Vaccine Death: ಮಗಳ ಸಾವಿಗೆ 1000 ಕೋಟಿ ರೂ. ಪರಿಹಾರ ಕೇಳಿದ ತಂದೆ: Bill Gatesಗೆ ನೋಟಿಸ್‌

Published : Sep 03, 2022, 12:29 PM ISTUpdated : Sep 03, 2022, 12:41 PM IST
Vaccine Death: ಮಗಳ ಸಾವಿಗೆ 1000 ಕೋಟಿ ರೂ. ಪರಿಹಾರ ಕೇಳಿದ ತಂದೆ: Bill Gatesಗೆ ನೋಟಿಸ್‌

ಸಾರಾಂಶ

ಕೋವಿಶೀಲ್ಡ್‌ ಲಸಿಕೆಯ ಅಡ್ಡ ಪರಿಣಾಮಗಳಿಂದ ತಮ್ಮ ಮಗಳು ಮೃತಪಟ್ಟಿದ್ದಾರೆ. ಈ ಹಿನ್ನೆಲೆ 1000 ಕೋಟಿ ರೂ. ಪರಿಹಾರ ನೀಡಬೇಕೆಂದು ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಂದೆ ವಾದ ಮಾಡಿದ್ದಾರೆ. 

ಕೋವಿಡ್‌ ಲಸಿಕೆ (Covid Vaccine) ಪಡೆದಿದ್ದರಿಂದಲೇ ಹಲವರು ಮೃತಪಟ್ಟಿದ್ದಾರೆ ಎಂದು ಕೆಲ ಜನರು ಆರೋಪಿಸುತ್ತಿರುತ್ತಾರೆ. ಆದರೂ, ಸಹ ಇದು ಈವರೆಗೆ ಸಾಬೀತಾಗಿಲ್ಲ. ಈಗ ಬಾಂಬೆ ಹೈಕೋರ್ಟ್‌ನಲ್ಲಿ (Bombay High Court) ಇದೇ ರೀತಿ, ತನ್ನ ಮಗಳು ಲಸಿಕೆಯ ಅಡ್ಡ ಪರಿಣಾಮಗಳಿಂದ  (Vaccine Side Effects) ಮೃತಪಟ್ಟಿದ್ದು, ಈ ಹಿನ್ನೆಲೆ ನಷ್ಟ ಪರಿಹಾರವಾಗಿ 1000 ಕೋಟಿ ರೂ. ಪರಿಹಾರ ಕೊಡಬೇಕೆಂದು ಆಗ್ರಹಿಸಿದ್ದಾರೆ.  ಕೋವಿಶೀಲ್ಡ್‌ನ (Covishield) ಅಡ್ಡ ಪರಿಣಾಮಗಳಿಂದ ತನ್ನ ಮಗಳು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ದಿಲೀಪ್ ಲುನಾವತ್ ಎಂಬುವವರು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆ  ಬಾಂಬೆ ಹೈಕೋರ್ಟ್ ಶುಕ್ರವಾರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute of India) (ಎಸ್‌ಐಐ) ಮತ್ತು ಮೈಕ್ರೋಸಾಫ್ಟ್ (Microsoft) ಸಂಸ್ಥಾಪಕ ಬಿಲ್ ಗೇಟ್ಸ್‌ಗೆ ನೋಟಿಸ್ ಜಾರಿಗೊಳಿಸಿ ಪ್ರತಿಕ್ರಿಯೆ ಕೇಳಿದೆ.  

ಭಾರತ ಮತ್ತು ಇತರ ಮೂರನೇ ವಿಶ್ವದ ದೇಶಗಳಿಗೆ 100 ಮಿಲಿಯನ್ ಡೋಸ್ ಕೋವಿಡ್‌ಶೀಲ್ಡ್ ಲಸಿಕೆಗಳ ತಯಾರಿಕೆ ಮತ್ತು ವಿತರಣೆಯ ಪ್ರಕ್ರಿಯೆಯನ್ನು ವೇಗಗೊಳಿಸಲು 2020 ರಲ್ಲಿ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿತ್ತು. ಇನ್ನು, ಕೇಂದ್ರ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (Ministry of Health and Family Welfare), ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (Drug Controller General of India) ಡಾ. ವಿಜಿ ಸೋಮಾನಿ ಮತ್ತು ಏಮ್ಸ್‌ (AIIMS) ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಸಹ ಈ ಅರ್ಜಿಯ ಇತರ ಪ್ರತಿವಾದಿಗಳು ಎಂದು ತಿಳಿದುಬಂದಿದೆ. 

ಪ್ರಧಾನಿ ಮೋದಿಯಿಂದಲೇ ನೀವಿನ್ನೂ ಜೀವಂತವಾಗಿದ್ದಿರಿ: ಬಿಜೆಪಿ ಸಚಿವ

ತಮ್ಮ ಮಗಳು ಧಾಮಂಗಾವ್‌ನಲ್ಲಿರುವ ಎಸ್‌ಎಂಬಿಟಿ ದಂತ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆ ಮತ್ತು ಹಿರಿಯ ಉಪನ್ಯಾಸಕಿಯಾಗಿದ್ದಳು ಎಂದು ಔರಂಗಾಬಾದ್‌ನ ನಿವಾಸಿ ದಿಲೀಪ್ ಲುನಾವತ್ ಅವರು ನ್ಯಾಯಾಲಯಕ್ಕೆ ತಿಳಿಸಿದರು. ಹಾಗೂ, ಸಂಸ್ಥೆಯಲ್ಲಿನ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ತೆಗೆದುಕೊಳ್ಳುವಂತೆ ತಿಳಿಸಿದ ನಂತರ ತಮ್ಮ ಮಗಳು ಲಸಿಕೆ ತೆಗೆದುಕೊಳ್ಳಲೇಬೇಕಾಯಿತು. ಅಲ್ಲದೆ, ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಅವರ ದೇಹಕ್ಕೆ ಯಾವುದೇ ಅಪಾಯ ಅಥವಾ ಬೆದರಿಕೆಗಳಿಲ್ಲ ಎಂದು ತಮ್ಮ ಮಗಳಿಗೆ ಭರವಸೆ ನೀಡಲಾಗಿತ್ತು ಎಂದು ಅವರು ಹೇಳಿದರು. ಈ ಮಧ್ಯೆ,, ಡಾ. ಸೋಮಾನಿ ಮತ್ತು ಗುಲೇರಿಯಾ ಅವರು ಹಲವಾರು ಸಂದರ್ಶನಗಳನ್ನು ನೀಡಿದ್ದಾರೆ ಮತ್ತು ಲಸಿಕೆಗಳು ಸುರಕ್ಷಿತವಾಗಿವೆ ಎಂದು ಜನರಿಗೆ ಭರವಸೆ ನೀಡಿದ್ದಾರೆ ಎಂದೂ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ದಿಲೀಪ್‌ ಲುನಾವತ್ ಹೇಳಿದ್ದಾರೆ.

ಅವರು ಜನವರಿ 28, 2021 ರಂದು ತಮ್ಮ ಮಗಳು ಲಸಿಕೆ ತೆಗೆದುಕೊಂಡಿರುವ ಪ್ರಮಾಣಪತ್ರವನ್ನು ಸಹ ಕೋರ್ಟ್‌ಗೆ ಲಗತ್ತಿಸಿದ್ದಾರೆ. ನಂತರ, ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ನಂತರದ ಅಡ್ಡ ಪರಿಣಾಮಗಳಿಂದ (Adverse Events Following Immunisation)  ತಮ್ಮ ಮಗಳು ಮಾರ್ಚ್ 1, 2021 ರಂದು ನಿಧನರಾದರು ಎಂದು ತಂದೆ ಹೇಳಿಕೊಂಡಿದ್ದಾರೆ. ಹಾಗೆ, ಅಕ್ಟೋಬರ್ 2, 2021 ರಂದು ಕೇಂದ್ರ ಸರ್ಕಾರದ ಸ್ವಂತ ಪ್ರತಿಕೂಲ ಘಟನೆಗಳ ರೋಗನಿರೋಧಕ (AEFI) ವರದಿಯಲ್ಲಿ ಇದು ಪ್ರತಿಫಲಿಸುತ್ತದೆ ಎಂದೂ ಮನವಿಯಲ್ಲಿ ಹೇಳಲಾಗಿದೆ. 

ಕೋವಿಡ್ 3ನೇ ಡೋಸ್‌ ಲಸಿಕೆ ಪಡೆದ್ರೆ ಫ್ರೀಯಾಗಿ ಸಿಗುತ್ತೆ ‘ಚೋಲೆ ಭಟುರೆ’

ಈ ಹಿನ್ನೆಲೆ, ದಿಲೀಪ್ ಲುನಾವತ್ ಅವರು ತಮ್ಮ ಮಗಳ ಸಾವಿಗೆ ನ್ಯಾಯ ನೀಡಲು ಬಯಸುತ್ತೇನೆ ಮತ್ತು ಪ್ರತಿವಾದಿ ಅಧಿಕಾರಿಗಳ ಇಂತಹ ಕಾನೂನುಬಾಹಿರ ಚಟುವಟಿಕೆಗಳಿಂದ ಬಲಿಯಾಗುವ ಸಾಧ್ಯತೆಯಿರುವ ಇನ್ನೂ ಅನೇಕ ಜನರ ಜೀವಗಳನ್ನು ಉಳಿಸಲು ಬಯಸುತ್ತೇನೆ ಎಂದೂ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳುತ್ತಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ನಾವು ದೇಶಕ್ಕಾಗಿ, ನೀವು ಚುನಾವಣೆಗಾಗಿ: ಬಿಜೆಪಿ. ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ