
ನವದೆಹಲಿ :ಡಿಜಿಟಲ್ ಅರೆಸ್ಟ್ ಮೂಲಕ ದೇಶದಲ್ಲಿ 3 ಸಾವಿರ ಕೋಟಿ ರು.ಗೂ ಹೆಚ್ಚು ಹಣ ವಂಚನೆಯಾಗಿರುವ ಕುರಿತು ಸುಪ್ರೀಂ ಕೋರ್ಟ್ ತೀವ್ರ ಆಘಾತ ವ್ಯಕ್ತಪಡಿಸಿದೆ. ಇದನ್ನು ವಜ್ರಮುಷ್ಠಿಯಿಂದ ನಿಭಾಯಿಸುವ ಅಗತ್ಯವಿದೆ ಎಂದಿರುವ ಅದು, ನ.10ರಂದು ಕೆಲವು ನಿರ್ದೇಶನ ನೀಡುವುದಾಗಿ ಹೇಳಿದೆ.
ಸಿಬಿಐ ಮತ್ತು ಕೇಂದ್ರ ಗೃಹ ಸಚಿವಾಲಯವು ಮುಚ್ಚಿದ ಲಕೋಟೆಯಲ್ಲಿ ನೀಡಿದ ವರದಿಯನ್ನು ಪರಿಶೀಲಿಸಿದ ಬಳಿಕ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಮತ್ತು ಜಯಮಾಲ್ಯ ಬಾಗ್ಚಿ ಅವರಿದ್ದ ಪೀಠವು ಡಿಜಿಟಲ್ ಅರೆಸ್ಟ್ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ.
‘ಹಿರಿಯ ನಾಗರಿಕರು ಸೇರಿ ದೇಶಾದ್ಯಂತ 3 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಸಂತ್ರಸ್ತರು ಕಳೆದುಕೊಂಡಿರುವುದು ಆಘಾತಕಾರಿ ವಿಚಾರ. ನಾವು ಕಠಿಣ ಆದೇಶ ಹೊರಡಿಸದೇ ಹೋದರೆ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ. ನ್ಯಾಯಾಂಗದ ಆದೇಶಗಳ ಮೂಲಕ ನಾವು ನಮ್ಮ ಏಜೆನ್ಸಿಗಳ ಕೈಬಲಪಡಿಸಬೇಕು. ನಾವು ವಜ್ರಮುಷ್ಠಿಯಿಂದ ಈ ಅಪರಾಧವನ್ನು ನಿಭಾಯಿಸಲು ಬದ್ಧವಾಗಿದ್ದೇವೆ’ ಎಂದು ಪೀಠ ತಿಳಿಸಿತು. ಜತೆಗೆ, ಪ್ರಕರಣದ ಮುಂದಿನ ವಿಚಾರಣೆಯನ್ನು ನ.10ರಂದು ನಿಗದಿಪಡಿಸಿದ ಕೋರ್ಟ್, ಆ ವೇಳೆ ಕೆಲ ನಿರ್ದೇಶನಗಳನ್ನು ನೀಡುವುದಾಗಿ ತಿಳಿಸಿತು.
ಡಿಜಿಟಲ್ ಅರೆಸ್ಟ್ ಸೈಬರ್ ಕ್ರೈಂನ ಬೆಳೆಯುತ್ತಿರುವ ರೂಪವಾಗಿದೆ. ವಂಚಕರು ಪೊಲೀಸರು, ಕೋರ್ಟ್ ಅಧಿಕಾರಿಗಳು ಅಥವಾ ಸರ್ಕಾರಿ ಏಜೆನ್ಸಿಗಳ ಸಿಬ್ಬಂದಿ ರೀತಿ ಪೋಸ್ ನೀಡಿ ಆಡಿಯೋ ಮತ್ತು ವಿಡಿಯೋ ಕಾಲ್ ಮಾಡುತ್ತಾರೆ. ನಂತರ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಆತಂಕ ಹುಟ್ಟಿಸಿ ಅಮಾಯಕ ಜನರಿಂದ ಹಣ ಪೀಕುತ್ತಾರೆ. ಮುಖ್ಯವಾಗಿ ಹಿರಿಯ ನಾಗರಿಕರನ್ನೇ ಹೆಚ್ಚಾಗಿ ಗುರಿ ಮಾಡಿಕೊಂಡು ಈ ರೀತಿ ವಂಚನೆ ಮಾಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ