
ಭೋಪಾಲ್(ಜು.09) ಟೊಮೆಟೊ ಬೆಲೆ 160 ರೂಪಾಯಿ ಗಡಿ ದಾಟಿದೆ. ಕೆಲ ರಾಜ್ಯದಲ್ಲಿ 250 ರೂಪಾಯಿ. ದಿನದಿಂದ ದಿನಕ್ಕೆ ಕನಿಷ್ಠ 10 ರಿಂದ 20 ರೂಪಾಯಿ ಏರಿಕೆಯಾಗುತ್ತಿದೆ. ಇದೀಗ ಈ ದುಬಾರಿ ಟೊಮೆಟೊವನ್ನು ಸ್ಮಾರ್ಟ್‌ಫೋನ್ ಶಾಪ್‌ನಲ್ಲಿ ಗ್ರಾಹಕರಿಗೆ ಉಚಿತವಾಗಿ ನೀಡಲಾಗುತ್ತಿದೆ. ಪ್ರತಿಯೊಬ್ಬರಿಗೆ 2 ಕೆಜಿ ಟೊಮೆಟೊ ಫ್ರೀಯಾಗಿ ನೀಡಲಾಗುತ್ತಿದೆ. ಇದೀಗ ಈ ಸ್ಮಾರ್ಟ್‌ಫೋನ್ ಅಂಗಡಿಯಲ್ಲಿ ಜನವೋ ಜನ. ನಿಮಗೂ ಉಚಿತವಾಗಿ 2 ಕೆಜಿ ಟೊಮೊಟೊ ಬೇಕು ಎಂದರೆ ಆ ಸ್ಮಾರ್ಟ್‌ಫೋನ್ ಶಾಪ್‌ಗೆ ಭೇಟಿ ನೀಡಿದರೆ ಸಾಕು. ಆದರೆ ಒಂದು ಕಂಡೀಷನ್ ಅಪ್ಲೈ ಆಗಲಿದೆ. ಈ ಸ್ಮಾರ್ಟ್‌ಫೋನ್ ಶಾಪ್‌ಲ್ಲಿ ಮೊಬೈಲ್ ಫೋನ್ ಖರೀದಿಸುವ ಗ್ರಾಹಕರಿಗೆ ಉಚಿತವಾಗಿ 2 ಕೆಜಿ ಟೊಮೆಟೊ ನೀಡಲಾಗುತ್ತಿದೆ. ಈ ಆಫರ್ ನೀಡಿರುವುದು ಮಧ್ಯ ಪ್ರದೇಶದ ಅಶೋಕನಗರದ ಸ್ಮಾರ್ಟ್‌ಫೋನ್ ಶಾಪ್.
ಟೊಮೆಟೊ ಬೆಲೆ ದುಬಾರಿಯಾಗಿರುವ ಮೊಬೈಲ್ ಫೋನ್ ವ್ಯಾಪಾರ ಹೆಚ್ಚಿಸಲು ಸ್ಮಾರ್ಟ್‌ಫೋನ್ ಶಾಪ್ ಮಾಲೀಕ ಅಭಿಷೇಕ್ ಅಗರ್ವಾಲ್ ಹೊಸ ಆಫರ್ ಜಾರಿ ಮಾಡಿದ್ದಾರೆ. ಮೊಬೈಲ್ ಫೋನ್, ಇಯರ್ ಫೋನ್, ಇಯರ್ ಬಡ್ಸ್, ಚಾರ್ಜರ್ ಸೇರಿದಂತೆ ಯಾವುದೇ ವಸ್ತುಗಳನ್ನು ಈ ಸ್ಮಾರ್ಟ್‌ಪೋನ್ ಶಾಪ್‌ನಲ್ಲಿ ಖರೀದಿಸಿದರೆ ಟೊಮೆಟೊ ಉಟಿತವಾಗಿ ನೀಡಲಾಗುತ್ತಿದೆ. ಈ ಆಫರ್ ಪರಿಣಾಮ ಅಭಿಷೇಕ್ ಅಗರ್ವಾಲ್ ಶಾಪ್‌ಗೆ ಭಾರಿ ಗ್ರಾಹಕರು ಆಗಮಿಸುತ್ತಿದ್ದಾರೆ. ಹಲವರು ಟೊಮೆಟೊಗಾಗಿ ಮೊಬೈಲ್ ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ಗಗನಕ್ಕೇರಿದ ಬೆಲೆ, ಟೊಮೆಟೊ ಕಾಯಲು ಬೌನ್ಸರ್ ನೇಮಿಸಿದ ತರಕಾರಿ ವ್ಯಾಪಾರಿ!
ಟೊಮೆಟೊ ಬೆಲೆ ದುಬಾರಿಯಾಗಿದೆ. ಇತ್ತ ಮೊಬೈಲ್ ಮಾರುಕಟ್ಟೆಯಲ್ಲೂ ಭಾರಿ ಪೈಪೋಟಿ ಇದೆ. ಹೀಗಾಗಿ ಇದೇ ಸಂದರ್ಭವನ್ನು ಬಳಸಿ ನಾವು ಗ್ರಾಹಕರಿಗೆ ಆಫರ್ ನೀಡಿದ್ದೇವೆ. ಇದೀಗ ಜನರು ಟೊಮೆಟೊ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಾವು ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ 2 ಕೆಜಿ ಟೊಮೆಟೊ ಉಚಿತವಾಗಿ ನೀಡುವ ಆಫರ್ ಘೋಷಿಸಲಾಯಿತು. ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಗ್ರಾಹಕರಿಗೆ ಅವರ ಖರೀದಿಯ ಬೆಲೆಗೆ ತಕ್ಕಂತೆ ಅರ್ಧ ಕೆಜಿ, 1 ಕಜಿ ಹಾಗೂ ಗರಿಷ್ಠ 2 ಕೆಜಿ ಟೊಮೆಟೊ ಉಚಿತವಾಗಿ ನೀಡುತ್ತೇವೆ. ಇದರಿಂದ ನಮಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರತಿ ದಿನ ಗ್ರಾಹಕರು ಆಗಮಿಸುತ್ತಿದ್ದಾರೆ. ಮೊಬೈಲ್ ಖರೀದಿಗೆ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ ಎಂದು ಅಭಿಷೇಕ್ ಅಗರ್ವಾಲ್ ಹೇಳಿದ್ದಾರೆ.
ನಮ್ಮ ಹೊಸ ಆಫರ್ ಜನರಿಗೆ ಒಂದು ರೀತಿಯಲ್ಲಿ ಮನರಂಜನೆಯನ್ನೂ ನೀಡುತ್ತಿದೆ. ಎಲ್ಲೆಡೆ ಟೊಮೆಟೊ ಬೆಲೆ ಚರ್ಚೆಯಾಗುತ್ತಿದ್ದರೆ, ನಮ್ಮ ಶಾಪ್‌ನಲ್ಲಿ ಉಚಿತವಾಗಿ ಟೊಮೆಟೊ ಸಿಗುತ್ತಿದೆ. ಹೀಗಾಗಿ ನಮ್ಮ ಮೊಬೈಲ್ ಉತ್ಪನ್ನಗಳ ಮಾರಾಟದ ಪ್ರಮಾಣ ಹೆಚ್ಚಾಗಿದೆ. ಟೊಮೆಟೊ ದುಬಾರಿಯಾದ ಬೆನ್ನಲ್ಲೇ ನಾವು 1 ಕ್ವಿಂಟಲ್‌ಗೂ ಹೆಚ್ಟು ಟೊಮೆಟೊ ಖರೀದಿಸಿ ಆಫರ್ ಘೋಷಿಸಿದ್ದೇವು. ಇದೀಗ ನಾವು ಆರಂಭದಲ್ಲಿ ಖರೀದಿಸಿದ ಟೊಮೆಟೊ ಉಚಿತವಾಗಿ ನೀಡಿ ಬಹುತೇಕ ಖಾಲಿಯಾಗಿದೆ. ನಮ್ಮ ಆಫರ್ ಮುಂದುವರಿಯಲಿದೆ ಎಂದು ಅಭಿಷೇಕ್ ಅಗರ್ವಾಲ್ ಹೇಳಿದ್ದಾರೆ.
ಟೊಮೆಟೋ ನಂತರ 100 ರೂ. ದಾಟಿದ ಬೀನ್ಸ್, ಕ್ಯಾರೆಟ್: ಬೆಲೆ ಕೇಳಿ ಹೌಹಾರಿದ ಗ್ರಾಹಕ...!
ಅಭಿಷೇಕ್ ಅಗರ್ವಾಲ್ ಮಾರ್ಕೆಟಿಂಗ್ ಐಡಿಯಾಗೆ ಜನರು ಫಿದಾ ಆಗಿದ್ದಾರೆ. ಟ್ರೆಡಿಂಗ್ ವಿಚಾರವನ್ನೇ ಮುಂದಿಟ್ಟುಕೊಂಡು ಸ್ಮಾರ್ಟ್‌ಫೋನ್ ಜೊತೆಗೆ ಟೊಮೆಟೊ ನೀಡುವ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ