ವೋಟರ್ ಐಡಿಗೆ ಆಧಾರ್ ಲಿಂಕ್, ತಿಳಿದುಕೊಳ್ಳಬೇಕು ಚುನಾವಣಾ ಆಯೋಗದ ಹೊಸ ಅಭಿಯಾನ!

By Suvarna NewsFirst Published Aug 1, 2022, 12:16 PM IST
Highlights

ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಚುನಾವಣಾ ಆಯೋಗ ಹೊಸ ಆಂದೋಲನ ಆರಂಭಿಸಿದೆ. ಈ ಹೊಸ ಅಭಿಯಾನದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ನವದೆಹಲಿ(ಆ.01): ಕೇಂದ್ರ ಚುನಾವಣಾ ಆಯೋಗ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡುವ ರಾಷ್ಟ್ರವ್ಯಾಪಿ ಅಭಿಯಾನ ಆರಂಭಿಸುತ್ತಿದೆ. ಸ್ವಚ್ಚ ಹಾಗೂ ಪಾರದರ್ಶಕ ಫೋಟೋ ಆಧಾರಿತ ಮತದರಾರ ಪಟ್ಟಿ ರಚಿಸಲು ಹೊಸ ಯೋಜನೆ ನೆರವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಮೊದಲ ಹಂತದಲ್ಲಿ ಮಹಾರಾಷ್ಟ್ರ ಹಾಗೂ ತ್ರಿಪುರಾ ಸೇರಿದಂತೆ ಕೆಲ ರಾಜ್ಯಗಳಲ್ಲಿ ಈ ಅಭಿಯಾನ ಆರಂಭಿಸಿದೆ.  ವೋಟರ್ ಐಟಿ ಹಾಗೂ ಆಧಾರ್ ಲಿಂಕ್ ಮಾಡುವುದರಿಂದ ನಕಲಿ ದಾಖಲೆ ಸೃಷ್ಟಿಯಂತೆ ಹಲವು ಸಮಸ್ಯಗಳು ದೂರವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಮತದಾರ ಚೀಟಿ ಹಾಗೂ ಆಧಾರ್ ಲಿಂಕ್ ಮಾಡುವ ಮಸೂದೆ 2021ರಲ್ಲಿ ಧ್ವನಿಮತದ ಮೂಲಕ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಆದರೆ ವೋಟರ್ ಐಟಿ ಅಧಾರ್ ಲಿಂಕ್ ಮಾಡುವ ವಿಧಾನದ ಬಗ್ಗೆ ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೆವಾಲ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಮೊದಲು  ಹೈಕೋರ್ಟ್‌ ಸಂಪರ್ಕಿಸಿ ಎಂದು ರಂದೀಪ್ ಸುರ್ಜೆವಾಲಾಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. 

ಸದ್ಯ ಚುನಾವಣಾ ಆಯೋಗ ಆರಂಭಿಸಿರುವ ಲಿಂಕ್ ಪ್ರಕ್ರಿಯೆ ಸ್ವಯಂಪ್ರೇರಿತವಾಗಿದೆ. ಆದರೆ ಮತದಾರರ ಪಟ್ಟಿಯಲ್ಲಿ ಅಥವಾ ಸ್ಲಿಪ್‌ಗಳಲ್ಲಿ ಆಧಾರ ಸಂಖ್ಯೆಯನ್ನು ದಾಖಲಿಸುವುದಿಲ್ಲ. ವೈಯುಕ್ತಿ ದಾಖಲೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಎಲ್ಲಾ ಮುನ್ನೆಚ್ಚರಿಕೆವಹಿಸಲಾಗಿದೆ. ಭೂತ್ ಮಟ್ಟದ ಅಧಿಕಾರಿಗಳು ಮತದಾರರ ಮನೆಗಳಿಗೆ ಭೇಟಿ ನೀಡಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ತ್ರಿಪುರಾ ಮುಖ್ಯ ಚುನಾವಣಾಧಿಕಾರಿ ಚಾಲನೆ ನೀಡಲಿದ್ದಾರೆ.

Electoral reforms ವೋಟರ್‌ ಐಡಿ ಜತೆ ಆಧಾರ್‌ ಲಿಂಕ್, ಮಹತ್ವದ ಚುನಾವಣಾ ಸುಧಾರಣೆಗೆ ಕೇಂದ್ರ ಅಸ್ತು!

ಮತದಾರರ ಗುರುತಿನ ಚೀಟಿಯಲ್ಲಿ ಆಧಾರ್ ಸಂಖ್ಯೆ ಜೋಡಿಸಿದರೆ ಇತರ ನಕಲಿ ದಾಖಲೆ ಸೃಷ್ಟಿ ಸಮಸ್ಯೆಗಳು ದೂರವಾಗಲಿದೆ. ಮತದಾರರ ಪಟ್ಟಿ ಸಂಪೂರ್ಣವಾಗಿ ದೋಷಮುಕ್ತವಾಗಿರುತ್ತದೆ. ಇಷ್ಟೇ ಅಲ್ಲ 17 ವರ್ಷಕ್ಕಿಂತ  ಮೇಲ್ಪಟ್ಟವರು ಮತದಾನ ಹಕ್ಕು ಪಡೆಯಲು ಅರ್ಹ ವಯಸ್ಸಿನವರೆಗೆ ಕಾಯಬೇಕಿಲ್ಲ. ಮುಂಚಿತವಾಗಿ ಅರ್ಜಿ ಸಲ್ಲಿಸಹುದು. ಅರ್ಹ ವಯಸ್ಸಿಗೆ ಮತದಾರ ಚೀಟಿ ಸಿಗಲಿದೆ.  17 ವಯಸ್ಸು ಚಾಲ್ತಿಯ ಯುವಕರಿಗೆ ಮುಂಗಡ ಅರ್ಜಿ ಸಲ್ಲಿಸುವ ಸೌಲಭ್ಯ ಕಲ್ಪಿಸಲಾಗಿದೆ. ಮತದಾರರ ನೋಂದಣಿಗಾಗಿ ಹೊಸ ಅರ್ಜಿ ನಮೂನೆಗಳನ್ನು ಸರಳೀಕರಿಸಲಾಗಿದೆ. ಮತದಾರರ ಪಟ್ಟಿಗೆ ಸ್ವಯಂಪ್ರೇರಿತ ಆಧಾರ್‌ ಜೋಡಣೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು. 

ಒಂದು ಮತಗಟ್ಟೆಯಲ್ಲಿ 1500 ಕ್ಕಿಂತ ಹೆಚ್ಚು ಮತದಾರರಿದ್ದಲ್ಲಿ ವಿಭಜಿಸಿ ಹೊಸ ಮತಗಟ್ಟೆಸ್ಥಾಪನೆ, ಅವಶ್ಯವಿದ್ದಲ್ಲಿ ಮತದಾರರ ಪಟ್ಟಿಯಲ್ಲಿನ ವಿಭಾಗಗಳನ್ನು ಸರಿಪಡಿಸುವುದು, ಮತದಾರರ ಪಟ್ಟಿಯಲ್ಲಿ ಒಬ್ಬರೇ ಮತದಾರರು ಒಂದಕ್ಕಿಂತ ಹೆಚ್ಚು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರೆ ತೆಗೆಯುವುದು ಸೇರಿದಂತೆ ಹಲವು ಸಮಸ್ಯೆಗಳು ನಿವಾರಣೆಯಾಗಲಿದೆ.

 

ವೋಟರ್‌ ಐಡಿ ಇನ್ನು ಮೊಬೈಲ್‌ನಲ್ಲೇ ಲಭ್ಯ, ಹೀಗೆ ಡೌನ್‌ಲೋಡ್‌ ಮಾಡ್ಕೊಳ್ಳಿ!

ಕರ್ನಾಟದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮತದಾರರ ಚೀಟಿಗೆ ಆಧಾರ್ ಲಿಂಕ್ ಮಾಡುವ ಕಾರ್ಯ ಆರಂಭಗೊಳ್ಳುತ್ತಿದೆ. ಹಾವೇರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿಯಿಂದ ಆ.1 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ ಚುನಾವಣೆ ಸುಧಾರಣೆಗಳು ಮತ್ತು ಮತದಾರರ ಗುರುತಿಗೆ ಆಧಾರ್‌ ಜೋಡಣೆ ಹಾಗೂ ದೃಢೀಕರಿಸಲು ಸ್ವಯಂ ಪ್ರೇರರಿತವಾಗಿ ಮತದಾರರಿಂದ ಆಧಾರ್‌ ದತ್ತಾಂಶವನ್ನು ಸಂಗ್ರಹಣೆ ಚಾಲನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

click me!