4 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ನಾಳೆ ಮತದಾನ; ಬಿಗಿ ಭದ್ರತೆ!

By Suvarna NewsFirst Published Apr 5, 2021, 9:30 PM IST
Highlights

ಭಾರತದಲ್ಲಿ ಚುನಾವಣೆ ಕಾವು ಜೋರಾಗಿದೆ.  ಚುನಾವಣೆ ದೃಷ್ಟಿಯಿಂದ ನಾಳೆ ಪ್ರಮುಖ ದಿನವಾಗಿದೆ. ಕಾರಣ ಏಕಕಾಲದಲ್ಲಿ 4 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ನಡೆಯಲಿದೆ. ಇದಕ್ಕಾಗಿ ಭಿಗಿ ಭದ್ರತೆ ಕೈಗೊಳ್ಳಾಗಿದೆ. ಮತದಾನ ಕುರಿತ ಹೆಚ್ಚಿನ ವಿವರ ಇಲ್ಲಿದೆ. 
 

ನವೆದೆಹಲಿ(ಏ.05):  ಪಂಚ ರಾಜ್ಯಗಳ ಚುನಾವಣೆ ಕದನ ರಂಗಾಗಿದೆ. ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಈಗಾಗಲೇ ಎರಡು ಹಂತದ ಮತದಾನ ಪೂರ್ಣಗೊಂಡಿದೆ.  ಈ ಎರಡು ರಾಜ್ಯಗಳ ಜೊತೆಗೆ ಕೇರಳ, ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲೂ ನಾಳೆ(ಏ.06) ಮತದಾನ ನಡೆಯಲಿದೆ.  

BJP ಬಿರುಗಾಳಿಗೆ ಬೆದರಿದ ಕಾಂಗ್ರೆಸ್; ದೀದಿಗೆ ಸಿಎಂ ಪಟ್ಟ, 22 ಷರತ್ತಿನ ಒಪ್ಪಂದಕ್ಕೆ ಯತ್ನ!.

ಪಶ್ಚಿಮ ಬಂಗಾಳದಲ್ಲಿ ನಾಳೆ(ಏ.06) ಮೂರನೆ ಹಂತದ ಮತದಾನ ನಡೆಯಲಿದೆ. ಬಂಗಾಳದಲ್ಲಿ ಒಟ್ಟು ಎಂಟು ಹಂತಗಳ ಮತದಾನ ನಡೆಯಲಿದ್ದು, ಇನ್ನುಳಿದ ಮತದಾನಗಳು ಏಪ್ರಿಲ್ 10, 17, 22, 26 ಮತ್ತು 29ರಂದು ನಡೆಯಲಿದೆ. ಇನ್ನು ಅಸ್ಸಾಂ ಮೂರನೇ ಹಾಗೂ ಅಂತಿಮ ಹಂತದ ಮತದಾನಕ್ಕೆ ಸಜ್ಜಾಗಿದೆ. ಇನ್ನು ಕೇರಳ, ತಮಿಳುನಾಡು ಹಾಗೂ ಪುದುಚೇರಿಯಲ್ಲೂ ನಾಳೆ(ಏ.06) ಒಂದೇ ಹಂತದ ಮತದಾನ ನಡೆಯಲಿದೆ. 

ಮಮತಾ ಬ್ಯಾನರ್ಜಿಗೆ ಮತ್ತೆ ಮುಖಭಂಗ; ಸುಳ್ಳು ಆರೋಪಕ್ಕೆ ಎಚ್ಚರಿಕೆ ಕೊಟ್ಟ ಆಯೋಗ!

ದೇಶದ 5 ಭಾಗಗಳಲ್ಲಿ ನಾಳೆ ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಭರ್ಜರಿ ಸಿದ್ಧತೆ ನಡೆಸಿದೆ. ಕೊರೋನಾ ವೈರಸ್ ಆತಂಕ, ಹಾಗೂ ಅಹಿತಕರ ಘಟನೆ ತಡೆಯಲು ಆಯೋಗ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಕೊರೋನಾ ಕಾರಣ ಈ ಬಾರಿಯ ಚುನಾವಣೆಯಲ್ಲಿ ಮತದಾನ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. ಈ ಮೂಲಕ ಜನಸಂದಣಿ ತಪ್ಪಿಸಲು ಆಯೋಗ ಕ್ರಮಕೈಗೊಂಡಿದೆ.

ರ‍್ಯಾಲಿಯಲ್ಲಿ ಕುಸಿದ ಕಾರ್ಯಕರ್ತನ ನೆರವಿಗೆ ತಮ್ಮ ವೈದ್ಯರ ತಂಡ ಕಳುಹಿಸಿದ ಮೋದಿ!

ಚುನಾವಣೆ ನಡೆಯಲಿರುವ 4 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಈಗಾಗಲೇ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಪಶ್ಚಿಮ ಬಂಗಾಳದ ಎರಡನೇ ಹಂತದ ಚುನಾವಣೆ ವೇಳೆ ಹಿಂಸಾಚಾರ ಭುಗಿಲೆದ್ದಿತ್ತು. ಹೀಗಾಗಿ ಬಂಗಾಳದಲ್ಲಿ ಹೆಚ್ಚುವರಿ ಭದ್ರತಾ ಪಡೆ ನಿಯೋಜಿಸಲಾಗಿದೆ.

ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ಚುನಾವಣೆ ಒಂದೇ ಹಂತದಲ್ಲಿ ಅಂತ್ಯವಾಗಲಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಮಾತ್ರ ಬಾಕಿ ಉಳಿದ ಹಂತದ ಮತಾನದ ಮುಂದುವರಿಯಲಿದೆ. ಮೇ.02ರಂದು ಫಲಿತಾಂಶ ಹೊರಬೀಳಲಿದೆ.

click me!