ಈದ್ ಎಂದರೆ ಸಂತಸ, ಅದುವೇ ಪಾಕಿಸ್ತಾನ; ಫೇಸ್‌ಬುಕ್‌ನಲ್ಲಿ ಬರೆದ ಇಬ್ಬರು ವಿದ್ಯಾರ್ಥಿಗಳ ಮೇಲೆ ಕೇಸ್!

Suvarna News   | Asianet News
Published : May 29, 2020, 09:18 PM IST
ಈದ್ ಎಂದರೆ ಸಂತಸ, ಅದುವೇ ಪಾಕಿಸ್ತಾನ; ಫೇಸ್‌ಬುಕ್‌ನಲ್ಲಿ ಬರೆದ  ಇಬ್ಬರು ವಿದ್ಯಾರ್ಥಿಗಳ ಮೇಲೆ ಕೇಸ್!

ಸಾರಾಂಶ

ಪಾಕಿಸ್ತಾನವೇ ವಿಶ್ವದ ಸುಂದರ ದೇಶ, ಶಾಂತಿಯುತ ದೇಶ, ಆರ್ಥಿಕ ಸಮೃದ್ಧಿಯ ದೇಶ ಎಂದು ಭಾರತದಲ್ಲಿ ಪಾಕ್ ಪರ ನಿಂತ ಹಲವರ ಧನಿಗಳು ಕೊರೋನಾ ವೈರಸ್ ಆರ್ಭಟದಲ್ಲಿ ತಣ್ಣಗಾಗಿತ್ತು. ಇದೀಗ ಮತ್ತೆ ಪಾಕಿಸ್ತಾನ ಪರ ಹೇಳಿಕೆ, ಬರಹಗಳು ಕಾಣಿಸತೊಡಗಿದೆ. ಹೀಗೆ ಪಾಕ್ ಪ್ರೀತಿ ತೋರಿದ ಇಬ್ಬರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಆಲಿಘಡ(ಮೇ.29): ಭಾರತದಲ್ಲಿ ಹುಟ್ಟಿ ಬೆಳೆದು, ಭಾರತದ ಸೌಲಭ್ಯಗಳನ್ನು ಉಪಯೋಗಿಸಿ, ಭಾರತದಲ್ಲಿ ಪ್ರಾಥಮಿಕ ಶಿಕ್ಷಗಳನ್ನು ಪೂರೈಸಿ, ಕಾಲೇಜು ಮಟ್ಟಿಲು ಹತ್ತಿದಾಗ ದೂರದ ಪಾಕಿಸ್ತಾನವೇ ಹಲವರಿಗೆ ಸ್ವರ್ಗವಾಗಿ ಕಾಣುತ್ತೆ. ಭಾರತದಲ್ಲಿರುವ ಕೆಲವರಿಗೆ ಪಾಕಿಸ್ತಾನ ಪ್ರೀತಿ ತುಸು ಹೆಚ್ಚೇ ಇದೆ. ಹೀಗಾಗಿ ಇಂತಹ ಘಟನೆಗಳು ನಡೆಯುತ್ತಲೇ ಇದೆ.  ಬಹಿರಂಗ ಸಭೆಯಲ್ಲಿ, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ಜಿಂದಾಬಾದ್ ಹೇಳಿಕೆಗಳು ಸೃಷ್ಟಿಸಿದ ವಿವಾದ ಅಷ್ಟಿಷ್ಟಲ್ಲ.  ಇದೀಗ ಸಂತಸ, ಖುಷಿ ಎಂದರೆ ಪಾಕಿಸ್ತಾನ ಎಂದು ಆಲಿಘಡ ಮುಸ್ಲಿಂ ವಿಶ್ವಿವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಇವರಿಬ್ಬರು ಪೊಲೀಸರ ಅತಿಥಿಗಳಾಗಿದ್ದಾರೆ. 

‘ಫ್ರೀ ಕಾಶ್ಮೀರ’: ಆರ್ದ್ರಾಗೆ ಷರತ್ತು ಬದ್ಧ ಜಾಮೀನು ಮಂಜೂರು

ಇತ್ತೀಚೆಗಷ್ಟೇ ಮುಸ್ಲಿಂ ಬಾಂಧವರ ಈದ್ ಹಬ್ಬವನ್ನ ಆಚರಿಸಿದ್ದಾರೆ. ಕೊರೋನಾ ವೈರಸ್ ಕಾರಣ ಸಾಮೂಹಿಕ ಪ್ರಾರ್ಥನೆ ಮಾಡುವ ಅವಕಾಶ ಇರಲಿಲ್ಲ. ಹೀಗಾಗಿ ಎಲ್ಲರೂ ತಮ್ಮ ತಮ್ಮ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದ್ದರು. ಹೀಗೆ ಆಲಿಘಡ ಮುಸ್ಲೀಂ ಯುನಿವರ್ಸಿಟಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಈದ್ ಹಬ್ಬದಂದು, ಭಾರತ ವಿರೋಧಿ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ. ಈದ್ ಹಬ್ಬ ಎಂದರೆ ಸಂತಸ, ಖುಷಿ ಎಂದರ್ಥ. ಈ ಸಂತೋಷ, ಖುಷಿ ಎಂದರೆ ಪಾಕಿಸ್ತಾನ ಎಂದು ಫೇಸ್‌ಬುಕ್‌ನಲ್ಲಿ ಬರಹ ಪೋಸ್ಟ್ ಮಾಡಿದ್ದರು.

ದೆಹಲಿ ಹಿಂಸಾಚಾರಕ್ಕೆ ಲಿಂಕ್ ಪಿಎಫ್ಐ ಕಾರ್ಯಕರ್ತನ ಬಂಧನ!

ಇಬ್ಬರು ವಿದ್ಯಾರ್ಥಿಗಳ ವಿರುದ್ಧ ದೇಶವಿರೋಧಿ, ಶಾಂತಿ ಕದಡುವ, ಐಕ್ಯತೆ ಭಂಗ ತಂದ ಆರೋಪ ಮೇಲೆ ಐಪಿಎಸ್ ಸೆಕ್ಷನ್ 153A, 153B ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಇದೇ ವೇಳೆ ವಿಶ್ವವಿದ್ಯಾಲಯದ ಕಾನೂನಿಡಿಯಲ್ಲಿ ಇಬ್ಬರು ವಿದ್ಯಾರ್ಥಿಗಳ ವಿರುದ್ದ ಕಟ್ಟು ನಿಟ್ಟಿನ ಕ್ರಮ ತೆಗೆದಕೊಳ್ಳಲಿದ್ದೇವೆ ಎಂದು ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ವಕ್ತಾರ ಶೆಫಿ ಕಿದ್ವಾಯಿ ಹೇಳಿದ್ದಾರೆ.

ಇದರ ನಡುವೆ ಆಲಿಘಡ ಮುಸ್ಲಿಂ ಯುನಿವರ್ಸಿಟಿ ವಿದ್ಯಾರ್ಥಿ ನಾಯಕ ಫರಾನ್ ಜುಬೇರಿಯನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 15 ರಂದು ನಡೆದ ಪೌರತ್ವ ವಿರೋಧಿ ಹೋರಾಟವನ್ನು ಹಿಂಸಾರೂಪಕ್ಕೆ ತಿರುಗಿಸಿದ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಸೇರಿದಂತೆ ಆಲಿಘಡ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ 11 ಕೇಸ್ ದಾಖಲಾಗಿತ್ತು. ಇದೀಗ ತಲೆಮರೆಸಿಕೊಂಡಿದ್ದ ಫರಾನ್ ಜುಬೇರಿಯನ್ನು ಪೊಲೀಸರು ಅರಸ್ಟ್ ಮಾಡಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ