ಹಸು ಸಾಕುವವರಿಗೆ ಮಾತ್ರ ಟಿಕೆಟ್‌ ನೀಡಿ: ಮ.ಪ್ರದೇಶ ಸಚಿವ!

Published : Aug 17, 2021, 01:05 PM IST
ಹಸು ಸಾಕುವವರಿಗೆ ಮಾತ್ರ ಟಿಕೆಟ್‌ ನೀಡಿ: ಮ.ಪ್ರದೇಶ ಸಚಿವ!

ಸಾರಾಂಶ

* ಗೋಸಾಗಣೆ ಮಾಡುತ್ತಿರುವವರಿಗೆ ಮಾತ್ರವೇ ಯಾವುದೇ ಚುನಾವಣೆಯಲ್ಲಿ ಟಿಕೆಟ್‌ ನೀಡಬಹುದು * ಇಂಧನ ಖಾತೆ ಸಚಿವ ಹರ್‌ದೀಪ್‌ಸಿಂಗ್‌ ಚುನಾವಣಾ ಆಯೋಗಕ್ಕೆ ಸಲಹೆ * ಗೋವು ಸಾಕಲು ನಿರಾಕರಿಸುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಭಾಗವಹಿಸದಂತೆ ಕಾನೂನು 

ಭೋಪಾಲ್‌(ಆ.17): ಗೋಸಾಗಣೆ ಮಾಡುತ್ತಿರುವವರಿಗೆ ಮಾತ್ರವೇ ಯಾವುದೇ ಚುನಾವಣೆಯಲ್ಲಿ ಟಿಕೆಟ್‌ ನೀಡಬಹುದು ಎಂಬ ಕಾನೂನು ರೂಪಿಸಬೇಕೆಂದು ಎಂದು ಮಧ್ಯಪ್ರದೇಶ ನವೀಕರಿಸಬಹುದಾದ ಇಂಧನ ಖಾತೆ ಸಚಿ ಹರ್‌ದೀಪ್‌ಸಿಂಗ್‌ ಚುನಾವಣಾ ಆಯೋಗಕ್ಕೆ ಸಲಹೆ ನೀಡಿದ್ದಾರೆ.

ಗೋವು ಸಾಕಲು ನಿರಾಕರಿಸುವ ಅಭ್ಯರ್ಥಿಗಳು ಚುನಾವಣೆಯಲ್ಲಿ ಭಾಗವಹಿಸದಂತೆ ಕಾನೂನು ರೂಪಿಸಬೇಕು. ಕೃಷಿ ಉತ್ಪನ್ನಗಳನ್ನ ಮಾರುವ ಮತ್ತು ಕೊಳ್ಳುವ ಜನರಿಗೆ ಗೋ ಸಾಕಣೆ ಕಡ್ಡಾಯಗೊಳಿಸಬೇಕು.

ಹಸು ಸಾಕಲು ಸಾಕಲು ಸರ್ಕಾರಿ ಉದ್ಯೋಗಿಗಳಿಗೆ ಸಾಧ್ಯವಿಲ್ಲ ಹಾಗಾಗಿ ಮಾಸಿಕ 25 ಸಾವಿರಕ್ಕಿಂತ ಹೆಚ್ಚು ಸಂಬಳ ಪಡೆಯುವ ಸರ್ಕಾರಿ ಉದ್ಯೋಗಿಗಳಿಂದ ಮಾಸಿಕ 500 ರು.ಗಳನ್ನು ಸಂಗ್ರಹಿಸಿ ಗೋವು ಸಾಕುವವರಿಗೆ ನೀಡಬೇಕು ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ