ಮಮತಾ ಬ್ಯಾನರ್ಜಿಗೆ ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರ ಶುಭಾಶಯ!

By Suvarna NewsFirst Published May 2, 2021, 7:50 PM IST
Highlights

ಜಿದ್ದಾಜಿದ್ದಿನ ಕಣವಾಗಿದ್ದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಭರ್ಜರಿ ಗೆಲುವು ದಾಖಲಿಸಿದೆ. ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುತ್ತಿರುವ ಮಮತಾಗೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಶುಭಕೋರಿದ್ದಾರೆ

ಕೋಲ್ಕತಾ(ಮೇ.02):  ಪಶ್ಚಿಮ ಬಂಗಾಳದಲ್ಲಿ ಮತ್ತೆ ತೃಣಮೂಲ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಳೆದ ಬಾರಿಗಿಂತ ಅತ್ಯುತ್ತಮ ಪ್ರದರ್ಶನ ನೀಡಿರುವ ಟಿಎಂಸಿ 212  ಸ್ಥಾನ ಗೆಲ್ಲೋ ಮೂಲಕ ಹೊಸ ದಾಖಲೆ ಬರೆದಿದೆ. ಇತ್ತ ಬಿಜೆಪಿ 78 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮಮತಾ ಗೆಲುವಿಗೆ ಬಿಜೆಪಿ ನಾಯಕರು ಶುಭಕೋರಿದ್ದಾರೆ.

ಪೋಟೋ ಫಿನಿಶ್‌ನಲ್ಲಿ ಗೆದ್ದ ಸುವೆಂದು..ಸಿಎಂ ಮಮತಾಗೆ ಸೋಲು! 

ಮಮತಾ ಗೆಲುವಿಗೆ ಪ್ರಧಾನಿ ಮೋದಿ ಶುಭಕೋರಿದ್ದಾರೆ. ಜೊತೆಗೆ ಕೊರೋನಾ ವಿರುದ್ಧಧ ಹೋರಾಟಕ್ಕೆ ಕೇಂದ್ರ ಎಲ್ಲಾ ನೆರವು ನೀಡಲಿದೆ ಎಂದ್ದಾರೆ. ಮಮತಾ ಬ್ಯಾನರ್ಜಿಗೆ ಅಭಿನಂದನೆಗಳು, ಜನರ ಆಕಾಂಕ್ಷೆಗಳನ್ನು ಈಡೇರಿಸಲು ಮತ್ತು COVID-19 ಸಾಂಕ್ರಾಮಿಕ ರೋಗವನ್ನು ಹೋಗಲಾಡಿಸಲು ಕೇಂದ್ರವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಎಲ್ಲ ಬೆಂಬಲವನ್ನು ನೀಡಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

Congratulations to Mamata Didi for 's win in West Bengal. The Centre will continue to extend all possible support to the West Bengal Government to fulfil people’s aspirations and also to overcome the COVID-19 pandemic.

— Narendra Modi (@narendramodi)

ಮಮತಾ ಬ್ಯಾನರ್ಜಿ ಗೆಲುವಿಗೆ ರಕ್ಷಣಾ ಸಚಿವ, ಬಿಜೆಪಿ ನಾಯಕ ರಾಜನಾಥ್ ಸಿಂಗ್ ಶುಭಕೋರಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗೆ ಅಭಿನಂದನೆಗಳು.  ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಗೆಲುವು ಹಾಗೂ ಮುಂದಿನ ಅಧಿಕಾರಾವಧಿಗೆ ನನ್ನ ಶುಭಾಶಯಗಳು ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

 

Congratulations to the Chief Minister of West Bengal, Didi on her party’s victory in West Bengal assembly elections. My best wishes to her for her next tenure.

— Rajnath Singh (@rajnathsingh)

ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿ ಹಲವು ನಾಯಕರು ಮಮತಾ ಬ್ಯಾನರ್ಜಿಗೆ ಶುಭಕೋರಿದ್ದಾರೆ.

 

Congratulations didi on being elected again in the Assembly election. Good wishes for your next tenure.

— Nirmala Sitharaman (@nsitharaman)
click me!