
ನವದೆಹಲಿ (ಜನವರಿ 11, 2024): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಾಗಲೀ ಅಥವಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಾಗಲೀ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಪಗೆಂಡಾಕ್ಕೆ ಸರಿಸಾಟಿಯಲ್ಲ ಎಂದು ಸ್ವತ: ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹೇಳಿಕೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಕಾರ್ತಿ ನೀಡಿದ ಈ ಹೇಳಿಕೆಯಿಂದ ಕಾಂಗ್ರೆಸ್‌ಗೆ ಭಾರೀ ಮುಜುಗರವಾಗಿದ್ದು, ತಮಿಳುನಾಡು ಕಾಂಗ್ರೆಸ್ ಸಮಿತಿ ಕಾರ್ತಿಗೆ ಶೋಕಾಸ್ ನೋಟಿಸ್ ನೀಡಿದೆ.
ಇದನ್ನು ಓದಿ: ಇಂದೋರ್, ಸೂರತ್ ಭಾರತದ ಸ್ವಚ್ಛ ನಗರಗಳು: ಸ್ವಚ್ಛ ಸರ್ವೇಕ್ಷಣ್ 2023 ರಲ್ಲಿ ಅಗ್ರಸ್ಥಾನ
ರಾಹುಲ್ ಗಾಂಧಿ ಪ್ರಬಲ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಪ್ರಚಾರದ ವಿಷಯದಲ್ಲಿ ದೇಶದಲ್ಲಿ ಇಂದಿನ ವಾಸ್ತವತೆಯನ್ನು ನೋಡಿದರೆ ಪ್ರಧಾನಿ ಮೋದಿ ಪ್ರಚಾರಕ್ಕೆ ಯಾರೂ ಸರಿಸಾಟಿಯಿಲ್ಲ ಎಂದು ನಾನು ಹೇಳುತ್ತೇನೆ’ ಎಂದಿದ್ದಾರೆ.
ಅಲ್ಲದೇ ನನ್ನ ತಿಳುವಳಿಕೆಯ ಪ್ರಕಾರ ವ್ಯಕ್ತಿತ್ವ ಸಮರದಲ್ಲಿ ಮೋದಿಯನ್ನು ಸೋಲಿಸುವುದು ಸಾಧ್ಯವಿಲ್ಲ. ಮೋದಿ ಹೆಸರು ತುಂಬಾ ಪವರ್‌ಫಲ್ ಆಗಿದೆ. ಬಹಳ ಹಿಂದಿನಿಂದ ಮೋದಿ ಪ್ರಚಾರ ಬೇರೂರಿದೆ’ ಎಂದಿದ್ದಾರೆ. ಜೊತೆಗೆ ಆದಷ್ಟು ಬೇಗ ಪಕ್ಷ ಪ್ರಧಾನಿ ಅಭ್ಯರ್ಥಿ ಘೋಷಿಸಬೇಕು ಎಂದಿದ್ದಾರೆ.
ಇದನ್ನು ಓದಿ: ರಾಮ ಮಂದಿರ, ಹೊಸ ಸಂಸತ್, ಜಿ20; ಕಾಂಗ್ರೆಸ್ ಬಾಯ್ಕಾಟ್ ಇತಿಹಾಸ ಬಿಚ್ಚಿಟ್ಟ ಬಿಜೆಪಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ