
ನವದೆಹಲಿ (ಆ.31): ಭಾರತದ ಚುನಾವಣಾ ಆಯೋಗವು (ECI) ಹರಿಯಾಣ ಅಸೆಂಬ್ಲಿ ಚುನಾವಣೆಯ ಮತದಾನದ ದಿನಾಂಕದಲ್ಲಿ ಬದಲಾವಣೆಯನ್ನು ಘೋಷಿಸಿದೆ. ಅಕ್ಟೋಬರ್ 1 ರ ಬದಲಾಗಿ ಅಕ್ಟೋಬರ್ 5 ರಂದು ಹರಿಯಾಣ ವಿಧಾನಸಭೆ ಚುನಾವಣೆ ನಡೆಯದೆ. ಇನ್ನು ಜಮ್ಮು ಕಾಶ್ಮೀರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ದಿನಾಂಕವನ್ನು ಅಕ್ಟೋಬರ್ 4ರ ಬದಲಿಗೆ ಅಕ್ಟೋಬರ್ 8ಕ್ಕೆ ಬದಲಾಯಿಸಲಾಗಿದೆ. ಅಸೋಜ್ ಅಮವಾಸ್ಯೆ ಹಬ್ಬವನ್ನು ಆಚರಿಸುವ ಬಿಷ್ಣೋಯ್ ಸಮುದಾಯದ ದೀರ್ಘಕಾಲದ ಸಂಪ್ರದಾಯವನ್ನು ಪರಿಗಣಿಸಿ ದಿನಾಂಕಗಳನ್ನು ಪರಿಷ್ಕರಿಸುವ ನಿರ್ಧಾರವನ್ನು ಮಾಡಲಾಗಿದೆ.
ಜಮ್ಮು ಕಾಶ್ಮೀರ, ಹರ್ಯಾಣ ವಿಧಾನಸಭೆ ಚುನಾವಣೆ ಘೋಷಣೆ: ಸೆ.18 ಮತದಾನ ಆರಂಭ, ಅ. 4ಕ್ಕೆ ಫಲಿತಾಂಶ!
"ಶತಮಾನಗಳ ಹಳೆಯ ಅಸೋಜ್ ಅಮವಾಸ್ಯೆ ಹಬ್ಬದ ಆಚರಣೆಯಲ್ಲಿ ಭಾಗವಹಿಸಲು ಹರಿಯಾಣದ ಬಿಷ್ಣೋಯ್ ಸಮುದಾಯದ ಜನರು ರಾಜಸ್ಥಾನಕ್ಕೆ ಸಾಮೂಹಿಕವಾಗಿ ತೆರಳುವ ಕುರಿತು ರಾಷ್ಟ್ರೀಯ ರಾಜಕೀಯ ಪಕ್ಷಗಳು, ರಾಜ್ಯ ರಾಜಕೀಯ ಪಕ್ಷಗಳು ಮತ್ತು ಅಖಿಲ ಭಾರತ ಬಿಷ್ಣೋಯಿ ಮಹಾಸಭಾದಿಂದ ಬಂದ ಮನವಿಗಳನ್ನು ಸ್ವೀಕರಿಸಲಾಗಿದೆ" ಎಂದು ಚುನಾವಣಾ ಸಮಿತಿಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. "ಇದು ಹೆಚ್ಚಿನ ಸಂಖ್ಯೆಯ ಜನರಿಗೆ ಮತದಾನದ ಹಕ್ಕನ್ನು ನಿರಾಕರಿಸಬಹುದು ಮತ್ತು ಹರಿಯಾಣದ ಶಾಸಕಾಂಗ ಸಭೆಗೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಕಡಿಮೆ ಮಾಡಬಹುದು" ಆ ಕಾರಣಕ್ಕಾಗಿ ಬದಲಾವಣೆ ಮಾಡಿರುವುದಾಗಿ ತಿಳಿಸಿದೆ.
ಆಮ್ ಆದ್ಮಿ ಪಾರ್ಟಿಯಿಂದ ಮಹತ್ವದ ಹೆಜ್ಜೆ, ಏಕಾಏಕಿ ಹರ್ಯಾಣ ಘಟಕ ವಿಸರ್ಜಿಸಿದ ಕೇಜ್ರಿವಾಲ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ