Election Result ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಶಾಕ್, ಸಿಧು ಸೇರಿ 5 ರಾಜ್ಯ ಅಧ್ಯಕ್ಷರ ವಜಾಗೊಳಿಸಿದ ಸೋನಿಯಾ ಗಾಂಧಿ!

By Suvarna News  |  First Published Mar 15, 2022, 7:46 PM IST
  • ಪಂಚ ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು
  • ಐದು ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರ ವಜಾಗೊಳಿಸಿದ ಸೋನಿಯಾ
  • ಸೋಲಿನ ಹೊಣೆ ಹೊರಿಸಿ ಕಾಂಗ್ರೆಸ್ ಅಧ್ಯಕ್ಷರಿಗೆ ಗೇಟ್‌ಪಾಸ್

ನವದೆಹಲಿ(ಮಾ.15): ಪಂಚ ರಾಜ್ಯಗಳ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ನಾಯಕತ್ವದಲ್ಲಿ ಭಾರಿ ಬದಲಾವಣೆಯಾಗಲಿದೆ ಅನ್ನೋ ಲೆಕ್ಕಾಚಾರ ಉಲ್ಟಾ ಆಗಿತ್ತು. ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಸೋನಿಯಾ ಗಾಂಧಿ ಹಾಗೂ ಗಾಂಧಿ ಪರಿವಾರದಿಂದಲೇ ಕಾಂಗ್ರೆಸ್ ಶಕ್ತವಾಗಿ ಮುನ್ನಡೆಸಲು ಸಾಧ್ಯ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಯಾರೂ ಕೂಡ ಸೋಲಿನ ಹೊಣೆ ಹೊತ್ತಿರಲಿಲ್ಲ. ಇದೀಗ ಐದು ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರನ್ನು ಚುನಾವಣಾ ಸೋಲಿಗೆ ಹೊಣೆಯಾಗಿಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ.

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸೇರಿದಂತೆ ಐದು ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಜಾಗೊಳಿಸಿದ್ದಾರೆ. ಗೋವಾ, ಮಣಿಪುರ, ಉತ್ತರಖಂಡ ಹಾಗೂ ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನು ವಜಾ ಮಾಡಲಾಗಿದೆ.

Tap to resize

Latest Videos

ಪಂಜಾಬ್‌ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸ್ಥಾನವನ್ನು ಆಮ್ಮ ಆದ್ಮಿ ಪಾರ್ಟಿಗೆ ಬಿಟ್ಟುಕೊಟ್ಟಿತು. ಆಪ್ ಮುಂದೆ ಕಾಂಗ್ರೆಸ್ ಧೂಳೀಪಟವಾಗಿತ್ತು. ಪಂಜಾಬ್‌ನಲ್ಲಿ ಕಾಂಗ್ರೆಸ್ 18 ಸ್ಥಾನಗೆದ್ದು ಎರಡನೇ ಪಕ್ಷವಾಗಿದೆ. ಇತ್ತ ಆಮ್ ಆದ್ಮಿ ಪಾರ್ಟಿ 92 ಸ್ಥಾನ ಗೆದ್ದುಕೊಂಡಿದೆ. ಇನ್ನು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕೇವಲ 2 ಸ್ಥಾನ ಗೆದ್ದುಕೊಂಡಿದೆ. ಗೋವಾ ವಿಧಾನಸಭಾ ಚನಾವಣೆಯಲ್ಲಿ ಕಾಂಗ್ರೆಸ್ 11 ಸ್ಥಾನ ಗೆದ್ದುಕೊಂಡಿದೆ. ಉತ್ತರಖಂಡದಲ್ಲಿ 19 ಸ್ಥಾನ ಗೆದ್ದರೆ, ಮಣಿಪುರದಲ್ಲಿ ಕೇವಲ 5 ಸ್ಥಾನ ಗೆದ್ದುಕೊಂಡಿದೆ. ಈ ಮೂಲಕ ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ನೀಡಿತ್ತು. 

congress Meeting ಸೋನಿಯಾ ಗಾಂಧಿ ನಾಯಕತ್ವದಲ್ಲಿ ನಂಬಿಕೆ, ರಾಜೀನಾಮೆ ಬೇಡವೇ ಬೇಡ ಎಂದ ಕಾಂಗ್ರೆಸ್ CWC!

ಸೋಲಿನ ಬಗ್ಗೆ ಪರಾಮರ್ಶೆ:
ಇತ್ತೀಚಿನ ಪಂಚರಾಜ್ಯಗಳ ಚುನಾವಣೆ ಸೋಲಿನ ಕುರಿತು ಚರ್ಚಿಸಲು ಭಾನುವಾರ ಸಿಡಬ್ಲ್ಯುಸಿ ಸಭೆ ಕರೆಯಸಲಾಗಿತ್ತು. 5 ಗಂಟೆಗಳ ಕಾಲ ನಡೆದ ಸುದೀರ್ಘ ಸಭೆಯಲ್ಲಿ ತಕ್ಷಣಕ್ಕೆ ಪಕ್ಷದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವ ಮತ್ತು ಹಾಲಿ ಅಧ್ಯಕ್ಷೆ ಸೋನಿಯಾ ನಾಯಕತ್ವದಲ್ಲೇ ದೃಢ ವಿಶ್ವಾಸ ಇರಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಅಲ್ಲದೆ ಪಕ್ಷದ ಸಾಂಸ್ಥಿಕ ಚುನಾವಣೆ ಮುಗಿದು ಹೊಸ ಅಧ್ಯಕ್ಷರ ಆಯ್ಕೆಯಾಗುವವರೆಗೂ ಸೋನಿಯಾ ಅವರಿಗೆ ಪಕ್ಷ ಮುನ್ನಡೆಸುವ ಹೊಣೆ ನೀಡಲು ಸಭೆ ನಿರ್ಧರಿಸಿತು ಎಂದು ಸಭೆಯ ಬಳಿಕ ಮಾತನಾಡಿದ ಪಕ್ಷದ ವಕ್ತಾರ ರಣದೀಪ್‌ ಸುರ್ಜೇವಾಲಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಮಾಹಿತಿ ನೀಡಿದರು.

Congress Meeting ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಅಂತ್ಯ, ಮನ್‌ಮೋಹನ್ ಸಿಂಗ್ ಸೇರಿ ಪ್ರಮುಖ ನಾಲ್ವರು ಗೈರು!

ಪಕ್ಷ ಬಲಪಡಿಸಲು ಕ್ರಮ-ಸೋನಿಯಾ:
ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲಾ ನಾಯಕರ ಮಾತುಗಳನ್ನು ಆಲಿಸಿದ ಸೋನಿಯಾ ಗಾಂಧಿ, ಪಕ್ಷವನ್ನು ಬಲಪಡಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಲು ಬದ್ಧ ಎಂಬ ಭರವಸೆಯನ್ನು ಸಭೆಗೆ ನೀಡಿದರು. ಈ ವೇಳೆ ಪಕ್ಷಕ್ಕಾಗಿ ಯಾವುದೇ ಮತ್ತು ಎಲ್ಲಾ ರೀತಿಯ ತ್ಯಾಗಕ್ಕೆ ತಾವು ಸಿದ್ಧ ಎಂದು ಅವರು ಘೋಷಿಸಿದರು ಎಂದು ಸಭೆಯಲ್ಲಿ ಭಾಗಿಯಾಗಿದ್ದ ನಾಯಕರು ತಿಳಿಸಿದ್ದಾರೆ

click me!