ಅಕ್ರಮ ಶುಲ್ಕ ವಸೂಲಿಗೆ ದೇಶದ 100 ಟೋಲ್‌ಗಳಲ್ಲಿ ಅಕ್ರಮ ಅಪ್ಲಿಕೇಶನ್‌

Published : Sep 04, 2026, 08:51 AM IST
pantheerankavu toll plaza

ಸಾರಾಂಶ

ದೇಶಾದ್ಯಂತ 100 ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಇಲ್ಲದ ವಾಹನಗಳಿಂದ ಅಕ್ರಮವಾಗಿ ಶುಲ್ಕ ವಸೂಲಿ ಮಾಡಲು ಎರಡು ಅನಧಿಕೃತ ಆ್ಯಪ್‌ಗಳನ್ನು ಬಳಸಲಾಗುತ್ತಿತ್ತು. ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆಯಿಂದ ಈ ಕೋಟ್ಯಂತರ ರೂಪಾಯಿಗಳ ವಂಚನೆ ಬೆಳಕಿಗೆ ಬಂದಿದೆ.

ನವದೆಹಲಿ (ಸೆ.4): ದೇಶಾದ್ಯಂತ ಹೆದ್ದಾರಿಯ 100 ಟೋಲ್ ಪ್ಲಾಜಾಗಳಲ್ಲಿ ಫಾಸ್ಟಾ ಗ್ ಹೊಂದಿರದ ವಾಹನಗಳಿಂದ ಅಕ್ರಮ ಶುಲ್ಕ ವಸೂಲಿಗಾಗಿ 2 ಅನಧಿಕೃತ ಆ್ಯಪ್‌ಗಳನ್ನು ಬಳಸಲಾಗುತ್ತಿತ್ತು ಎನ್ನುವುದು ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆಯಿಂದ ತಿಳಿದುಬಂದಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ನಡೆಸುತ್ತಿರುವ ಟೋಲ್‌ಗಳಲ್ಲಿ ಅನಧಿಕೃತ ಶುಲ್ಕ ವಸೂಲಿ ಆಗುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಹೀಗಾಗಿ ಇ.ಡಿ. ಸೆ.2ರಂದು ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಒಟ್ಟು 14 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಆಗ ಅಕ್ರಮ ಬೆಳಕಿಗೆ ಬಂದಿದೆ. ಇಲ್ಲಿ ವಾಹನಗಳ ಮೇಲೆ ಫಾಸ್ಟ್ ಟ್ಯಾಗ್ ಅಂಟಿಸಿರದ ಚಾಲಕರಿಂದ ಶುಲ್ಕ ವಸೂಲಿ ಮಾಡಲು ಮೊಬ್‌ಡೇಟಾ, ಎನಿ ಎನ್ನುವ ಆ್ಯಪ್ ಬಳಸಲಾ ಗುತ್ತಿತ್ತು. ಇದರಿಂದ ಕೋಟ್ಯಂತರ ರು.ಗಳನ್ನು ಅನಧಿಕೃತ ಟೋಲ್ ರಶೀದಿಗಳಲ್ಲಿ ದಾಖಲಿಸಲಾಗಿತ್ತು ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

GSLV-F17 Launch: ಇಸ್ರೋ ಮತ್ತೊಂದು ಮೈಲಿಗಲ್ಲು, ಯಶಸ್ವಿಯಾಗಿ ಕಕ್ಷೆ ಸೇರಿದ ಭಾರತದ ಪ್ರಥಮ ಇಮೇಜಿಂಗ್ ಸ್ಯಾಟಲೈಟ್!
ಜಿಡಿಪಿ ಬೆಳವಣಿಗೆ: ಕಾಂಗ್ರೆಸ್‌-ಬಿಜೆಪಿ ನಡುವೆ ಭಾರೀ ಜಟಾಪಟಿ