ಉಗ್ರರಿಗೆ ಮನೆಯಲ್ಲೇ ಆಶ್ರಯ ಕೊಟ್ಟಿದ್ದ ಡಿವೈಎಸ್ಪಿ!

By Suvarna NewsFirst Published Jan 14, 2020, 9:11 AM IST
Highlights

ಸೇನಾ ಮುಖ್ಯ ಕಚೇರಿಯ ಪಕ್ಕದ ಮನೆಯಲ್ಲೇ ಉಗ್ರರಿಗೆ ಆಶ್ರಯ | ಸೇವೆಯಿಂದ ದವಿಂದರ್ ಅಮಾನತು| ಶೌರ್ಯ ಪ್ರಶಸ್ತಿ ವಾಪಸ್

ನವದೆಹಲಿ[ಜ.14]: ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಜೊತೆ ತೆರಳುತ್ತಿದ್ದ ವೇಳೆ ಸಿಕ್ಕಿ ಬಿದ್ದ ಡಿವೈಎಸ್‌ಪಿ ದವೀಂದರ್ ಸಿಂಗ್, ತಮ್ಮ ಮನೆಯಲ್ಲೇ ಉಗ್ರರಿಗೆ ಆಶ್ರಯ ನೀಡಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಇನ್ನೂ ಆತಂಕದ ವಿಷಯವೆಂದರೆ ಬದಾಮಿ ಬಾಗ್ ಕಂಟೋನ್ಮೆಂಟ್ ಪ್ರದೇಶದಲ್ಲಿನ ಸೇನಾ ಮುಖ್ಯ ಕಚೇರಿಯ ಪಕ್ಕದಲ್ಲೇ ದವಿಂದರ್ ಮನೆ ಇತ್ತು. ಅದರಲ್ಲೇ ಆತ ಉಗ್ರರಿಗೆ ಆಶ್ರಯ ನೀಡಿದ್ದ ಎಂಬುದು ದವೀಂದರ್ ಸಿಂಗ್ ಮನೆ ಶೋಧಿಸಿದ ವೇಳೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಕಾಶ್ಮೀರ ಪೊಲೀಸ್ ಇಲಾಖೆ ಯು ದವಿಂದರ್ ಅವರನ್ನು ಹುದ್ದೆಯಿಂದ ಅಮಾನತು ಮಾಡಿದೆ.

ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಿಂದ ಮೂವರು ಹಿಜ್ಬುಲ್ ಉಗ್ರರನ್ನು ತೀವ್ರ ಭದ್ರತೆ ಇರುವ ಶ್ರೀನಗರದ ಬದಾಮಿ ಬಾಗ್ ಕಂಟೋನ್ಮೆಂಟ್‌ನಲ್ಲಿರುವ ತಮ್ಮ ಮನೆಗೆ ಕರೆತಂದಿದ್ದರು. ಹಿಜ್ಬುಲ್ ಕಮಾಂಡರ್ ನವೀದ್ ಬಾಬು ಮತ್ತು ಆತನ ಇಬ್ಬರು ಸಹಚರರಾದ ಇರ್ಫಾನ್ ಮತ್ತು ರಫಿ ಶುಕ್ರವಾರ ರಾತ್ರಿ ದವೀಂದರ್ ಮನೆಯಲ್ಲಿಯೇ ಕಳೆದಿದ್ದರು. ಶನಿವಾರ ಮುಂಜಾನೆ ಅವರು ಜಮ್ಮುವಿನಿಂದ ದೆಹಲಿಗೆ ತೆರಳಲು ಯೋಜಿಸಿದ್ದರು. ಈ ವೇಳೆ ಪೋಲೀಸರಿಗೆ ಸಿಕ್ಕಿಬಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಗ್ರರ ಜತೆ ಸಿಕ್ಕಿಬಿದ್ದ ಡಿವೈಎಸ್ಪಿ! : ಕಾರಿನಲ್ಲಿ ತೆರಳುತ್ತಿದ್ದಾಗ ಪೊಲೀಸ್‌ ಬಲೆಗೆ

ಇದೇ ವೇಳೆ ಉಗ್ರರು ತನಗೆ 12 ಲಕ್ಷ ರು. ನೀಡಿದ್ದರು. ಹೀಗಾಗಿ ಅವರನ್ನು ದೆಹಲಿಗೆ ಬಿಡಲು ಒಪ್ಪಿಕೊಂಡೆ ಎಂದು ದವೀಂದರ್ ಸಿಂಗ್ ವಿಚಾರಣೆ ವೇಳೆ ಹೇಳಿದ್ದಾರೆ.

ಶೌರ್ಯ ಪ್ರಶಸ್ತಿ ವಾಪಸ್

ಭಯೋತ್ಪಾದಕರ ಜೊತೆ ನಂಟು ಹೊಂದಿರುವ ಕಾರಣಕ್ಕಾಗಿ ಬಂಧಿತರಾಗಿರುವ ಡಿವೈಎಸ್‌ಪಿ ದವೀಂದರ್ ಸಿಂಗ್ ಅವರಿಗೆ ನೀಡಲಾದ ಶೌರ್ಯ ಪದಕವನ್ನು ಹಿಂಪಡೆದುಕೊಳ್ಳುವ ಸಾಧ್ಯತೆ ಇದೆ.

ಕಾಶ್ಮೀರ ಸೇತುವೆ ಕೆಳಗೆ 3 ಕೆಜಿ ಸ್ಫೋಟಕ ಪತ್ತೆ : ತಪ್ಪಿದ ಭಾರೀ ಅನಾಹುತ

ರಕ್ಷಣಾ ಪಡೆಗಳ ಸಮಯ ಪ್ರಜ್ಞೆಯಿಂದ ಜಮ್ಮು ಕಾಶ್ಮೀರದಲ್ಲಿ ಬಹುದೊಡ್ಡ ಅಪಾಯವೊಂದು ತಪ್ಪಿದೆ. ವಿಧ್ವಂಸಕ ಕೃತ್ಯ ಎಸಗಲು ಜಮ್ಮುವಿನ ಸೊಪೋರ್ ನ ಸೇತುವೆಯೊಂದರ ಕೆಳಗೆ ಇರಿಸಲಾಗಿದ್ದ 3 ಕೆಜಿ ಸುಧಾರಿತ ಸ್ಪೋಟಕವನ್ನು ರಕ್ಷಣಾ ಪಡೆಗಳು ಸೋಮವಾರ ಪತ್ತೆ ಹಚ್ಚಿ ಸಂಭಾವ್ಯ ಅನಾಹುತ ತಪ್ಪಿಸಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ ಆಗಮಿಸಿ ಸ್ಪೋಟಕವನ್ನು ನಾಶ ಪಡಿಸಿದೆ. ರಾಷ್ಟ್ರೀಯ ರೈಫಲ್ಸ್‌ನ ಪೊಲೀಸರು ಗಸ್ತು ತಿರುಗುವ ವೇಳೆ ಸ್ಪೋಟಕ ಪತ್ತೆಯಾಗಿದೆ.

click me!