ಪಳನಿಸ್ವಾಮಿಯೇ AIADMK ಬಾಸ್‌: ಮದ್ರಾಸ್‌ ಹೈಕೋರ್ಟ್‌ ತೀರ್ಪಿನಿಂದ ಓಪಿಎಸ್‌ಗೆ ಹಿನ್ನೆಡೆ

Published : Sep 03, 2022, 01:25 PM ISTUpdated : Sep 03, 2022, 01:26 PM IST
ಪಳನಿಸ್ವಾಮಿಯೇ AIADMK ಬಾಸ್‌: ಮದ್ರಾಸ್‌ ಹೈಕೋರ್ಟ್‌ ತೀರ್ಪಿನಿಂದ ಓಪಿಎಸ್‌ಗೆ ಹಿನ್ನೆಡೆ

ಸಾರಾಂಶ

ಪಳನಿಸ್ವಾಮಿಯೇ ಎಐಎಡಿಎಂಕೆಯ ಮುಖ್ಯಸ್ಥ ಎಂದು ಮದ್ರಾಸ್‌ ಹೈಕೋರ್ಟ್‌ ದ್ವಿಸದಸ್ಯ ಪೀಠ ತೀರ್ಪು ನೀಡಿದೆ. ಈ ಹಿನ್ನೆಲೆ ಓ. ಪನ್ನೀರಸೆಲ್ವಂಗೆ ಹಿನ್ನೆಡೆಯಾಗಿದೆ. 

ಅಣ್ಣಾಡಿಎಂಕೆಯ (AIADMK) ಪ್ರಧಾನ ಕಾರ್ಯದರ್ಶಿ (ಮುಖ್ಯಸ್ಥ) ಪಟ್ಟ ಮತ್ತೆ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿಗೆ ಒಲಿದು ಬಂದಿದೆ. ಈ ಮೂಲಕ ಪಕ್ಷಕ್ಕೆ ಏಕ ನಾಯಕತ್ವ ಬೇಡ ಎಂದು ಆಗ್ರಹಿಸುತ್ತಿದ್ದ ಓ. ಪನ್ನೀರಸೆಲ್ವಂಗೆ ಮತ್ತೆ ಹಿನ್ನಡೆಯಾಗಿದೆ. ಪಳನಿಸ್ವಾಮಿ ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿ ಎಂದು ಘೋಷಿಸಿ ಜುಲೈ 11ರಂದು ನಡೆದ ಪಕ್ಷದ ಸಭೆ ನಿರ್ಣಯಿಸಿತ್ತು. ಆದರೆ ಈ ನಿರ್ಧಾರಕ್ಕೆ ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್‌ (Madras High Court) ಮಧ್ಯಂತರ ತಡೆ ನೀಡಿತ್ತು ಹಾಗೂ ಪನ್ನೀರಸೆಲ್ವಂ ಮತ್ತು ಪಳನಿಸ್ವಾಮಿ ಅವರು ಈ ಹಿಂದಿನಂತೆಯೇ ಜಂಟಿ ಸಂಯೋಜಕರಾಗಿ ಮುಂದುವರಿಯಬೇಕು ಎಂದು ಸೂಚಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಪಳನಿಸ್ವಾಮಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಚ್‌ ವಿಭಾಗೀಯ ಪೀಠ (Division Bench) ಮಾನ್ಯ ಮಾಡಿದೆ ಹಾಗೂ ಏಕಸದಸ್ಯ ಪೀಠ ನೀಡಿದ್ದ ಆದೇಶ ರದ್ದುಗೊಳಿಸಿದೆ. ಹೀಗಾಗಿ ಪಳನಿಸ್ವಾಮಿಗೆ ಮತ್ತೆ ಪಕ್ಷದ ಮುಖ್ಯಸ್ಥ ಹುದ್ದೆ ಒಲಿದುಬಂದಿದೆ.

ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಎಂ. ದುರೈಸ್ವಾಮಿ ಮತ್ತು ಸುಂದರ್ ಮೋಹನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಹೈಕೋರ್ಟ್‌ ಏಕ ನ್ಯಾಯಮೂರ್ತಿಗಳ ಆದೇಶವನ್ನು ರದ್ದುಗೊಳಿಸಿತು. ಜುಲೈ 11 ರಂದು ಎಐಎಡಿಎಂಕೆಯ ಜನರಲ್ ಕೌನ್ಸಿಲ್ (General Council) (ಜಿಸಿ) ಸಭೆಯಲ್ಲಿ, ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ (Edappady K Palaniswami) (ಇಪಿಎಸ್) ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ, ಉನ್ನತ ಹುದ್ದೆಗೆ ಆಯ್ಕೆ ಮಾಡಲಾಯಿತು. ಹಾಗೂ, ಪನ್ನೀರಸೆಲ್ವಂ (OPS) ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಹೈಕೋರ್ಟ್‌ನ ಹೊಸ ಆದೇಶದೊಂದಿಗೆ ಪಳನಿಸ್ವಾಮಿ ಅವರು ಎಐಎಡಿಎಂಕೆಯ ಏಕೈಕ, ಸರ್ವೋಚ್ಚ ನಾಯಕನ ಸ್ಥಾನವನ್ನು ಸ್ಥಾಪಿಸಿದ್ದಾರೆ.

ಎಐಎಡಿಎಂಕೆಯಲ್ಲಿ ಬಿರುಕು, ಪನ್ನೀರಸೆಲ್ವಂ ಸೇರಿ ನಾಲ್ವರ ಉಚ್ಚಾಟನೆ, ಪ್ರಧಾನ ಕಚೇರಿ ಸೀಲ್!

ಜಸ್ಟೀಸ್‌ ಜಿ. ಜಯಚಂದ್ರನ್ ಅವರ ಆಗಸ್ಟ್ 17 ರ ಆದೇಶವನ್ನು ವಿಭಾಗೀಯ ಪೀಠವು ರದ್ದುಗೊಳಿಸಿದೆ. ಈ ಹಿಂದೆ ಪನ್ನೀರಸೆಲ್ವಂ ಅವರು ಸಂಯೋಜಕರಾಗಿದ್ದರು ಮತ್ತು ಪಳನಿಸ್ವಾಮಿ ಅವರು ಜಂಟಿ ಸಮನ್ವಯಾಧಿಕಾರಿಯಾಗಿದ್ದರು ಹಾಗೂ ಆಗಿನ ದ್ವಂದ್ವ ಅಧಿಕಾರ ರಚನೆಯನ್ನು ಕಾಪಾಡಿಕೊಳ್ಳಲು ಏಕ ನ್ಯಾಯಮೂರ್ತಿಗಳ ಪೀಠ ನಿರ್ದೇಶನ ನೀಡಿತ್ತು. ತನ್ನ 127 ಪುಟಗಳ ಆದೇಶದಲ್ಲಿ, ಮೇಲ್ಮನವಿದಾರ ಇಪಿಎಸ್ ಮತ್ತು ಪ್ರತಿವಾದಿ ಒಪಿಎಸ್ ಎಂದಿಗೂ ಒಟ್ಟಿಗೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಮತ್ತು ಪಕ್ಷದ ವಿಷಯಗಳಲ್ಲಿ ಅಡೆತಡೆ ಇದೆ ಎಂದು ಪೀಠವು ಗಮನಿಸಿದೆ. ಇಬ್ಬರು ನಾಯಕರು ಒಟ್ಟಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದೆ ಮತ್ತು ಬಿಕ್ಕಟ್ಟು ಉಂಟಾಗಿರುವುದರಿಂದ ಕಾರ್ಯಕಾರಿ ಅಥವಾ ಜನರಲ್ ಕೌನ್ಸಿಲ್ ಸಭೆಗಳನ್ನು ಜಂಟಿಯಾಗಿ ನಡೆಸುವಂತೆ ಏಕ ನ್ಯಾಯಮೂರ್ತಿಗಳ ನಿರ್ದೇಶನವು ಕಾರ್ಯಸಾಧ್ಯವಾಗುವುದಿಲ್ಲ.

ಈ ನಿರ್ದೇಶನವು ಪಕ್ಷದಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದ "ಕ್ರಿಯಾತ್ಮಕ ಬಿಕ್ಕಟ್ಟನ್ನು" ಹೆಚ್ಚಿಸಿದೆ ಎಂದು ಪೀಠ ಹೇಳಿದೆ. 11 ಜುಲೈ 2022 ರಂದು ನಡೆದ ಜನರಲ್ ಕೌನ್ಸಿಲ್ ಸಭೆ ಸರಿಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಜುಲೈ ಸಭೆಯಲ್ಲಿ, ಪಳನಿಸ್ವಾಮಿ ಅವರು ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷವನ್ನು ಮುನ್ನಡೆಸಲು ಸಂಪೂರ್ಣ ಅಧಿಕಾರದೊಂದಿಗೆ ಆಯ್ಕೆಯಾಗಿದ್ದರು.

ಎಐಎಡಿಎಂಕೆಯ ಜನರಲ್ ಕೌನ್ಸಿಲ್ ಸದಸ್ಯರು ಪಕ್ಷದ ಪ್ರಾಥಮಿಕ ಸದಸ್ಯರನ್ನು ಪ್ರತಿನಿಧಿಸಿದರು ಮತ್ತು ಬಹುಪಾಲು ಜನರಲ್ ಕೌನ್ಸಿಲ್ ಸದಸ್ಯರು ಜುಲೈ 11 ರಂದು ಸಭೆಯನ್ನು ಕರೆಯಲು ವಿನಂತಿ ನೀಡಿದಾಗ ಮತ್ತು ಅಂಗೀಕರಿಸಿದ ನಿರ್ಣಯಗಳನ್ನು ಬೆಂಬಲಿಸಿದಾಗ, ಅನುಕೂಲತೆಯ ಸಮತೋಲನವು ಇಪಿಎಸ್ ಪರವಾಗಿರಬಹುದು ಮತ್ತು ಒಪಿಎಸ್ ಅಲ್ಲ ಎಂದೂ ಮದ್ರಾಸ್‌ ಹೈಕೋರ್ಟ್‌ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ. 

ಪಳನಿಸ್ವಾಮಿಗೆ AIADMK ನಾಯಕತ್ವ, ಪನೀರ್‌ಸೆಲ್ವಂ ಬೆಂಬಲಿಗರ ಮಾರಾಮಾರಿ!

ವಿನಂತಿ ಪತ್ರಕ್ಕೆ ಸಹಿ ಮಾಡಿದವರು, ತಾವು ಸಹಿ ಮಾಡಿಲ್ಲ ಎಂದು ಕೋರ್ಟ್‌ನಲ್ಲಿ  ಯಾವುದೇ ಸವಾಲು ಹಾಕಿಲ್ಲ. ಈ ಹಿನ್ನೆಲೆ, ಹೇಳಲಾದ ಪತ್ರವನ್ನು ಕಟ್ಟುಕಥೆ ಅಥವಾ ಅಸಲಿಯಲ್ಲ ಎಂದು ಪರಿಗಣಿಸಲಾಗುವುದಿಲ್ಲ. ಸಹಿಯನ್ನು ವಿವಾದಿಸಬಹುದಾದ ವ್ಯಕ್ತಿಯು, ಸಹಿ ಹಾಕಿದ ಆ ನಿರ್ದಿಷ್ಟ ವ್ಯಕ್ತಿಯಾಗಿಬೇಕೇ ಹೊರತು ಮೂರನೇ ವ್ಯಕ್ತಿಯಲ್ಲ ಎಂದೂ ಮದ್ರಾಸ್‌ ಹೈಕೋರ್ಟ್‌ ವಿಭಾಗೀಯ ಪೀಠ ಹೇಳಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!