'ಹಿಂದುಗಳೇ, ಅದು ನಿಮ್ಮ ದೇಶ, ನಿಮ್ಮ ತಾಯ್ನೆಲ' ಉದಯಪುರ ಹತ್ಯೆಯನ್ನು ಖಂಡಿಸಿದ ಡಚ್ ಸಂಸದ!

By Santosh Naik  |  First Published Jun 29, 2022, 4:09 PM IST

ಇಬ್ಬರು ಪಾತಕಿಗಳು ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯಲಾಲ್‌ನನ್ನು ಹಾಡುಹಗಲೇ ಶಿರಚ್ಛೇದ ಮಾಡಿ ಭೀಕರ ಕ್ರೌರ್ತ ಮೆರೆದ ಪ್ರಕರಣಕ್ಕೆ ಸಂಬಂಧಪಟ್ಟಂತ ಡಚ್ ಸಂಸದ ಗೀರ್ಟ್ ವೈಲ್ಡರ್ ಪ್ರತಿಕ್ರಿಯೆ ನೀಡಿದ್ದು, ಭಾರತದಲ್ಲಿ ಹಿಂದುಗಳು ಸೇಫ್ ಆಗಿರಬೇಕು ಎಂದು ಹೇಳಿದ್ದಾರೆ.


ನವದೆಹಲಿ (ಜೂನ್ 29): ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ಇಬ್ಬರು ಮುಸ್ಲಿಂ ವ್ಯಕ್ತಿಗಳಿಂದ ಕನ್ಹಯ್ಯಾ ಲಾಲ್ ಸಾಹು (Kanhaiya Lal Sahu) ಎಂಬ ಟೈಲರ್ ಅನ್ನು ಭೀಕರವಾಗಿ ಹತ್ಯೆಗೈದ ಘಟನೆಯು ದೇಶವನ್ನು ಬೆಚ್ಚಿಬೀಳಿಸಿದೆ. ಇದು ಧಾರ್ಮಿಕ ಮತ್ತು ರಾಜಕೀಯ ಚರ್ಚೆಯನ್ನೂ ಹುಟ್ಟುಹಾಕಿದೆ. ಇದೀಗ ಟೈಲರ್ ಹತ್ಯೆಗೆ ಅಂತಾರಾಷ್ಟ್ರೀಯ ಸಮುದಾಯದಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನೆದರ್ಲೆಂಡ್ಸ್‌ನ ಸಂಸದರಾಗಿರುವ (Netherlands MP) ಗೀರ್ಟ್ ವೈಲ್ಡರ್ (Geert Wilders) ಈ ಕುರಿತಾಗಿ ಟ್ವೀಟ್ ಮಾಡಿದ್ದಾರೆ. ಪ್ರವಾದಿ ಮೊಹಮದ್ ಪೈಗಂಬರ್ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದ ಕಾರಣಕ್ಕೆ ಬಿಜೆಪಿ ಪಕ್ಷದಿಂದ ಅಮಾನತುಗೊಂಡಿದ್ದ ವಕ್ತಾರೆ ನೂಪುರ್‌ ಶರ್ಮ ಅವರ ಹೇಳಿಕೆಯನ್ನು ಬೆಂಬಲಿಸಿಯೂ ಇವರು ಟ್ವೀಟ್‌ ಮಾಡಿದ್ದರು.
ಇದೀಗ, ಡಚ್ ಸಂಸದ ಉದಯ್‌ಪುರದ ತನ್ನ ಸ್ವಂತ ಅಂಗಡಿಯೊಳಗೆ ಸಾಹುವನ್ನು ಕ್ರೂರವಾಗಿ ಮತ್ತು ಭಯಾನಕ ರೀತಿಯಲ್ಲಿ ಕೊಂದ ಕುರಿತಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತವು "ಅಸಹಿಷ್ಣುತೆಗೆ ಸಹಿಷ್ಣುತೆಯನ್ನು ನಿಲ್ಲಿಸಬೇಕು" ಮತ್ತು ಉಗ್ರವಾದದ ವಿರುದ್ಧ ಹಿಂದೂ ಧರ್ಮವನ್ನು ರಕ್ಷಿಸುವ ಅಗತ್ಯವಿದೆ ಎಂದು ವೈಲ್ಡರ್ ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಈ ಕುರಿತಾಗಿ ನೆದರ್ಲ್ಯಾಂಡ್ಸ್ ಸಂಸದ ಮಾತನಾಡಿದ್ದು, 'ದಯವಿಟ್ಟು ಭಾರತವನ್ನು ಸ್ನೇಹಿತನಾಗಿ ನಾನು ನಿಮಗೆ ಹೇಳುವುದಿಷ್ಟೇ. ಅಸಹಿಷ್ಣುತೆಗೆ ಸಹಿಷ್ಣುತೆಯನ್ನು ನಿಲ್ಲಿಸಿ. ಉಗ್ರಗಾಮಿಗಳು, ಭಯೋತ್ಪಾದಕರು ಮತ್ತು ಜಿಹಾದಿಗಳ ವಿರುದ್ಧ ಹಿಂದೂ ಧರ್ಮವನ್ನು ರಕ್ಷಿಸಿ. ಇಸ್ಲಾಂ ಧರ್ಮವನ್ನು ಸಮಾಧಾನಪಡಿಸುವ ಗೋಜಿಗೆ ಹೋಗಬೇಡಿ. ಏಕೆಂದರೆ ಅದು ನಿಮಗೆ ದುಬಾರಿಯಾಗುತ್ತದೆ. ಹಿಂದೂಗಳು ತಮ್ಮನ್ನು ಸಂಪೂರ್ಣವಾಗಿ 100% ರಕ್ಷಿಸುವ ನಾಯಕರಿಗೆ ಅರ್ಹರಾಗಿದ್ದಾರೆ' ಎಂದು ಬರೆದಿದ್ದಾರೆ.

Please India as a friend I tell you: stop being tolerant to the intolerant. Defend Hinduism against the extremists, terrorists and jihadists. Don’t appease Islam, for it will cost you dearly. Hindus deserve leaders that protect them for the full 100%!

— Geert Wilders (@geertwilderspvv)


ನೆದರ್ಲೆಂಡ್‌ ದೇಶದ ಬಲಪಂಥೀಯ ನಾಯಕರಲ್ಲಿ ಅಗ್ರಗಣ್ಯರಾಗಿರುವ ವೈಲ್ಡರ್, "ಭಾರತದಲ್ಲಿ ಹಿಂದುಗಳು ಸೇಫ್ ಆಗಿರಬೇಕು. ಯಾಕೆಂದರೆ, ಅದು ನಿಮ್ಮ ದೇಶ, ನಿಮ್ಮ ತಾಯ್ನೆಲ. ಇದೆಲ್ಲವೂ ಅವರದು. ಭಾರತ ಎನ್ನುವುದು ಇಸ್ಲಾಮಿಕ್‌ ರಾಷ್ಟ್ರವಲ್ಲ' ಎಂದು ಬರೆದುಕೊಂಡಿದ್ದಾರೆ. ನೂಪುರ್‌ ಶರ್ಮ ಪರವಾಗಿ ಮಾತನಾಡಿದ್ದ ಇವರು, ಆಕೆ ನಿಜವನ್ನಷ್ಟೇ ಹೇಳಿದ್ದಾಳೆ ಎಂದು ಹೇಳಿದ್ದರು.

Hindus should be safe in India.
It is their country, their homeland, it’s theirs!
India is no Islamic nation.

— Geert Wilders (@geertwilderspvv)

Tap to resize

Latest Videos

ಮಂಗಳವಾರ ಸಂಜೆ, ಕನ್ಹಯ್ಯಾ ಲಾಲ್ ಸಾಹು ಎಂಬ ವ್ಯಕ್ತಿಯನ್ನು ಇಬ್ಬರು ಮುಸ್ಲಿಂ ವ್ಯಕ್ತಿಗಳು ರಾಜಸ್ಥಾನದ ಜನನಿಬಿಡ ಉದಯಪುರ ಮಾರುಕಟ್ಟೆಯಲ್ಲಿ ಅವರ ಟೈಲರ್‌ ಅಂಗಡಿಯೊಳಗೆ ಬರ್ಬರವಾಗಿ ಶಿರಚ್ಛೇದ ಮಾಡಿದ್ದರು. ತಮ್ಮ ಇಡೀ ಕೃತ್ಯವನ್ನು ಚಿತ್ರೀಕರಣ ಮಾಡಿದ್ದ ಪಾತಕಿಗಳು, ವಿಡಿಯೋವನ್ನು ಆನ್‌ಲೈನ್‌ನಲ್ಲಿ ಅಪ್‌ ಲೋಡ್‌ ಮಾಡಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ, ನೂಪುರ್‌ ಶರ್ಮ ಹಾಘೂ ಹಿಂದೂ ಸಮಾಜಕ್ಕೂ ಎಚ್ಚರಿಕೆ ಕೊಟ್ಟಿದ್ದುರ.

ನೂಪುರ್ ಪರ ಪೋಸ್ಟ್ ಹಾಕಿದ್ದಕ್ಕೆ ಶಿರಚ್ಛೇದ ಪ್ರಕರಣ: ಹಂತಕರ ಬೆನ್ನಟ್ಟಿ ಹಿಡಿದ ದೃಶ್ಯ ಸೆರೆ

ಸಾಹು ಹತ್ಯೆಯ ನಂತರ, ರಾಜಸ್ಥಾನದಲ್ಲಿ ಸರ್ಕಾರ ಮತ್ತು ಪೊಲೀಸರ ವಿರುದ್ಧ ಬೃಹತ್ ಪ್ರತಿಭಟನೆಗಳು ಭುಗಿಲೆದ್ದವು. ಬಿಜೆಪಿಯ ಮಾಜಿ ವಕ್ತಾರ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಫೇಸ್‌ಬುಕ್ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ಕನ್ಹಯ್ಯಾ ಲಾಲ್ ಅವರನ್ನು ಮುಸ್ಲಿಂ ವ್ಯಕ್ತಿಗಳು ಕೊಂದಿದ್ದಾರೆ. ಟೈಲರ್ ಹತ್ಯೆಯ ನಂತರ ಉದಯಪುರದಲ್ಲಿ ಕರ್ಫ್ಯೂ ವಿಧಿಸಲಾಗಿದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ರಾಜಸ್ಥಾನದಲ್ಲಿ ಒಂದು ತಿಂಗಳ ಕಾಲ ಸೆಕ್ಷನ್ 144 ಅನ್ನು ವಿಧಿಸಲಾಗಿದೆ.

Nupur Sharma ಉಗ್ರರಿಗೆ ತಲೆಬಾಗಬೇಡಿ, ನೂಪುರ್ ಶರ್ಮಾಗೆ ಬೆಂಬಲ ಸೂಚಿಸಿದ ಡಚ್ ಸಂಸದ!

ಕನ್ಹಯ್ಯಾ ಲಾಲ್ ಹತ್ಯೆಗೆ ಸಂಬಂಧಿಸಿದಂತೆ ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್ ಎಂದು ಗುರುತಿಸಲಾದ ಇಬ್ಬರನ್ನು ಬಂಧಿಸಲಾಗಿದೆ. ದಾಳಿಕೋರರು ಧನ್ ಮಂಡಿಯಲ್ಲಿರುವ ಕನ್ಹಯ್ಯಲಾಲ್ ಅವರ ಅಂಗಡಿಗೆ ಗ್ರಾಹಕರಂತೆ ನಟಿಸಿ ಒಳಹೊಕಿದ್ದರು. ಟೈಲರ್ ಕನ್ಹಯ್ಯಲಾಲ್ ಅಳತೆಗಳನ್ನು ತೆಗೆದುಕೊಳ್ಳುತ್ತಿದ್ದಂತೆ, ಅಖ್ತರಿ ಕತ್ತಿಯಿಂದ ಆತನ ಮೇಲೆ ದಾಳಿ ಮಾಡಿ, ಆತನ ಕುತ್ತಿಗೆಯನ್ನು ಕತ್ತರಿಸಿದ್ದ ಮತ್ತೋರ್ವ ವ್ಯಕ್ತಿ ತನ್ನ ಮೊಬೈಲ್‌ನಿಂದ ಬರ್ಬರವಾಗಿ ಮಾಡಿದ ಹತ್ಯೆಯ ವಿಡಿಯೋ ರೆಕಾರ್ಡ್‌ ಮಾಡಿದ್ದಾನೆ.

 

 

 

click me!