ನಿಮ್ಮ ಮನೆಲೂ ಅಜ್ಜಿ ತಾತ ಇಷ್ಟೊಂದು ಜೋಶಲ್ಲಿದ್ದಾರಾ... ವೈರಲ್ ವಿಡಿಯೋ

By Anusha Kb  |  First Published Nov 9, 2022, 3:32 PM IST

ನಿನ್ನೆಯಷ್ಟೇ ವೃದ್ಧ ಮಹಿಳೆಯೊಬ್ಬರು ಮದ್ವೆ ಮನೆಯೊಂದರಲ್ಲಿ ಡಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಅದೇ ರೀತಿ ಈಗ ವೃದ್ಧ ಜೋಡಿಯ ಅನೋನ್ಯತೆ, ಜೀವನೋತ್ಸಾಹ ಸೆರೆಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.


ನಿನ್ನೆಯಷ್ಟೇ ವೃದ್ಧ ಮಹಿಳೆಯೊಬ್ಬರು ಮದ್ವೆ ಮನೆಯೊಂದರಲ್ಲಿ ಡಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಅದೇ ರೀತಿ ಈಗ ವೃದ್ಧ ಜೋಡಿಯ ಅನೋನ್ಯತೆ, ಜೀವನೋತ್ಸಾಹ ಸೆರೆಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಾಣಿಸುವಂತೆ ಅಜ್ಜಿ ಚೇರ್ ಮೇಲೆ ಕುಳಿತಿದ್ದಾರೆ. ಅಜ್ಜ ಅಜ್ಜಿಯ ಡಾನ್ಸ್‌ ಮಾಡುತ್ತಾ ಅಜ್ಜಿಯ ಸುತ್ತಲೂ ಬರುತ್ತಿದ್ದಾರೆ. ತನ್ನ ಗಂಡ ತನ್ನ ಸುತ್ತಲೂ ಡಾನ್ಸ್‌ ಮಾಡುವುದನ್ನು ನೋಡಿ ಅಜ್ಜಿ ಕೈಯಿಂದ ಮುಖ ಮುಚ್ಚಿಕೊಂಡು ನಗುತ್ತಿದ್ದಾರೆ. ಈ ವಿಡಿಯೋವನ್ನು ಬಹುಶಃ ಈ ವೃದ್ಧ ದಂಪತಿಯ ಪುತ್ರಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸಖತ್ ವೈರಲ್ ಆಗಿದೆ. 

ದಳಪತಿ ವಿಜಯ್ (thalapathy Vijay) ಹಾಗೂ ಪೂಜಾ ಹೆಗ್ಡೆ (Puja Hegde) ಅಭಿನಯದ ತಮಿಳು ಸಿನಿಮಾ(Tamil Film) ಬೀಸ್ಟ್‌ ನ ಖ್ಯಾತ ಹಾಡು Halamithi Habibo... Halamithi Habibo.. ಹಾಡನ್ನು ಯಾರು ಕೇಳಿಲ್ಲ. ಹೇಳಿ ಈ ಹಾಡಿಗೆ ಹೆಜ್ಜೆ ಹಾಕದ ಜನರೇ ಇಲ್ಲ. ಹಾಗೆಯೇ ಈ ವೃದ್ಧರಿಗೂ ಹಾಡನ್ನು ಕೇಳಿ ಕುಣಿಯುವ ಆಸೆ ಆಗಿದ್ದು, ಪ್ರೀತಿಯ ಪತ್ನಿ ಮುಂದೆ ತಮ್ಮ ಡಾನ್ಸ್ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಈ ವೃದ್ಧ ದಂಪತಿಯ ಪುತ್ರಿಯೇ ದೃಶ್ಯವನ್ನು ಸೆರೆ ಹಿಡಿದಿದ್ದಾಳೆ. ಇಳಿ ವಯಸ್ಸಿನಲ್ಲಿ ಅಪ್ಪನ ಹುರುಪು ಕಂಡು ಮಗಳು ಕೂಡ ನಗುತ್ತಲೇ ವಿಡಿಯೋ ಮಾಡುವುದು ವಿಡಿಯೋದ ಹಿನ್ನೆಲೆಯಲ್ಲಿ ಕೇಳಿಸುತ್ತಿದೆ. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Shruthi Vasudevan🧿 (@optimistic_chatterbox)


ವಿಡಿಯೋದಲ್ಲಿ ಅಜ್ಜಿ ಹಸಿರು ಬಣ್ಣದ  ನೈಟಿ ಧರಿಸಿ ಕುರ್ಚಿ ಮೇಲೆ ಕುಳಿತಿದ್ದಾರೆ. ಕಷಾಯ ಬಣ್ಣದ ಲುಂಗಿ ಹಾಗೂ ಬಿಳಿ ಬನಿಯನ್ ತೊಟ್ಟ 70 ವರ್ಷದ ತಾತ ಆಕೆಯ ಮುಂದೆ ತಮಗಿಷ್ಟ ಬಂದಂತೆ ಸ್ಟೆಪ್ ಹಾಕುತ್ತಿದ್ದಾರೆ. ಶ್ರುತಿ ಎಂಬುವವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮನವಿಯ ಮೇರೆಗೆ ಈ ವಿಡಿಯೋವನ್ನು ಅಪ್‌ಲೋಡ್ ಮಾಡುತ್ತಿದ್ದೇನೆ. ನಿಮ್ಮ ಮನದೊಳಗಿರುವ ಮಗು ಮನಸ್ಸನ್ನು ಬಿಟ್ಟರೆ ನಿಮ್ಮ ಸುತ್ತಲೂ ಸದಾ ಖುಷಿ ನೆಲೆಸಿರುತ್ತದೆ. ಇವರು ನನ್ನ ಅಪ್ಪ ಮತ್ತು ಅಮ್ಮ. 10 ವರ್ಷ ವಯಸ್ಸಿನ ಇವರು ತಮ್ಮ ಎಪ್ಪತ್ತರ ಹರೆಯದಲ್ಲಿದ್ದಾರೆ ಎಂದು ಅವರು ಬರೆದುಕೊಂಡಿದ್ದು, ಈ ಅರೇಬಿಕ್ ಕುಟ್ಟು ಹಾಡಿನ ಸಂಯೋಜಕ ಅನಿರುದ್ಧ್ ರವಿಚಂದರ್ (Anirudh Ravichander) ಅವರಿಗೆ ಈ ವಿಡಿಯೋವನ್ನು ಟ್ಯಾಗ್ ಮಾಡಿದ್ದಾರೆ. 

ಈ ಜನರೇಷನ್‌ನಲ್ಲಿ ಹುಟ್ಟಿದ್ರೆ ಈ ತಾತನ ಹಿಡಿಯಕ್ಕಾಗ್ತಿರ್ಲಿಲ್ಲ ಬಿಡಿ: ಹೆಂಗೆ ಕುಣಿತಾರೆ ನೋಡಿ

ತಾತ ಡಾನ್ಸ್ (Dance) ಮಾಡುತ್ತಾ ತಮ್ಮ ಪತ್ನಿಯನ್ನು ನಗಿಸುತ್ತಿದ್ದು, ಈ ವಿಡಿಯೋ ನೋಡುಗರ ಮುಖದಲ್ಲೂ ನಗು ತರಿಸುತ್ತಿದೆ. 11.8 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದು, 7 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ವಿಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅನೇಕರು ಕಾಮೆಂಟ್ ಕೂಡ ಮಾಡಿದ್ದಾರೆ. ಇದು ದಂಪತಿಗಳ ನಿಜವಾದ ಗುರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ತುಂಬಾ ಮುದ್ದಾಗಿದೆ ಇದು ನನ್ನ ದಿನವನ್ನು ಬೆಳಗಿಸಿತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇವರಿಬ್ಬರ ಬಾಂಡಿಂಗ್ ನಿಜವಾಗಿಯೂ ತುಂಬಾ ಚೆನ್ನಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಜೀವನಪೂರ್ತಿ ಈ ವೃದ್ಧ ಜೋಡಿ ಹೀಗೆ ಖುಷಿಯಾಗಿರಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 
ಡಾನ್ಸ್ ಫ್ಲೋರ್ ಚಿಂದಿ ಮಾಡಿದ ಅಜ್ಜಿ : ವಿಸಿಲ್ ಹೊಡೆದು ಹುರಿದುಂಬಿಸಿದ ತರುಣರು

click me!