ಅನಿಲ್ ಅಂಬಾನಿಗೆ ಇ.ಡಿ. ಶಾಕ್‌ : ₹7,500 ಕೋಟಿ ಮೌಲ್ಯದ 42 ಆಸ್ತಿ ಮುಟ್ಟುಗೋಲು

Kannadaprabha News   | Kannada Prabha
Published : Nov 04, 2025, 06:20 AM IST
anil ambani

ಸಾರಾಂಶ

ದೇಶದ ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಅವರ ಸಂಕಷ್ಟಗಳು ಮುಂದುವರಿದಿವೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ರಿಲಯನ್ಸ್‌ ಗ್ರೂಪ್‌ ಮುಖ್ಯಸ್ಥರಾದ ಅನಿಲ್‌ ಅವರಿಗೆ ಸಂಬಂಧಿಸಿದ 7,500 ಕೋಟಿ ರು.ಗೂ ಅಧಿಕ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ನವದೆಹಲಿ : ದೇಶದ ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಅವರ ಸಂಕಷ್ಟಗಳು ಮುಂದುವರಿದಿವೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ರಿಲಯನ್ಸ್‌ ಗ್ರೂಪ್‌ ಮುಖ್ಯಸ್ಥರಾದ ಅನಿಲ್‌ ಅವರಿಗೆ ಸಂಬಂಧಿಸಿದ 7,500 ಕೋಟಿ ರು.ಗೂ ಅಧಿಕ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಮುಂಬೈನ ಪಾಲಿ ಹಿಲ್‌ನಲ್ಲಿರುವ ಅಂಬಾನಿ ಕುಟುಂಬದ ಮನೆ ಸೇರಿದಂತೆ ಅವರ ಸಮೂಹ ಕಂಪನಿಗಳ ಒಟ್ಟು 42 ವಸತಿ ಮತ್ತು ವಾಣಿಜ್ಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಬಗ್ಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ 4 ತಾತ್ಕಾಲಿಕ ಆದೇಶಗಳನ್ನು ಇ.ಡಿ ಹೊರಡಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

ಆಸ್ತಿಗಳ ಒಟ್ಟು ಮೌಲ್ಯ 3,084 ಕೋಟಿ ರುಪಾಯಿ

ದೆಹಲಿಯ ಮಹಾರಾಜ ರಣಜಿತ್ ಸಿಂಗ್ ಮಾರ್ಗದಲ್ಲಿರುವ ರಿಲಯನ್ಸ್‌ ಸೆಂಟರ್‌ಗೆ ಸೇರಿದ ಜಮೀನು ಮತ್ತು ನೋಯ್ಡಾ, ಗಾಜಿಯಾಬಾದ್‌, ಮುಂಬೈ, ಪುಣೆ, ಠಾಣೆ, ಹೈದರಾಬಾದ್, ಚೆನ್ನೈ ಮತ್ತು ಪೂರ್ವ ಗೋದಾವರಿಯಲ್ಲಿರುವ ಆಸ್ತಿಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮೂಲಗಳ ಪ್ರಕಾರ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಒಟ್ಟು ಮೌಲ್ಯ 3,084 ಕೋಟಿ ರುಪಾಯಿ ಆಗಿದೆ.

ಆರೋಪವೇನು?

2017ರಿಂದ 2019ರ ಅವಧಿಯಲ್ಲಿ ಅನಿಲ್ ಅಂಬಾನಿಯವರಿಗೆ ಸೇರಿದ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ನಲ್ಲಿ (ಆರ್​ಎಚ್​ಎಫ್​ಎಲ್) 2,965 ಕೋಟಿ ರು. ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್‌ನಲ್ಲಿ (ಆರ್​ಸಿಎಫ್​ಎಲ್) 2,045 ಕೋಟಿ ರು.ಗಳನ್ನು ಯೆಸ್ ಬ್ಯಾಂಕ್ ಹೂಡಿಕೆ ಮಾಡಿತ್ತು. ಆದರೆ, ಈ ಕಂಪನಿಗಳು ನಷ್ಟ ಅನುಭವಿಸಿದ ಕಾರಣ 2019ರ ಡಿಸೆಂಬರ್​​ನಲ್ಲಿ ಆ ಹೂಡಿಕೆಗಳು ಅನುತ್ಪಾದಕ ಎನ್ನಿಸಿಕೊಂಡಿದ್ದವು. ಅಲ್ಲದೆ, ಅನಿಲ್‌ ಅವರ ಕಂಪನಿಗಳು ತಾವು ಪಡೆದ ಹಣವನ್ನು ಮೂಲ ಉದ್ದೇಶ ಬಿಟ್ಟು ಅಕ್ರಮವಾಗಿ ಅನ್ಯ ಉದ್ದೇಶಕ್ಕೆ ಬಳಸಿಕೊಂಡ ಆರೋಪವನ್ನೂ ಹೊತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!