ಏಷ್ಯಾನೆಟ್ ನ್ಯೂಸ್‌ಗೆ ಮಹತ್ವದ ಗೆಲುವು, ಸುದ್ದಿಯ ಕಾರಣಕ್ಕೆ ಪತ್ರಕರ್ತರನ್ನು ಜೈಲಿಗೆ ಹಾಕುವಂತಿಲ್ಲ, ಕೋರ್ಟ್ ಆದೇಶ!

By Suvarna NewsFirst Published Mar 19, 2023, 4:44 PM IST
Highlights

ಮಾದಕ ದ್ರವ್ಯ ಅಕ್ರಮ ಹಾಗೂ ಬಳಕೆ ಕುರಿತು ಪ್ರಸಾರ ಮಾಡಿದ್ದ ಕಾರ್ಯಕ್ರಮ ಕಟ್ಟು ಕತೆ ಎಂದು ಆರೋಪಿಸಿ ಏಷ್ಯಾನೆಟ್ ನ್ಯೂಸ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಕೋರ್ಟ್ ಮಹತ್ವದ ಆದೇಶ ನೀಡಿದೆ. ಸುದ್ದಿ ಮಾಡಿದ ಕಾರಣಕ್ಕೆ ಪತ್ರಕರ್ತನ್ನು ಜೈಲಿಗೆ ಹಾಕುವಂತಿಲ್ಲ ಎಂದ ಕೋರ್ಟ್, ಏಷ್ಯಾನೆಟ್ ನ್ಯೂಸ್ ಸಿಬ್ಬಂದಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಈ ಮೂಲಕ ಕಾನೂನು ಹೋರಾಟದಲ್ಲಿ ಏಷ್ಯಾನೆಟ್ ನ್ಯೂಸ್‌ಗೆ ಮಹತ್ವದ ಗೆಲುವು ಸಿಕ್ಕಿದೆ.

ಕೊಚ್ಚಿ(ಮಾ.19): ನೇರ ದಿಟ್ಟ ಹಾಗೂ ನಿರಂತರ ಪತ್ರಿಕೋದ್ಯಮದ ಮೂಲಕ ದೇಶದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಏಷ್ಯಾನೆಟ್ ನ್ಯೂಸ್‌‌ಗೆ ಕಾನೂನು ಹೋರಾಟದಲ್ಲಿ ಗೆಲುವು ಸಿಕ್ಕಿದೆ. ಸುದ್ದಿಯನ್ನು ವರದಿ ಮಾಡಿದ ಕಾರಣಕ್ಕೆ ಕ್ರಿಮಿನಲ್ ಅಪರಾಧ ಹೊರಿಸಿ ಅವರನ್ನು ಜೈಲಿಗೆ ಹಾಕುವಂತಿಲ್ಲ. ಪತ್ರಿಕಾ ಸ್ವಾತಂತ್ರತ್ಯವಿರುವ ಪ್ರಜಾಪ್ರಭುತ್ವ ದೇಶದಲ್ಲಿ ಈ ರೀತಿಯ ಬೆಳವಣಿಗಿಗೆ ಅವಕಾಶವಿಲ್ಲ ಎಂದು ಕೋಯಿಕ್ಕೋಡ್ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ. ಇಷ್ಟೇ ಏಷ್ಯಾನೆಟ್ ನ್ಯೂಸ್ ಸಿಬ್ಬಂದಿಗಳ ವಿರುದ್ಧ ಯಾವುದೇ ಗಂಭೀರ ಆರೋಪಗಳಿಲ್ಲ ಎಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಅಪ್ರಾಪ್ತೆಯ ನಕಲಿ ವಿಡಿಯೋ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ಎಸ್ಎಫ್ಐ ಹಾಗೂ ಸಿಪಿಎಂ ಕಾರ್ಯಕರ್ತರು ಏಷ್ಯಾನೆಟ್ ನ್ಯೂಸ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದರು. ಸಿಬ್ಬಂದಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ಪ್ರಕರಣದಲ್ಲಿ ಕಾರ್ಯಕರ್ತರು ಏಷ್ಯಾನೆಟ್ ನ್ಯೂಸ್ ಸಿಬ್ಬಂದಿಗಳ ವಿರುದ್ಧ ದೂರು ನೀಡಿದ್ದರು. ಈ ಕುರಿತು ಕಾನೂನು ಹೋರಾಟ ನಡೆಸಿದ ಏಷ್ಯಾನೆಟ್ ನ್ಯೂಸ್‌ಗೆ ಇದೀಗ ಗೆಲುವಾಗಿದೆ. ಏಷ್ಯಾನೆಟ್ ಸಿಬ್ಬಂದಿಗಳ ವಿರುದ್ಧ ಯಾವುದೇ ಗಂಭೀರ ಆರೋಪಗಳಿಲ್ಲ. ಅಪರಾಧ ಎಸಗಿದ್ದರೆ ಅದು ನ್ಯಾಯಯುತವಾಗಿ ವಿಚಾರಣೆ ಮೂಲಕ ಸಾಬೀತಾಗಬೇಕು ಎಂದು ಜಿಲ್ಲಾ ಹೆಚ್ಚುವರಿ ನ್ಯಾಯಲಯದ ಜಡ್ಜ್ ಪ್ರಿಯಾ ಕೆ ಹೇಳಿದ್ದಾರೆ.

ಎಸ್‌ಎಫ್‌ಐ ಕಾರ‍್ಯಕರ್ತರ ದಾಂಧಲೆ: ಏಷ್ಯಾನೆಟ್‌ಗೆ ಭದ್ರತೆ ನೀಡಿ ಎಂದು ಕೇರಳ ಹೈಕೋರ್ಟ್‌ ಅದೇಶ

ಅಪ್ರಾಪ್ತೆಯ ನಕಲಿ ವಿಡಿಯೋ ಪ್ರಸಾರ ಮಾಡಿದ ಕಾರಣಕ್ಕೆ ಏಷ್ಯಾನೆಟ್ ನ್ಯೂಸ್ ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದು ಆರೋಪಿಸಿ ದಾಂಧಲೆ ನಡೆಸಲಾಗಿತ್ತು. ಇದೇ ವೇಳೆ ಏಷ್ಯಾನೆಟ್ ನ್ಯೂಸ್ ಹಾಗೂ ಸಿಬ್ಬಂದಿಗಳ ವಿರುದ್ಧ ಶಾಸಕ ಪಿವಿ ಅನ್ವರ್ ದೂರು ಸಲ್ಲಿಸಿದ್ದರು. ಎಸ್‌ಎಫ್ಐ ಹಾಗೂ ಸಿಪಿಎಂ ಕಾರ್ಯಕರ್ತರ ಗೂಂಡಾ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿತ್ತು. ಏಷ್ಯಾನೆಟ್ ನ್ಯೂಸ್ ಕಚೇರಿಗೆ ಭದ್ರತೆ ಒದಗಿಸುವಂತೆ ಸೂಚನೆ ನೀಡಿತ್ತು. ಕೇರಳ ವಿಧಾಸಭೆಯಲ್ಲೂ ಈ ವಿಚಾರ ಭಾರಿ ಚರ್ಚೆಯಾಗಿತ್ತು. ಇದೀಗ ಜಿಲ್ಲಾ ನ್ಯಾಯಾಲಯ ಏಷ್ಯಾನೆಟ್ ನ್ಯೂಸ್ ಪರವಾಗಿ ಆದೇಶ ನೀಡಿದೆ.

ಏಷ್ಯಾನೆಟ್ ನ್ಯೂಸ್  ಪತ್ರಕರ್ತರಾದ ಸಿಂಧು ಸೂರ್ಯಕುಮಾರ್, ಶಹಜಹಾನ್, ನಾಫಾಲ್ ಬಿನ್ ಯೂಸುಫ್, ನೀಲಿ ಆರ್ ನಾಯರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇವರ ವರವಾಗಿ ಅಡ್ವೋಕೇಟ್ ಪಿವಿ ಹರಿ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.  ಏಷ್ಯಾನೆಟ್ ನ್ಯೂಸ್ ಮಾದಕ ದ್ರವ್ಯ ಅಕ್ರಮ ಹಾಗೂ ಬಳಕೆ ಕುರಿತು ಸರಣಿ ಆಂದೋಲನ ನಡೆಸಿತ್ತು. ನರ್ಕೋಟಿಕ್ಸ್ ಈಸ್ ಡಿಟಿ ಬ್ಯೂಸಿನೆಸ್ ಅನ್ನೋ ಕಾರ್ಯಕ್ರಮ ಪ್ರಸಾರ ಮಾಡಿತ್ತು. ಆದರೆ ಇದು ಕಟ್ಟುಕಥೆ ಎಂದು ಶಾಸಕರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಏಷ್ಯಾನೆಟ್ ನ್ಯೂಸ್ ವಿರುದ್ಧ ಗಂಭೀರ ಪ್ರಕರಣ ದಾಖಲಿಸಿದ್ದರು. ಇಷ್ಟೇ ಅಲ್ಲ ನ್ಯೂಸ್ ಕಚೇರಿ ಮೇಲೆ ದಾಳಿ ನಡೆಸಿ ಜಾಮೀನು ರಹಿತ ಸೆಕ್ಷನ್ ವಿಧಿಸಿದ್ದರು. ಇದೀಗ ಕೇರಳ ಪೋಲೀಸರಿಗೆ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಚಾಟಿ ಬೀಸಿದೆ.   

ಸರ್ಕಾರದ ರಕ್ಷಣೆಯಲ್ಲಿಯೇ ನ್ಯೂಸ್‌ ಚಾನೆಲ್ ಮೇಲೆ ದಾಳಿ: ಪ್ರತಿಪಕ್ಷ

ಪೊಲೀಸರು ಪ್ರಕರಣ ದಾಖಲಿಸಿ ದಾಳಿ ನಡೆಸಿದ ಬೆನ್ನಲ್ಲೇ ಸಿಪಿಎಂ ಹಾಗೂ ಎಸ್ಎಫ್ಐ ಕಾರ್ಯಕರ್ತರು ನ್ಯೂಸ್ ಕಚೇರಿಗೆ ದಾಳಿ ನಡೆಸಿ ದಾಂಧಲೆ ನಡೆಸಿದ್ದರು. ಇದೀಗ ಎಲ್ಲಾ ದೂರು, ಪ್ರತಿ ದೂರು, ಪೊಲೀಸರು ವಿಧಿಸಿದ ಸೆಕ್ಷನ್, ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಿದೆ. ತನಿಖೆ ಉದ್ದೇಶಕ್ಕೆ ಅರ್ಜಿದಾರರ ಉಪಸ್ಥಿತಿ ಅಗತ್ಯವಿದ್ದರೆ, ಷರತ್ತು ವಿಧಿಸಬುಹುದು. ಪ್ರಕರಣದ ತೀವ್ರತೆ, ಸಾಕ್ಷಿಗಳ ಮೇಲೆ ಪ್ರಬಾವ ಬೀರುವ ಹಾಗೂ ನ್ಯಾಯಾದಿಂದ ತಪ್ಪಿಸಿಕೊಳ್ಳುವ ಅವಕಾಶವನ್ನು ಗಣನೆಗೆ ತೆಗೆದುಕೊಂಡು ನ್ಯಾಯಾಲಯ ಈ ಆದೇಶ ನೀಡಿದೆ.  

click me!