ಯುವ ಸಮೂಹವನ್ನೇ ನಾಚಿಸುವಂತ ಉತ್ಸಾಹ, ವಯಸ್ಸು ಕೇವಲ ನಂಬರ್ ಅನ್ನೋದನ್ನು ಮತ್ತೆ ಸಾಬೀತುಪಡಿಸುವ ವಿಡಿಯೋ ಇದು.ಅಜ್ಜಿಯೊಬ್ಬರ ಘೂಮರ್ ಡ್ಯಾನ್ಸ್ ಇದೀಗ ಭಾರಿ ವೈರಲ್ ಆಗಿದೆ. ಈ ವಯಸ್ಸಿನಲ್ಲಿ ಸಾಂಪ್ರದಾಯಿಕ ಉಡುಪು, ಸಾಂಪ್ರದಾಯಿಕ ಸ್ಪೆಪ್ಸ್ ಹಾಕಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜೈಪುರ(ಜು.09) ಇಳಿ ವಯಸ್ಸು, ಆದರೆ ಅದೇ ಸಾಂಪ್ರದಾಯಿಕ ಉಡುಗೆ, ಅದೇ ಸಾಂಪ್ರದಾಯಿಕ ಸ್ಪೆಪ್ಸ್. ಯುವ ಸಮೂಹವನ್ನೇ ನಾಚಿಸುವ ಡ್ಯಾನ್ಸ್. ಇದು ರಾಜಸ್ಥಾನ ವೃದ್ಧೆಯೊಬ್ಬರು ಮದುವೆ ಸಮಾರಂಭದಲ್ಲಿ ಮಾಡಿದ ಘೂಮರ್ ಡ್ಯಾನ್ಸ್. ರಾಜಸ್ಥಾನದ ಮದುವೆ ಸಮಾರಂಭದಲ್ಲಿ ಘೂಮರ್ ನೃತ್ಯ ಭಾರಿ ಜನಪ್ರಿಯ. ಇದು ಸಾಂಪ್ರದಾಯಿಕ ನೃತ್ಯವಾಗಿದೆ. ತಮ್ಮ ಕುಟುಂಬದ ಮದುವೆ ಸಮಾರಂಭದಲ್ಲಿ ವೃದ್ಧೆ ಘೂಮರ್ ಡ್ಯಾಾನ್ಸ್ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದಾರೆ.
ರಾಜಸ್ಥಾನಿ ಉಡುಗೆಯಲ್ಲಿ ಕಂಗೊಳಿಸಿರುವ ಈ ವೃದ್ಧೆ ಅದೇ ಉತ್ಸಾಹದಲ್ಲಿ ಘೂಮರ್ ಡ್ಯಾನ್ಸ್ ಮಾಡಿದ್ದಾರೆ. ಇತರ ಮಹಿಳೆಯರು ವೃದ್ಧೆಗೆ ಸಾಥ್ ನೀಡಿದ್ದಾರೆ. ಘೂಮರ್ ಡ್ಯಾನ್ಸ್ ವೇಳೆ ಕುಟುಂಬದ ಇತರ ಮಹಿಳೆಯರು ಹಣವಿಟ್ಟು ಸಂಪ್ರದಾಯ ಮುಂದುವರಿಸಿದ್ದಾರೆ. ವೃದ್ಧೆ ನಿರಂತರ ಹೆಜ್ಜೆ ಹಾಕಿ ಎಲ್ಲರ ಗಮನಸೆಳೆದಿದ್ದಾರೆ.
ಅಬ್ಬಾ ನೋಡಿದ್ರೇನೆ ಭಯವಾಗುತ್ತೆ..ಚಲಿಸುವ ರೈಲಿನಲ್ಲಿ ಜೋಡಿಯಿಂದ ಇದೆಂಥಾ ಹುಚ್ಚಾಟ..!
ರಾಜಸ್ಥಾನದ ಕೆಲ ಸಮುದಾಯದ ಕುಟುಂಬಗಳಲ್ಲಿ ಘೂಮರ್ ನೃತ್ಯವಿಲ್ಲದೆ ಮದುವೆ ಪೂರ್ಣಗೊಳ್ಳುವುದಿಲ್ಲ. ಮದುವೆ ಹಿಂದಿನ ದಿನ ರಾತ್ರಿಯ ಸಂಪ್ರದಾಯ ಹಾಗೂ ಕಾರ್ಯಕ್ರಮದಲ್ಲಿ ಘೂಮರ್ ನೃತ್ಯವೂ ಒಂದು. ಇನ್ನು ಮದುವೆ ದಿನವೂ ಘೂಮರ್ ಹೆಜ್ಜೆ ಹಾಕುವುದು ವಾಡಿಕೆಯಾಗಿದೆ. ಇಲ್ಲಿ ವೃದ್ಧೆಯ ಕುಟುಂಬದ ಮದುವೆ ಸಮಾರಂಭ ನಿಗದಿಯಾಗಿತ್ತು. ಮದುವೆಗೆ ರಾಜಸ್ತಾನಿ ಸಾಂಪ್ರದಾಯಿಕ ಉಡುಗೆ ತೊಟ್ಟ ಅಜ್ಜಿ, ಸಂಪ್ರದಾಯಿಕವಾಗಿ ಹೆಜ್ಜೆ ಹಾಕಿದ್ದಾರೆ.
ಈ ವಿಡಿಯೋ ಭಾರಿ ವೈರಲ್ ಆಗಿದೆ. ಅಜ್ಜಿಯ ನೃತ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇಳಿ ವಯಸ್ಸಿನಲ್ಲಿ ಈ ರೀತಿ ಡ್ಯಾನ್ಸ್ ಮಾಡಿ ನಮಗೆ ಸ್ಪೂರ್ತಿ ತುಂಬಿದ್ದೀರಿ. ಬದುಕನ್ನು ಮತ್ತಷ್ಟು ಪ್ರೀತಿಯಿಂದ, ಆನಂದದಿಂದ ಕಳೆಯಲು ನಿಮ್ಮ ಈ ವಿಡಿಯೋ ಸಾಕು ಎಂದು ಕಮೆಂಟ್ ಮಾಡಿದ್ದಾರೆ. ನಿಮ್ಮ ವಿಡಿಯೋ ನೋಡಿ ಹೊಸ ಚೈತನ್ಯ ಮೂಡಿದೆ. ಪ್ರತಿ ಕ್ಷಣವನ್ನೇ ಸಂತೋಷದಿಂದ ಕಳೆಯಲು ನಿರ್ಧರಿಸಿದ್ದೇನೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.
ಗುಂಡಿನ ಚಕಮಕಿ ಪಕ್ಕದಲ್ಲೇ ಸ್ಯಾಂಡ್‌ವಿಚ್ ತಿನ್ನುತ್ತಾ ಕುಳಿತ ವ್ಯಕ್ತಿ, ಇದು ಹಸಿವೋ, ಭಂಡ ಧೈರ್ಯವೋ?
ವಯಸ್ಸು ಕೇವಲ ನಂಬರ್ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಈ ವಿಡಿಯೋ ನೋಡಿದ ಬಳಿಕ ವಯಸ್ಸಿನ ಚಿಂತೆ ಯಾಕೆ, ಇರುವ ಜೀವನ ಸುಂದರವಾಗಿ ಕಳೆಯಲು ಬೇಕಿದೆ ಮನಸ್ಸು ಅನ್ನೋದು ಸಾಬೀತಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಕೆಲವರು ಅಜ್ಜಿಯ ದೃಷ್ಟಿ ತೆಗೆಯಿರಿ, ಈ ಉತ್ಸಾಹ ಎಲ್ಲಾ ಯುವಸಮೂಹಕ್ಕೆ ಸಿಗಲಿ. ನಿಮ್ಮ ಮಾರ್ಗದರ್ಶನ ಇರಲಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.