
ಚಂಡೀಘಡ (ಸೆ.20) ತೀರ್ಥಯಾತ್ರೆ ಪ್ಯಾಕೇಜ್ ಮೂಲಕ ಬುಕ್ ಮಾಡಿ ತೆರಳಿದ ಅಜ್ಜ ನಾಪತ್ತೆಯಾಗಿದ್ದಾರೆ. ಮನೆಗೆ ಮರಳಿ ಬಂದಿಲ್ಲ. ಇತ್ತ ಅಜ್ಜ ಮನೆಗೆ ಮರಳುವ ಪ್ರಯತ್ನದಲ್ಲಿ 1200 ಕಿಲೋಮೀಟರ್ ದೂರ ಕ್ರಮಿಸಿದ್ದಾರೆ. ತಾನು ಎಲ್ಲಿದ್ದೇನೆ, ಎಲ್ಲಿಗೆ ಹೋಗಬೇಕು ಅನ್ನೋದು ಅಜ್ಜನಿಗೆ ತಿಳಿಯುತ್ತಿಲ್ಲ. ತನ್ನ ಜಿಲ್ಲೆ, ಮನೆಯ ವಿಳಾಸ ಗೊತ್ತಾಗುತ್ತಿಲ್ಲ. ಹೀಗಾಗಿ ಅಲೆದಾಡ ತೀವ್ರಗೊಂಡಿದೆ. ಕೊನೆಗೆ ವ್ಯಕ್ತಿಯೊಬ್ಬರು ಚಾಟ್‌ಜಿಪಿಟಿ ಮೂಲಕ ಅಜ್ಜನ ಕುಟುಂಬವನ್ನು ಪತ್ತೆ ಹಚ್ಚಿದ್ದಾರೆ. ನಾಲ್ಕೇ ದಿನದಲ್ಲಿ ಕುಟುಂಬದ ಜೊತೆ ಸೇರಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.
ಪಂಜಾಬ್‌ನ ಲುಧಿಯಾನ ಜಿಲ್ಲೆಯ ಫತೇಘಡ ಗುರ್ಜನ್ ಗ್ರಾಮದ ಚಮನ್ ಲಾಲ್ ಕೊನೆಗೂ ಕುಟುಂಬದ ಜೊತೆ ಸೇರಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ತೀರ್ಥ ಯಾತ್ರೆ ಯೋಜನೆಯಡಿ ಅಮೃತಸರದ ಸ್ವರ್ಣ ಮಂದಿರಕ್ಕೆ ಹೋಗಿದ್ದಾರೆ. ಆದರೆ ಅಮೃತಸರದಿಂದ ನಾಪತ್ತೆಯಾಗಿದ್ದಾರೆ. ಚಮನ್ ಲಾಲ್‌ಗೆ ಅಮೃತಸರಕ್ಕೆ ಹೋಗಬೇಕು ಅನ್ನೋದು ಗೊತ್ತಿದೆ. ಆದರೆ ತಾನು ಎಲ್ಲಿಂದ ಬಂದೆ, ತನ್ನ ಜಿಲ್ಲೆ ಸೇರಿದಂತೆ ಯಾವುದೇ ಅರಿವು ಆಗದೇ ಪರದಾಡಿದ್ದಾರೆ.
ಹೆಸರು ಕೇಳುತ್ತಾ, ತನ್ನ ಮನೆ ಕುರಿತು ವಿಚಾರಿಸುತ್ತಾ ಸಿಕ್ಕ ಸಿಕ್ಕ ರೈಲು ಹಿಡಿದು ಪ್ರಯಾಣಸಿದ್ದಾರೆ. ಪರಿಣಾಮ ಚಮನ್ ಲಾಲ್ ನೇರವಾಗಿ ಬಿಹಾರಕ್ಕೆ ಬಂದಿಳಿದಿದ್ದಾರೆ. ಅಮೃತಸರದಿಂದ 12000 ಕಿಲೋಮೀಟರ್ ದೂರದ ಬಿಹಾರದ ಗಯಾಗೆ ಬಂದ ಅಜ್ಜನಿಗೆ ಆತಂಕವೂ ಹೆಚ್ಚಾಗಿದೆ. ಏನೂ ತಿಳಿಯದಾಗಿದೆ. ಹಲವರ ವಿಚಾರಿಸಿದ್ದಾರೆ. ಕೊನೆಗೆ ನೀರಜ್ ಅನ್ನೋ ಯುವಕನ ಬಳಿ ಮಾತನಾಡಿ ತಾನು ದಾರಿ ತಪ್ಪಿರುವುದಾಗಿ ಹೇಳಿದ್ದಾರೆ. ಅಜ್ಜನಿಗೆ ತನ್ನ ಜಿಲ್ಲೆ, ರಾಜ್ಯ ಯಾವುದು ಗೊತ್ತಿಲ್ಲ. ಮನೆಯ ವಿಳಾಸವೂ ಗೊತ್ತಿಲ್ಲ. ಕೇವಲ ತನ್ನ ಗ್ರಾಮದ ಹೆಸರು ಮಾತ್ರ ಗೊತ್ತಿದೆ.
ನೀರಜ್ ತನ್ನ ಮನೆಗೆ ಅಜ್ಜ ಚಮನ್ ಲಾಲ್ ಕರೆದೊಯ್ದು ಆಶ್ರಯ ನೀಡಿದ್ದಾರೆ. ಗುರ್ಜನ್ ಅನ್ನೋ ಊರಿನ ಹೆಸರು ಹೇಳಿದ್ದಾರೆ. ಇದು ಊರಿನ ಪೂರ್ಣ ಹೆಸರು ಅಲ್ಲ. ಹೀಗಾಗಿ ನೀರಜ್ ಚಾಟ್‌ಜಿಪಿಟಿ,ಗೂಗಲ್ ಸರ್ಚ್ ಮೂಲಕ ಗ್ರಾಮದ ಹುಡುಕಾಟ ಆರಂಭಿಸಿದ್ದಾರೆ. ಪಂಜಾಬಿ ಮಾತನಾಡುತ್ತಿದ್ದ ಕಾರಣ ಪಂಜಾಬ್ ರಾಜ್ಯದ ಗ್ರಾಮಗಳ ಹೆಸರು ಸರ್ಚ್ ಮಾಡಿದ್ದಾರೆ. ಚಾಟ್‌ಜಿಪಿಟಿ ಮೂಲಕ ಗ್ರಾಮ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಹಲವು ಗುರ್ಜನ್ ಹೆಸರು ಬಂದಿದೆ. ಬಳಿಕ ಫತೇಹಘಡ ಗುರ್ಜನ್ ಗ್ರಾಮದ ಊರು ಹೇಳಿದಾಗ ಇದೇ ಎಂದು ಅಜ್ಜ ಹೇಳಿದ್ದಾರೆ. ಲೂಧಿಯಾನದಲ್ಲಿರುವ ಈ ಹಳ್ಳಿಗೆ ಅಜ್ಜನ ಒಬ್ಬರೆ ಕಳುಹಿಸಿದರೆ ಮತ್ತೆ ಕಾಣೆಯಾಗುವ ಸಾಧ್ಯತೆ ಇದೆ ಎಂದು ನೀರಜ್ ಕೂಡ ರೈಲು ಹತ್ತಿ ಹೊರಟಿದ್ದಾರೆ.
ಫತೇಹಘಡ ಗುರ್ಜನ್ ಗ್ರಾಮಕ್ಕೆ ಆಗಮಿಸಿದ ನೀರಜ್ ಹಾಗೂ ಅಜ್ಜ, ಸ್ಥಳೀಯರಲ್ಲಿ ವಿಚಾರಿಸಿದ್ದಾರೆ. ಈ ವೇಳೆ ಸ್ಥಳೀಯರು ಅಜ್ಜನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಣೆಯಾಗಿದ್ದಾರೆ ಪೋಸ್ಟ್‌ನಲ್ಲಿ ನೋಡಿದ್ದರು. ಹೀಗಾಗಿ ತಕ್ಷಣವೇ ಅಜ್ಜನ ಕುಟುಂಬಸ್ಥರ ನಂಬರ್ ಪತ್ತೆ ಹಚ್ಚಿ ಕರೆ ಮಾಡಿದ್ದಾರೆ. ಬಳಿಕ ಕುಟುಂಬಸ್ಥರು ಬಂದ ಕರೆದೊಯ್ದಿದ್ದಾರೆ. ಎಐ ಸಹಾಯದಿಂದ ದಾರಿ ತಪ್ಪಿದ ಅಜ್ಜನ ಮತ್ತೆ ಕುಟುಂಬದೊಂದಿಗೆ ಸೇರಿಸಲು ಸಾಧ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ