ಆಂಧ್ರ ಪ್ರದೇಶ ಸೇರಿ 4 ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ!

By Suvarna NewsFirst Published Mar 16, 2024, 3:53 PM IST
Highlights

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯೊಂದಿಗೆ 4 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕವೂ ಘೋಷಣೆಯಾಗಿದೆ. 

ನವದೆಹಲಿ(ಮಾ.16) ಲೋಕಸಭಾ ಚುನಾವಣೆ ಜೊತೆಗೆ ಆರು ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಆಂಧ್ರ ಪ್ರದೇಶ, ಸಿಕ್ಕಿಮ್, ಅರುಣಾಚಲ ಪ್ರದೇಶ ಹಾಗೂ ಒಡಿಶಾ ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಮೇ 13ರಂದು ಆಂಧ್ರ ಪ್ರದೇಶ ಹಾಗೂ ಒಡಿಶಾ ವಿಧಾನಸಭಾ ಚುನಾವಣೆ ನಡೆಯಲಿದೆ. ಸಿಕ್ಕಿಂ ಹಾಗೂ ಅರುಣಾಚಲ  ವಿಧಾನಸಭಾ ಚುನಾವಣೆ ಮತದಾನ ಏಪ್ರಿಲ್ 19 ರಂದು ನಡೆಯಲಿದೆ. ಫಲಿತಾಂಶ ಜೂನ್ 4 ರಂದು ಘೋಷಣೆಯಾಗಲಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗ ಮುಖ್ಯಸ್ಥ ರಾಜೀವ್ ಕುಮಾರ್ ಮತದಾನ ದಿನಾಂಕ ಘೋಷಣೆ ಮಾಡಿದ್ದಾರೆ. ಜೂನ್‌ 16ಕ್ಕೆ ಈಗಿನ ಲೋಕಸಭೆಯ ಅವಧಿ ಮುಕ್ತಾಯಗೊಳ್ಳಲಿದೆ. ಅದಕ್ಕೂ ಮುನ್ನ ಹೊಸ ಲೋಕಸಭೆ ಅಸ್ತಿತ್ವಕ್ಕೆ ಬರಬೇಕಿದೆ. ಇನ್ನು ಆಂಧ್ರಪ್ರದೇಶ, ಸಿಕ್ಕಿಮ್, ಒಡಿಶಾ ಹಾಗೂ ಅರುಣಾಚಲ ಪ್ರದೇಶ ರಾಜ್ಯಗಳ ವಿಧಾನಸಭೆ ಅವಧಿ ಕೂಡ ಜೂನ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಈ ರಾಜ್ಯಗಳ ವಿಧಾನಸಭೆಗೂ ಲೋಕಸಭೆಯ ಜೊತೆಗೇ ಚುನಾವಣೆ ನಡೆಯಲಿದೆ.

ಲೋಕಸಭಾ ಚುನಾವಣೆಯ ವೇಳೆಯೇ ಸುರಪುರ ವಿಧಾನಸಭಾ ಕ್ಷೇತ್ರಕ್ಕೂ ಉಪ ಚುನಾವಣೆ

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ
ಗೆಜೆಟ್ ಅಧಿಸೂಚನೆ: ಎಪ್ರಿಲ್ 18
ನಾಮಪತ್ರ ಸಲ್ಲಿಸಲು ಕೊನೆಯ ದಿನ : ಎಪ್ರಿಲ್ 25
ನಾಮಪತ್ರ ಪರಿಶೀಲನೆ: 26 ಎಪ್ರಿಲ್
ನಾಮಪತ್ರ ಹಿಂಪಡೆಯಲು ಕೊನೆ ದಿನ: ಎಪ್ರಿಲ್ 29
ಮತದಾನ: ಮೇ 13
ಫಲಿತಾಂಶ ಘೋಷಣೆ: ಜೂನ್ 04

ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆ
ಗೆಜೆಟ್ ಅಧಿಸೂಚನೆ: ಮಾರ್ಚ್ 20
ನಾಮಪತ್ರ ಸಲ್ಲಿಸಲು ಕೊನೆಯ ದಿನ :  ಮಾರ್ಚ್ 27
ನಾಮಪತ್ರ ಪರಿಶೀಲನೆ:  28 ಮಾರ್ಚ್
ನಾಮಪತ್ರ ಹಿಂಪಡೆಯಲು ಕೊನೆ ದಿನ:  30 ಮಾರ್ಚ್
ಮತದಾನ:  19 ಎಪ್ರಿಲ್
ಫಲಿತಾಂಶ ಘೋಷಣೆ:  ಜೂನ್ 4

Breaking: ಲೋಕಸಭೆಗೆ ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಮತದಾನ, ಜೂನ್‌ 4 ರಂದು ಫಲಿತಾಂಶ

ಸಿಕ್ಕಿಂ ವಿಧಾನಸಭಾ ಚುನಾವಣೆ
ಗೆಜೆಟ್ ಅಧಿಸೂಚನೆ: ಮಾರ್ಚ್ 20
ನಾಮಪತ್ರ ಸಲ್ಲಿಸಲು ಕೊನೆಯ ದಿನ :  ಮಾರ್ಚ್ 27
ನಾಮಪತ್ರ ಪರಿಶೀಲನೆ:   ಮಾರ್ಚ್ 28
ನಾಮಪತ್ರ ಹಿಂಪಡೆಯಲು ಕೊನೆ ದಿನ:   ಮಾರ್ಚ್ 30
ಮತದಾನ:  ಎಪ್ರಿಲ್ 19
ಫಲಿತಾಂಶ ಘೋಷಣೆ:  ಜೂನ್ 04

ಒಡಿಶಾ ವಿಧಾನಸಭಾ ಚುನಾವಣೆ
ಗೆಜೆಟ್ ಅಧಿಸೂಚನೆ: ಎಪ್ರಿಲ್ 18
ನಾಮಪತ್ರ ಸಲ್ಲಿಸಲು ಕೊನೆಯ ದಿನ : ಎಪ್ರಿಲ್ 25
ನಾಮಪತ್ರ ಪರಿಶೀಲನೆ: 26 ಎಪ್ರಿಲ್
ನಾಮಪತ್ರ ಹಿಂಪಡೆಯಲು ಕೊನೆ ದಿನ: ಎಪ್ರಿಲ್ 29
ಮತದಾನ: ಮೇ 13
ಫಲಿತಾಂಶ ಘೋಷಣೆ: ಜೂನ್ 04

ಚುನಾವಣಾ ದಿನಾಂಕ ಮೊದಲು ಮತದಾರರು, ಸುಗಮ ಮತದಾನಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡಲಾಗಿತ್ತು ಈ ಬಾರಿ ಫೋನ್ ಪೇ, ಗೂಗಲ್ ಪೇ ಸೇರಿದಂತೆ ಎಲ್ಲಾ ರೀತಿಯ ಯುಪಿಐ ವಹಿವಾಟು, ಬ್ಯಾಂಕ್ ಟ್ರಾನ್ಸಾಕ್ಷನ್ ಮೇಲೂ ಕಣ್ಮಿಡಲಾಗುವುದು ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

click me!