
ದುಬೈನಲ್ಲಿ ನೆಲೆಸಿರುವ ಭಾರತದ ಹುಡುಗಿ ನಮೋ ನಮೋ ವಿಶ್ವಗುರು ಭಾರತ್ ಮೇರಾ ಎಂಬ ಹಾಡು ಹಾಡಿದ್ದಾಳೆ. ಇಂಡಿಯನ್ ಹೈಸ್ಕೂಲಿನಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಹುಡುಗಿ ಸುಚೇತಾ ಸತೀಶ್ ಸೆ.17ರಂದು ಪ್ರಧಾನಿಯ 70ನೇ ಹುಟ್ಟಿದ ಹಬ್ಬದ ಅಂಗವಾಗಿ ಹಾಡು ಹಾಡಿ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್ ಮಾಡಿದ್ದಾಳೆ.
ಮಲಯಾಳಂ ಕವಿ ಮತ್ತು ಗಾಯಕ ಅಜಯ್ ಗೋಪಾಲ್ ಈ ಹಾಡನ್ನು ಬರೆದಿದ್ದು, ಸುಚೇತಾಳ ತಾಯಿ ಸುಮಿತಾ ಅಯಲತ್ ಮಲಯಾಳಂ ಹಾಡನ್ನು ಹಿಂದಿಗೆ ಭಾಷಾಂತರಿಸಿದ್ದಾರೆ.
81ರ ವಯಸ್ಸಲ್ಲಿ ಫಿಟ್‌ನೆಸ್: ನಟ ಮಿಲಿಂದ್ ತಾಯಿಯ ಪುಶ್‌ಅಪ್ ವಿಡಿಯೋ 5 ಬಾರಿ ನೋಡಿದ್ರು ಮೋದಿ..!
ಬಾಲಿವುಡ್ ಕಂಪೋಸರ್ ಮೋಂಟಿ ಶರ್ಮಾ ಈ ಹಾಡನ್ನು ಕಂಪೋಸ್ ಮಾಡಿ, ಟ್ಯೂನಿಂಗ್ ಮಾಡಿದ್ದಾರೆ. ಈ ಹಾಡನ್ನು ತಯಾರಿಸುವ ಸಂಬಂಧ ಕೆಲಸ ಮಾಡಿದವರೆಲ್ಲ ದೇಶದ ವಿವಿಧ ಭಾಗದಲ್ಲಿರುವುದು ವಿಶೇಷ.
ಫ್ಲಾಟಿಸ್ಟ್ ಬೆಂಗಳೂರಿನವರು, ಸಾಂಗ್ ಮಿಕ್ಸ್ ಮಾಡಿದ್ದು ಮುಂಬೈನಲ್ಲಿ, ವಿಡಿಯೋ ಎಡಿಟ್ ಮಾಡಿದ್ದ ಕಣ್ಣೂರಿನಲ್ಲಿ, ವಿಡಿಯೋ ರೆಕಾರ್ಡ್ ಮಾಡಿದ್ದು ಶಾರ್ಜಾದ ಸ್ಟುಡಿಯೋದಲ್ಲಿ ಎಂದು ಸುಚೇತಾ ಹೇಳಿದ್ದಾಳೆ.
ಮೋದಿ ಗೆದ್ದಿದ್ದ ಕ್ಷೇತ್ರದ ತುಂಬಾ ಕಂಗೊಳಿಸ್ತಿದೆ ಕಂಗನಾ ಪೋಸ್ಟರ್
ಹಾಡಿನಲ್ಲಿ ಮೋದಿಯ ರಾಜಕೀಯ ಬದುಕು, ಮೇಕ್ ಇನ್ ಇಂಡಿಯಾ ಅಭಿಯಾನ, ಬೆಟ್ಟ, ನದಿ, ಪರ್ವತ, ವಿವಿಧ ಸಂಸ್ಕೃತಿ ಬಗ್ಗೆಯೂ ಬರೆಯಲಾಗಿದೆ. ಈ ಹಾಡಿನ ಒಂದು ಕಾಪಿಯನ್ನು ದುಬೈನ ಭಾರತದ ಜನರಲ್ ಕೌನ್ಸಲ್ ಅಮನ್ ಪುರಿಗೆ ನೀಡಲಾಗಿದೆ.
ಒಂದು ವರ್ಷದ ಹಿಂದೆ ಈ ಪ್ರಾಜೆಕ್ಟ್ ಬಗ್ಗೆ ಯೋಚಿಸಿದ್ದೆವು. ಇದನ್ನು ಮಲಯಾಳಂನಲ್ಲಿ ಬರೆದು ರೆಕಾರ್ಡ್ ಮಾಡಲಾಗಿತ್ತು. ಅದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ. ಇದನ್ನು ಹಿಂದಿಗೆ ಭಾಷಾಂತರಿಸಿ ನಂತರ ಹಾಡುವುದು ಸುಲಭವಿರಲಿಲ್ಲ ಎಂದಿದ್ದಾಳೆ ಸುಚೇತ. ಈಕೆ ಹಿಂದೂಸ್ತಾನಿ ಕ್ಲಾಸಿಕಲ್ ಮ್ಯೂಸಿಕ್ ಕಲಿಯುತ್ತಿದ್ದಾಳೆ. 4 ವರ್ಷದಿಂದಲೂ ಸಂಗೀತಾಭ್ಯಾಸ ಮಾಡುತ್ತಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ