ಕೊರೋನಾ ಆತಂಕ: ಎಲ್ಲಾ ಮುಖ್ಯಮಂತ್ರಿ ಜೊತೆ ಮಹತ್ವದ ಸಭೆ ಕರೆದ ಪ್ರಧಾನಿ ಮೋದಿ!

By Suvarna News  |  First Published Apr 5, 2021, 6:07 PM IST

ಕೊರೋನಾ ಪ್ರಕರಣಗಳು ಸಂಖ್ಯೆ ಗಣನೀಯಾಗಿ ಏರಿಕೆಯಾಗಿದೆ. ಎಲ್ಲಾ ರಾಜ್ಯಗಳು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಆದರೆ ಕೊರೋನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ತಜ್ಞರು, ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ್ದ ಮೋದಿ ಇದೀಗ ಎಲ್ಲಾ ಮುಖ್ಯಮಂತ್ರಿಗಳ ಜೊತೆ ಸಭೆ ಕರೆದಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.


ನವದೆಹಲಿ(ಎ.05): ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ನಿಜಕ್ಕು ಆತಂಕ ತರುತ್ತಿದೆ. ಕಾರಣ ಕೊರೋನಾ ಹರಡುವಿಕೆ ಪ್ರಮಾಣ ಈ ಹಿಂದಿಗಿಂತಲೂ ಅತೀಯಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಸೋಮವಾರ(ಎ.05) ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ ಒಂದೇ ದಿನ 1,03,558 ಪ್ರಕರಣಗ ದಾಖಲಾಗಿದೆ. ಇದೀಗ ಕೊರೋನಾ ನಿಯಂತ್ರಣ ಹಾಗೂ ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ.

ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!.

Latest Videos

undefined

ಎಪ್ರಿಲ್ 8 ರಂದು ಪ್ರಧಾನಿ ಮೋದಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳ ಜೊತೆ ಮೋದಿ ಕೊರೋನಾ ಸಭೆ ನಡೆಸಲಿದ್ದಾರೆ.  ಕೊರೋನಾ ಲಸಿಕೆ ಅಭಿಯಾನದ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡಲು ಎಲ್ಲಾ ಕ್ರಮ ಕೈಗೊಳ್ಳಲು ಮೋದಿ ಸೂಚಿಸಲಿದ್ದಾರೆ.

ಕಳದ ಬಾರಿ ಎಲ್ಲಾ ಮುಖ್ಯಮಂತ್ರಿಗಳ ಜೊತೆ ಸಭೆ ಕರದ ಮೋದಿ ಲಾಕ್‌ಡೌನ್ ವಿಸ್ತರಿಸಿದ್ದರು. ಇದೀಗ ಮೋದಿ ಮುಖ್ಯಮಂತ್ರಿಗಳ ಸಭೆ ಕರೆದಾಗಲೇ ಲಾಕ್‌ಡೌನ್ ಆತಂಕ ಎದುರಾಗಿದೆ. ಆದರೆ ಈ ಬಾರಿ ಲಾಕ್‌ಡೌನ್‌ ಬದಲು ಲಸಿಕೆ, ಮಾಸ್ಕ್ ಧಾರಣೆ, ಸಾಮಾಜಿಕ ಅಂತರಗಳ ಮೂಲಕ ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಒತ್ತು ನೀಡಲಿದೆ.

ಒಂದೇ ದಿನ 93 ಸಾವಿರ ಕೇಸ್..! ಕೊರೋನಾ ಸಂಬಂಧ ಮೋದಿ ಮಹತ್ವದ ಸಭೆ.

ಕೇಂದ್ರ ಆರೋಗ್ಯ ಇಲಾಖೆ ವರದಿ ಪ್ರಕಾರ  ಮಹಾರಾಷ್ಟ್ರ,  ಕರ್ನಾಟಕ, ಚತ್ತೀಸಘಡ, ಉತ್ತರ ಪ್ರದೇಶ, ದೆಹಲಿ, ತಮಿಳುನಾಡು, ಮಧ್ಯಪ್ರದೇಶ ಮತ್ತು ಪಂಜಾಬ್ ಸೇರಿದಂತೆ ಎಂಟು ರಾಜ್ಯಗಳಲ್ಲಿ ಕೊರೋನಾ ಪ್ರಕರಣ ಗಣನೀಯವಾಗಿ ಏರಿಕೆಯಾದಿದೆ.  ಈ 8 ರಾಜ್ಯಗಳಿಂದ ಶೇಕಡಾ 81.90 ರಷ್ಟು ಹೊಸ ಕೋವಿಡ್ ಪ್ರಕರಣ ವರದಿಯಾಗಿದೆ.

click me!