Utrar Pradesh ಇದೇ ಮೊದಲ ಬಾರಿ ರಸ್ತೆಯಲ್ಲಿ ನಡೆದಿಲ್ಲ ಈದ್ ಪ್ರಾರ್ಥನೆ, ಸಿಎಂ ಯೋಗಿ!

Published : May 23, 2022, 04:58 PM ISTUpdated : May 23, 2022, 05:02 PM IST
Utrar Pradesh ಇದೇ ಮೊದಲ ಬಾರಿ ರಸ್ತೆಯಲ್ಲಿ ನಡೆದಿಲ್ಲ ಈದ್ ಪ್ರಾರ್ಥನೆ, ಸಿಎಂ ಯೋಗಿ!

ಸಾರಾಂಶ

2ನೇ ಬಾರಿಗೆ ಅಧಿಕಾರಕ್ಕೇರಿದ ಯೋಗಿ ಆಡಳಿತದಲ್ಲಿ ಮಹತ್ತರ ಬದಲಾವಣೆ ಲೌಡ್ ಸ್ಪೀಕರ್ ಸಂಪೂರ್ಣ ನಿರ್ಬಂಧ ಮಾಡಲಾಗಿದೆ ರಾಷ್ಟ್ರೀಯ ಸ್ವಯಂಸೇವಕ್ ಸಂಘ ಆಯೋಜಿಸಿದ ಕಾರ್ಯಕ್ರಮದಲ್ಲಿ ಯೋಗಿ

ಲಖನೌ(ಮೇ.23): ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃ್ತ್ವದ 2.0 ಸರ್ಕಾರ ಭಾರಿ ಸದ್ದು ಮಾಡುತ್ತಿದೆ. ಎರಡನೇ ಬಾರಿಗೆ ಅಧಿಕಾರಕ್ಕೇರಿದ ದಿನದಿಂದ ಒಂದಲ್ಲ ಒಂದು ಮಹತ್ವದ ನಿರ್ಧಾರದ ಮೂಲಕ ದೇಶದ ಗಮನಸೆಳೆದಿದೆ. ಈ ಬದಲಾವಣೆ ಕುರಿತು ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ರಸ್ತೆಗಳಲ್ಲಿ ಈದ್ ಪ್ರಾರ್ಥನೆ ನಡೆದಿಲ್ಲ ಎಂದು ಯೋಗಿ ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆರ್ಗನೈಸರ್ ಹಾಗೂ ಪಾಂಚಜನ್ಯ  ನಿಯತಕಾಲಿಕೆಯ 75ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯೋಗಿ ಆದಿತ್ಯನಾಥ್ ಯುಪಿಯಲ್ಲಿನ ಬದಲಾವಣೆ ಹಾಗೂ ರಾಷ್ಟ್ರ ಕಟ್ಟುವಲ್ಲಿ ಸರ್ಕಾರದ ಕೊಡುಗೆ ಕುರಿತು ಮಹತ್ವದ ಮಾತುಗಳನ್ನಾಡಿದ್ದಾರೆ.

ನಾಯಿ ಸಾಕುವವರಿಗೆ ಸಿಎಂ ಯೋಗಿ ಆದಿತ್ಯನಾಥ್ ಖಡಕ್ ವಾರ್ನಿಂಗ್, ಕಠಿಣ ನಿಯಮ ಜಾರಿ!

ಈ ಬಾರಿ ಉತ್ತರ ಪ್ರದೇಶದಲ್ಲಿ ರಾಮನವಮಿಯನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಉತ್ತರ ಪ್ರದೇಶದ ಯಾವುದೇ ಭಾಗದಲ್ಲಿ ರಾಮ ನವಮಿ ದಿನ ಹಿಂಸಾಚಾರ ನಡೆದಿಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ರಾಮ ನವಮಿ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆದು ಹಿಂಸಾಚಾರ, ಗಲಭೆಗಳಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಶಾಂತವಾಗಿ ನಡೆದಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ದೇಶದಲ್ಲಿ ಭಾರಿ ಸದ್ದು ಮಾಡಿ ವಿವಾದಕ್ಕೆ ಕಾರಣವಾಗಿದ್ದ ಲೌಡ್‌ಸ್ಪೀಕರ್ ಪ್ರಕರಣ ಕೂಡ ಉತ್ತರ ಪ್ರದೇಶದಲ್ಲಿ ಶಾಂತವಾಗಿ ಪರಿಹಾರಗೊಂಡಿದೆ. ಮಸೀದಿಯಲ್ಲಿನ ಹಲವು ಲೌಡ್‌ಸ್ಪೀಕರ್ ತೆಗೆಸಲಾಗಿದೆ. ಇನ್ನುಳಿದ ಲೌಡ್‌ಸ್ಪೀಕರ್ ಧ್ವನಿ ಮಟ್ಟವನ್ನು ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಇಡಲಾಗಿದೆ ಎಂದು ಯೋಗಿ ಹೇಳಿದ್ದಾರೆ.

ಅನಧಿಕೃತ ಹೆಚ್ಚವುರಿ ಧ್ವನಿಯ 45,773 ಲೌಡ್‌ಸ್ಪೀಕರ್ ತೆಗೆಸಲಾಗಿದೆ. ಇನ್ನು 58,861 ಲೌಡ್‌ಸ್ಪೀಕರ್ ಧ್ವನಿ ಮಟ್ಟವನ್ನು ಇಳಿಸಲಾಗಿದೆ. ಸರ್ಕಾರಕ್ಕೆ ವಶಕ್ಕೆ ಪಡೆದಿರುವ ಲೌಡ್‌ಸ್ಪೀಕರಗಳನ್ನು ಶಾಲೆ ಹಾಗೂ ಆಸ್ಪತ್ರೆಗಳ ಬಳಕಗೆ ನೀಡಲಾಗುವುದು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಯೋಗಿ ‘ಬುಲ್ಡೋಜರ್‌ ಪ್ರಯೋಗಕ್ಕೆ’ ಮೋದಿ ಮೆಚ್ಚುಗೆ!

ಹೊಸ ಮದರಸಾರಗಳಿಗೆ ಅನುದಾನ ಇಲ್ಲ: ಸಿಎಂ
ಮದರಸಾಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿದ ಬೆನ್ನಲ್ಲೇ ಹೊಸ ಮದರಸಾಗಳಿಗೆ ಅನುದಾನ ನೀಡುವುದನ್ನು ನಿಲ್ಲಿಸಲು ಉತ್ತರ ಪ್ರದೇಶದ ಸರ್ಕಾರ ನಿರ್ಧರಿಸಿದೆ. ಕಳೆದ ಬಜೆಟ್‌ನಲ್ಲಿ ಯೋಗಿ ಸರ್ಕಾರವು ಮದರಸಾಗಳನ್ನು ಆಧುನೀಕರಣಗೊಳಿಸಲು 479 ಕೋಟಿ ರು. ಅನುದಾನವನ್ನು ಹಂಚಿಕೆಮಾಡಿತ್ತು. ರಾಜ್ಯದ ಸುಮಾರು 16,000 ಮದರಸಾಗಳು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ನೋಂದಣಿ ಮಾಡಿಕೊಂಡಿದ್ದವು. ಆದರೆ ಈ ವರ್ಷ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಕ್ಯಾಬಿನೆಟ್‌ ಅನುದಾನಗಳ ಪಟ್ಟಿಯಿಂದ ಹೊಸ ಮದರಸಾಗಳನ್ನು ಹೊರಗಿರಿಸಿದೆ. ಅಲ್ಪಸಂಖ್ಯಾತ ಸಚಿವ ದಾನೀಶ್‌ ಆಜಾದ್‌ ಅನ್ಸಾರಿ ಈ ಆದೇಶವನ್ನು ಹೊರಡಿಸಿದ್ದಾರೆ. 

ಬಾಯಿ ತೆರದರೆ ಗುಂಡು ಹಾರಿಸುವೆ: ಯೋಗಿಗೆ ಬೆದರಿಸಿದ ಸಂಸದನ ಮೇಲೆ ಕೇಸು
ಬಾಯಿ ತೆರೆದರೆ ಗುಂಡು ಹಾರಿಸುವೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದ್ದ ಸಮಾಜವಾದಿ ಪಕ್ಷದ ಶಾಸಕ ಶಾಜೀಲ್‌ ಇಸ್ಲಾಂ ವಿರುದ್ಧ ಅಪರಾಧ ವಿಭಾಗ (ಕ್ರೈಂ ಬ್ರಾಂಚ್‌) ತನಿಖೆಯನ್ನು ಆರಂಭಿಸಿದೆ.

ಸಾರ್ವಜನಿಕ ಸಭೆಯಲ್ಲಿ ಸಿಎಂಗೆ ಬೆದರಿಕೆ ಒಡ್ಡಿದ್ದ ಶಾಜೀಲ್‌ ವಿರುದ್ಧ ಏ.4 ರಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ನಡುವೆ ಅವರಿಗೆ ಸೇರಿದ ಪೆಟ್ರೋಲ್‌ ಪಂಪ್‌ ಮೇಲೆಯೂ ಬರೇಲಿ ಅಭಿವೃದ್ಧಿ ಪ್ರಾಧಿಕಾರವು ಬುಲ್ಡೋಜರ್‌ ಚಲಾಯಿಸಿದ್ದರು. ಪೊಲೀಸರ ತನಿಖೆಯು ನಿಧಾನಗತಿಯಲ್ಲಿ ಸಾಗುತ್ತಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಕ್ರೈಂ ಬ್ರಾಂಚಿಗೆ ರವಾನಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್