ ವಿಸ್ತರಣೆ: ವಿಪಕ್ಷಗಳ ಆಕ್ಷೇಪ

ನವದೆಹಲಿ(ಅ.16): ಪಾಕಿಸ್ತಾನದ(Pakistan) ಜತೆ ಗಡಿ ಹಂಚಿಕೊಂಡಿರುವ ಪಂಜಾಬ್‌(Punjab), ಬಾಂಗ್ಲಾದೇಶದೊಂದಿಗೆ(Bangladesh) ಗಡಿ ಹಂಚಿಕೊಂಡಿರುವ ಅಸ್ಸಾಂ(Assam), ಪಶ್ಚಿಮ ಬಂಗಾಳದಲ್ಲಿ(West Bengal) ಕಾರ್ಯನಿರ್ವಹಿಸುತ್ತಿರುವ ಭಾರತೀಯ ಗಡಿ ಭದ್ರತಾ ಪಡೆ(Border Security Force)ನ ಅಧಿಕಾರ ವ್ಯಾಪ್ತಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಅಂದರೆ ಇದುವರೆಗೆ ಗಡಿಯಿಂದ 15 ಕಿ.ಮೀ ಒಳಗಿನ ಪ್ರದೇಶದಲ್ಲಿ ಬಿಎಸ್‌ಎಫ್‌(BSF) ಯಾವುದೇ ವ್ಯಕ್ತಿಗಳನ್ನು ವಿಚಾರಣೆ ನಡೆಸುವ, ಬಂಧಿಸುವ ಅಧಿಕಾರ ಹೊಂದಿತ್ತು. ಅದನ್ನೀಗ 50 ಕಿ.ಮೀ ವಿಸ್ತರಿಸಲಾಗಿದೆ. ಜೊತೆಗೆ ಗುಜರಾತ್‌ನಲ್ಲಿ ಈ ಮಿತಿಯನ್ನು 50ರಿಂದ 80 ಕಿ.ಮೀ ಹೆಚ್ಚಿಸಲಾಗಿದೆ.

ಅಧಿಕಾರ ವ್ಯಾಪ್ತಿ ವಿಸ್ತರಣೆಯಿಂದ ದೇಶದ ಭದ್ರತೆ ಸಹಕಾರಿಯಾಗಲಿದೆ. ಗಡಿಯಲ್ಲಿ ನಡೆಯುವ ಮಾದಕ ವಸ್ತು ಕಳ್ಳಸಾಗಣೆ, ಶಸ್ತ್ರಾಸ್ತ ಕಳ್ಳಸಾಗಣೆ, ಗೋ ಕಳ್ಳಸಾಗಣೆಯಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದು ಎಂದು ಬಿಎಸ್‌ಎಫ್‌ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಸರ್ಕಾರದ ಕ್ರಮವನ್ನು ಕಾಂಗ್ರೆಸ್‌, ಟಿಎಂಸಿ ಸೇರಿದಂತೆ ಹಲವು ವಿಪಕ್ಷಗಳು ಇದು ಒಕ್ಕೂಟ ವ್ಯವಸ್ಥೆಗ್ನೆ ಧಕ್ಕೆ ತರುವ ನಿರ್ಧಾರ ಎಂದು ಟೀಕಿಸಿವೆ. ಆದರೆ ಬಿಜೆಪಿ ಮಾತ್ರ ಇದು ದೇಶದ ಭದ್ರತೆಯ ಹಿತಾಸಕ್ತಿಯಿಂದ ಕೈಗೊಂಡ ನಿರ್ಧಾರ ಎಂದು ಸ್ವಾಗತಿಸಿದೆ.

ಬಿಎಸ್‌ಎಫ್‌ ಕಾರ್ಯಾಚರಣೆಯ ವ್ಯಾಪ್ತಿ ವಿಸ್ತರಣೆ

ಗಡಿ ಭದ್ರತಾ ಪಡೆಗೆ ಪಂಜಾಬ್‌, ಪಶ್ಚಿಮ ಬಂಗಾಳ, ಅಸ್ಸಾಂನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ 15 ಕಿ.ಮೀ ಬದಲಿಗೆ 50 ಕಿ.ಮೀ ಪ್ರದೇಶದ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ, ಜಪ್ತಿ, ಬಂಧನಕ್ಕೆ ಅವಕಾಶ ಕಲ್ಪಿಸಿ ಕೇಂದ್ರ ಸರ್ಕಾರ ಬಿಎಸ್‌ಎಫ್‌ ಕಾಯ್ದೆಗೆ ತಿದ್ದುಪಡಿ ತಂದಿದೆ.

ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಗುಜರಾತ್‌ನಲ್ಲಿ ಈ ಮಿತಿಯನ್ನು 80 ಕಿ.ಮೀನಿಂದ 50 ಕಿ.ಮೀಗೆ ಇಳಿಸಲಾಗಿದೆ. ರಾಜಸ್ಥಾನದಲ್ಲಿ ಈಗಿರುವ 50 ಕಿ.ಮೀ ಮಿತಿಯನ್ನೇ ಮುಂದುವರಿಸಲಾಗಿದೆ.

ರಾಜಸ್ಥಾನ ಮತ್ತು ಪಂಜಾಬ್ ರಾಜ್ಯಗಳು ಸಹ ಪಾಕಿಸ್ತಾನದ ಜೊತೆ ಗಡಿ ಹಂಚಿಕೊಂಡಿದ್ದರೆ, ಅಸ್ಸಾಂ ಬಾಂಗ್ಲಾದೇಶದೊಂದಿಗೆ ಅಂತರರಾಷ್ಟ್ರೀಯ ಗಡಿಯನ್ನು ಹೊಂದಿದೆ.

click me!