ಜಮ್ಮು ಕಾಶ್ಮೀರದಲ್ಲಿ ಮೊದಲ ಶಾಪಿಂಗ್ ಮಾಲ್‌ಗೆ ಅಡಿಗಲ್ಲು, 5 ಸಾವಿರ ಚದರ ಅಡಿಯ ಹೈಪರ್ ಮಾರ್ಕೆಟ್!

By Suvarna NewsFirst Published Mar 19, 2023, 6:37 PM IST
Highlights

ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದ ಸರ್ವತೋಮುಖ ಅಭಿವೃದ್ಧಿ ಕಾಣುತ್ತಿದೆ. ಶಿಕ್ಷಣ, ವೈದ್ಯಕೀಯ ಕಾಲೇಜು ಸೇರಿದಂತೆ ಅಭಿವೃದ್ಧಿ ಕೆಲಸಗಳು ಆಗಿವೆ. ಎಲ್ಲೆಡೆ ತಿರಂಗ ಹಾರಾಡುತ್ತಿದೆ.   ಹಲವು ದಶಕಗಳ ಬಳಿಕ ಚಿತ್ರಮಂದಿರ ಹೌಸ್ ಫುಲ್ ಆಗಿತ್ತು. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಅತೀ ದೊಡ್ಡ ಶಾಪಿಂಗ್ ಮಾಲ್ ಬರುತ್ತಿದೆ. ಲುಲೂ ಮಾಲ್ ಇದೀಗ ಕಣಿವೆ ರಾಜ್ಯದಲ್ಲಿ ಶಾಖೆ ತೆರೆಯುತ್ತಿದೆ.

ಶ್ರೀನಗರ(ಮಾ.19): ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಜಮ್ಮು ಮತ್ತು ಕಾಶ್ಮೀರದ ಚಿತ್ರಣ ಬದಲಿಸಿದ್ದಾರೆ. ಪ್ರಮುಖವಾಗಿ ಆರ್ಟಿಕಲ್ 370 ರದ್ದು ಮಾಡಿ ಕಣಿವೆ ರಾಜ್ಯವನ್ನು ಸಂಪೂರ್ಣವಾಗಿ ತೆಕ್ಕೆಗೆ ಪಡೆದುಕೊಂಡಿತು. ಬಳಿಕ ಭಯೋತ್ಪಾದನಾ ಚಟುವಟಿಕೆ ಹತ್ತಿಕ್ಕಲಾಯಿತು. ಇದೀಗ ಎಲ್ಲೆಡೆ ತಿರಂಗ ಹಾರಾಡುತ್ತಿದೆ. ಕಲ್ಲು ತೂರಾಟ, ಬಾಂಬ್ ಸದ್ದು ಕೇಳಿಸುತ್ತಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನಲೆಸುತ್ತಿದೆ. ಇದೀಗ ಭಾರತದ ಮುಕುಟಮಣಿ ರಾಜ್ಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಮೊತ್ತ ಮೊದಲ ಅತೀ ದೊಡ್ಡ ಶಾಪಿಂಗ್ ಮಾಲ್ ಆರಂಭಗೊಳ್ಳುತ್ತಿದೆ. ದುಬೈ ಮೂಲದ ಎಮಾರ್ ಗ್ರೂಪ್  ಬರೋಬ್ಬರಿ 5,000 ಚದರ ಅಡಿಯ ಶಾಪಿಂಗ್ ಮಾಲ್ ತೆರೆಯುತ್ತಿದೆ. ಇದು ಆರ್ಟಿಕಲ್ 370 ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಬಂದ ಮೊದಲ ಫಾರಿನ್ ಡೈರೆಕ್ಟ್ ಇನ್ವೆಸ್ಟ್‌ಮೆಂಟ್(FDI).

ಇಂದು(ಮಾ.19) ದುಬೈ ಮೂಲದ  EMAAR ಗ್ರೂಪ್ ಶ್ರೀನಗರದಲ್ಲಿ ಅತೀ ದೊಡ್ಡ ಶಾಪಿಂಗ್ ಮಾಲ್ ಆರಂಭಿಸಲು ಅಡಿಗಲ್ಲು ಹಾಕಿದೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗರ್ವನರ್ ಮನೋಜ್ ಕೆ ಸಿನ್ಹ ಶಿಲನ್ಯಾಸ ನೇರವೇರಿಸಿದ್ದಾರೆ. ಎಮಾರ್ ಮಾಲ್‌ನಲ್ಲಿ ಲೂಲು ಹೈಪರ್ ಮಾರ್ಕೆಟ್ ಕೂಡ ಇರಲಿದೆ.  ಎಮಾರ್ ಗ್ರೂಪ್ ಜಮ್ಮು ಮತ್ತು ಕಾಶ್ಮೀರದಲ್ಲಿ ಬರೋಬ್ಬರಿ 19,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಮೊದಲ ಹಂತದಲ್ಲಿ ಲೂಲೂ ಹೈಪರ್ ಮಾಲ್ ಆರಂಭಗೊಳ್ಳುತ್ತಿದೆ.

ಅಂದು ಶಿವನಿಗೆ ಜಾಗ ನೀಡುವುದಕ್ಕೆ ವಿರೋಧಿಸಿದ ಮುಫ್ತಿಯಿಂದ ಇಂದು ಶಿವನ ದರ್ಶನ : ಜಲಾಭಿಷೇಕ

ಇದರ ಬೆನ್ನಲ್ಲೇ ರಿಯಲ್ ಎಸ್ಟೇಟ್ ಬ್ಯೂಸಿನೆಸ್, ಕಾಶ್ಮೀರ ಹಣ್ಣುಗಳ ರಫ್ತು, ವಾಣಿಜ್ಯ ಹಾಗೂ ವಿಲ್ಲಾ ಯೋಜನೆಗಳು ಸೇರಿದಂತೆ ಹತ್ತು ಹಲವು ಯೋಜನೆಗಳು ಒಂದರ ಹಿಂದೆ ಒಂದರಂತೆ ದುಬೈಮೂಲದ ಕಂಪನಿ ಆರಂಭಿಸುತ್ತಿದೆ. ಶಿಲನ್ಯಾಸ ಕಾರ್ಯಕ್ರಮದ ಬಳಿಕ ಮಾತನಾಡಿದ ಲೂಲೂ ಗ್ರೂಪ್ ಮುಖ್ಯಸ್ಥ ಯೂಸುಫ್ ಆಲಿ,  ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ 39 ವಿವಿಧ ಯೋಜನೆಗಳ ಆರಂಭಿಸಲು MoU(ಒಡಂಬಡಿಕೆ) ಸರ್ಕಾರಕ್ಕೆ ನೀಡಲಾಗಿತ್ತು. ಇದರಲ್ಲಿ 20 ಯೋಜನೆಗಳಿಗೆ ಸರ್ಕಾರ ಅನುಮತಿ ನೀಡಿದೆ. 19,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದೇವೆ ಎಂದರು.

 

Sharing my speech at the laying of foundation stone of Mall of Srinagar by Emaar.https://t.co/QrhFHB7B0h pic.twitter.com/Sl8YrdIsdk

— Office of LG J&K (@OfficeOfLGJandK)

 

ಜಮ್ಮು ಮತ್ತು ಕಾಶ್ಮೀರದಲ್ಲಿ ಲೂಲೂ ಗ್ರೂಪ್ ಈಗಾಗಲೇ ಹಣ್ಣುಗಳ ರಫ್ತು ವ್ಯವಾಹರ ನಡೆಸುತ್ತಿದೆ. ಇದೀಗ ಲೂಲೂ ಮಾಲ್ ಮೂಲಕ ವ್ಯವವಾಹರವನ್ನು ಮತ್ತಷ್ಟು ವಿಸ್ತರಿಸುತ್ತಿದ್ದೇವೆ ಎಂದರು. ಸರ್ಕಾರ ಜಮ್ಮು ಮತ್ತು ಕಾಶ್ಮೀರವನ್ನು ಮುಖ್ಯವಾಹಿನಿಗೆ ತರಲು ಹಲವು ಪ್ರಯತ್ನಗಳನ್ನು ನಡೆಸುತ್ತಿದೆ.ಹೀಗಾಗಿ ಈ ರಾಜ್ಯದಲ್ಲಿ ಅಭೂತಪೂರ್ವ ಬದಲಾವಣೆ ಕಾಣುತ್ತಿದ್ದೇವೆ ಎಂದು ಯೂಸೂಫ್ ಆಲಿ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಗರ್ವನರ್ ಮನೋಜ್ ಕೆ ಸಿನ್ಹ, ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಬದಲಾಗಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ, ಇಲ್ಲಿನ ಸಂಪನ್ಮೂಲಗಳ ಬಳಕೆ ಸೂಕ್ತರೀತಿಯಲ್ಲಿ ಆಗಲಿದೆ. ಇದೀಗ ಅತೀ ದೊಡ್ಡ ಮಾಲ್, ಇತರ ಯೋಜನೆಗಳಿಂದ ಇಲ್ಲಿನ ಸ್ಥಳೀಯ ಯುವ ಸಮೂಹಕ್ಕೆ ಉದ್ಯೋಗ ಸಿಗಲಿದೆ. ಇಲ್ಲಿನ ಜೀವನ ಮಟ್ಟ ಮತ್ತಷ್ಟು ಸುಧಾರಿಸಲಿದೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳಿಂದೆ ಜಮ್ಮು ಮತ್ತು ಕಾಶ್ಮೀರ ಭಾರತದ ಆರ್ಥಿಕತೆಯಲ್ಲಿ ಅತ್ಯಧಿಕ ಕೊಡುಗೆ ನೀಡುವ ರಾಜ್ಯವಾಗಲಿದೆ ಎಂದು ಸಿನ್ಹ ಹೇಳಿದ್ದಾರೆ.

ಭಾರತ-ಪಾಕ್‌ ಗಡಿಯಲ್ಲಿ ನಿರ್ಮಾಣವಾಗಲಿದೆ ಛತ್ರಪತಿ ಶಿವಾಜಿ ಪ್ರತಿಮೆ!

ಆರ್ಟಿಕಲ್ 370 ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಖಾಸಗಿ ಕಂಪನಿಗಳು ಹೂಡಿಕೆ ಮಾಡುತ್ತಿದೆ. ಕಳೆದ ತಿಂಗಳು JSW ಸ್ಟೀಲ್ ಕಂಪನಿ 12,000 ಮೆಟ್ರಿಕ್ ಟನ್ ಕಲರ್ ಕೋಟೆಡ್ ಸ್ಟೀಲ್ ಉತ್ಪಾದನಾ ಘಟಕ ಆರಂಭಿಸಲು ಒಪ್ಪಂದ ಮಾಡಿಕೊಂಡಿದೆ. ಇದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಯಾಗಲಿದೆ. ಒಂದೆಡೆ ಪ್ರವಾಸೋದ್ಯಮ ತ್ವರಿತಗತಿಯಲ್ಲಿ ಅಭಿವೃದ್ದಿ ಕಾಣುತ್ತಿದೆ. ಭಯೋತ್ಪಾದನೆ ಹತ್ತಿಕ್ಕಿದ ಕಾರಣ ಇದೀಗ ಹಲವರು ಕಾಶ್ಮೀರ ಪ್ರವಾಸ ಕೈಗೊಳ್ಳುತ್ತಿದ್ದಾರೆ.

click me!