ಭಾರತಕ್ಕೆ ತಟ್ಟಿದ ಭೂಕಂಪ ಆತಂಕ, ದಹೆಲಿ-ರಾಷ್ಟ್ರರಾಜಧಾನಿ ವ್ಯಾಪ್ತಿಯಲ್ಲಿ ಕಂಪಿಸಿದ ಭೂಮಿ

Published : Jan 11, 2024, 03:12 PM ISTUpdated : Jan 11, 2024, 03:24 PM IST
ಭಾರತಕ್ಕೆ ತಟ್ಟಿದ ಭೂಕಂಪ ಆತಂಕ, ದಹೆಲಿ-ರಾಷ್ಟ್ರರಾಜಧಾನಿ ವ್ಯಾಪ್ತಿಯಲ್ಲಿ ಕಂಪಿಸಿದ ಭೂಮಿ

ಸಾರಾಂಶ

ಜಪಾನ್ ಭೂಕಂಪದ ಆತಂಕ ಮಾಸುವು ಮುನ್ನವೇ ಇದೀಗ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ. ದೆಹಲಿಯಲ್ಲಿ ಜನರು ಆತಂಕಗೊಂಡಿದ್ದಾರೆ.  

ನವದೆಹಲಿ(ಜ.11) ವಿಶ್ವದ ಹಲವು ಭಾಗದಲ್ಲಿ ಇದೀಗ ಭೂಕಂಪದ ಆತಂಕ ಹೆಚ್ಚಾಗುತ್ತಿದೆ. ಜಪಾನ್ ಇತ್ತೀಚೆಗೆ ಭೀಕರ ಭೂಕಂಪಕ್ಕೆ ನಲುಗಿತ್ತು. ಇದೀಗ ಆತಂಕ ಭಾರತದಲ್ಲಿ ಶುರುವಾಗಿದೆ. ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ.  ಜಮ್ಮು ಮತ್ತು ಕಾಶ್ಮೀರದಲ್ಲೂ ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ಈ ಭೂಕಂಪನದ ಕೇಂದ್ರ ಬಿಂದು ಆಫ್ಘಾನಿಸ್ತಾನ ಎಂದು ಗುರುತಿಸಲಾಗಿದೆ. ಹೀಗಾಗಿ ಭಾರತ ಮಾತ್ರವಲ್ಲ ಪಾಕಿಸ್ತಾನದ ಕೆಲ ಪ್ರದೇಶಗಳಲ್ಲೂ ಭೂಕಂಪನವಾಗಿರುವ ಮಾಹಿತಿ ಲಭ್ಯವಾಗಿದೆ.

ಭಾರತದ ಘಾಜಿಯಾದಾಬಾದ್, ಫರಿದಾಬಾದ್, ಗುರುಗ್ರಾಂ ಸೇರಿದಂತೆ ದೆಹಲಿ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ. ಪಾಕಿಸ್ತಾನದ ಲಾಹೋರ್, ಇಸ್ಲಾಮಾಬಾದ್ ಹಾಗೂ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಕೆಲ ನಗರಗಳಲ್ಲೂ ಭೂಕಂಪನ ಅನುಭವವಾಗಿದೆ. ಆಫ್ಘಾನಿಸ್ತಾನದಲ್ಲಿ 220 ಕಿಲೋಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಎಂದು ಭಾರತೀಯ ಭೂಕಂಪ ಮಾಪನ ಕೇಂದ್ರ ವರದಿ ಮಾಡಿದೆ. 6.4 ರ ತೀವ್ರತೆಯ ಭೂಕಂಪನ ದಾಖಲಾಗಿದೆ. ದೆಹಲಿ ಹಾಗೂ ಪಾಕಿಸ್ತಾನದಲ್ಲಿ ಲಘು ಭೂಕಂಪನದ ಅನುಭವವಾಗಿದೆ.

ಭೂಕಂಪ ಪೀಡಿತ ಜಪಾನ್​ನಿಂದ ಸುರಕ್ಷಿತವಾಗಿ ವಾಪಸಾಗಿರುವೆ: ಕಂಗೆಟ್ಟ ಫ್ಯಾನ್ಸ್​ಗೆ ಜ್ಯೂ.ಎನ್​ಟಿಆರ್ ಮಾಹಿತಿ

2024ರ ಹೊಸ ವರ್ಷದ ಮೊದಲ ದಿನವೇ ಜಪಾನ್ ನಲುಗಿ ಹೋಗಿತ್ತು. ಜಪಾನ್‌ನಲ್ಲಿ  7.6 ತೀವ್ರತೆಯ ಭೂಕಂಪ ಸಭವಿಸಿತ್ತು. ಈ ಭೂಕಂಪದಲ್ಲಿ 126 ಮಂದಿ ಮೃತಪಟ್ಟಿದ್ದರು. 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.  ಈ ಪೈಕಿ 27 ಜನರು ತೀರ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಜಪಾನ್ ಸರ್ಕಾರ ತಿಳಿಸಿತ್ತು. ಈ ಭೂಕಂಪದಿಂದ 30,000 ಕುಟುಂಬಗಳು ನಿರಾಶ್ರಿತಗೊಂಡಿತ್ತು.  

 ಭೂಕಂಪದಿಂದಾಗಿ ಮನೆಗಳ ಜೊತೆಗೆ ರಸ್ತೆಯಲ್ಲಿ ನಿಂತಿದ್ದ ಕಾರುಗಳು ಸಹ ಬುಡಮೇಲಾಗಿತ್ತು. ಮಿನಿ ಸುನಾಮಿ ಕಾರಣ ಉಕ್ಕೇರಿದ್ದ ಸಮುದ್ರದಲ್ಲಿ ಹಡಗುಗಳೂ ಸಹ ಮುಳುಗಡೆಗೊಂಡಿತ್ತು.  ಹಲವು ಪ್ರದೇಶಗಳಲ್ಲಿ ವಿದ್ಯುತ್‌, ನೀರು ಮತ್ತು ದೂರವಾಣಿ ಸೇವೆಗಳನ್ನುಸ್ಥಗಿತಗೊಂಡಿತ್ತು. 

ಹೊಸ ವರ್ಷ ಸಂಭ್ರಮಾಚರಣೆಗೂ ಮುನ್ನ ಭಾರತಕ್ಕೆ ಆಘಾತ, ಕಾಶ್ಮೀರದ ಕುಪ್ವಾರದಲ್ಲಿ ಭೂಕಂಪ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!
ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಕೋಕಾ ಕೋಲಾ ಕಂಪನಿ ಚಾರ್ಟೆಡ್ ಅಕೌಂಟೆಂಟ್ ಹಠಾತ್ ಸಾವು