ಪ್ರೀತಿಸಿದ ಹುಡುಗಿ ಬೆನ್ನಲ್ಲೇ ಪೋಷಕರು ತೋರಿಸಿದಾಕೆ ಜೊತೆಗೂ ಮದುವೆ, ಮೃತ ಕತೆ ಕಟ್ಟಿ ತಗ್ಲಾಕೊಂಡ

Published : Dec 29, 2025, 08:29 PM IST
Delhi Police

ಸಾರಾಂಶ

ಪ್ರೀತಿಸಿದ ಹುಡುಗಿ ಬೆನ್ನಲ್ಲೇ ಪೋಷಕರು ತೋರಿಸಿದಾಕೆ ಜೊತೆಗೂ ಮದುವೆ, ಮೃತ ಕತೆ ಕಟ್ಟಿ ತಗ್ಲಾಕೊಂಡ ಘಟನೆ ಇದು. ಅಪಘಾತದಲ್ಲಿ ಮೃತಪಟ್ಟ ರೀತಿ ಘಟನೆ ಸೃಷ್ಟಿ ಮಾಡಿದ್ದಾನೆ. ಪರಿಣಾಮ ಈತನ ಎರಡು ಮದುವೆಯಿಂದ ಹಿಡಿದು ಎಲ್ಲಾ ಕಳ್ಳಾಟ ಬಯಲಾಗಿದೆ. 

ಬಾಗೇಶ್ವರ (ಡಿ.29) ಪ್ರೀತಿಸಿದ ಹುಡುಗಿ ಜೊತೆ ಯಾರಿಗೂ ಗೊತ್ತಿಲ್ಲದ ಮದುವೆಯಾಗಿದ್ದಾನೆ. ಇದರ ಬೆನ್ನಲ್ಲೇ ಪೋಷಕರು ತೋರಿಸಿದ ಹುಡುಗಿಯನ್ನು ಮದುವೆಯಾಗಿದ್ದಾನೆ. ಕಳೆದ 6 ವರ್ಷಗಳಿಂದ ಸಂಸಾರ ನಡೆಸಿದ್ದಾನೆ. ಪ್ರೀತಿಸಿ ಮದುವೆಯಾದ ಪತ್ನಿಗೆ ಗೊತ್ತಿಲ್ಲ, ತನಗೆ ಇನ್ನೊಂದು ಮದುವೆಯಾಗಿದೆ ಎಂದು, ಇತ್ತ ಪೋಷಕರು ನಿಶ್ಚಯಿಸಿದ ಹುಡುಗಿಗೂ ಮೊದಲೇ ಮದುವೆಯಾಗಿದೆ ಅನ್ನೋದು ತಿಳಿದಿಲ್ಲ. ಸಂಸಾರ ಸಾಗಿದೆ. ಸಂಕಷ್ಟ ಹೆಚ್ಚಾಗಿದೆ. ಇಬ್ಬರು ಹೆಂಡತಿಯರನ್ನು ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಇದಕ್ಕಾಗಿ ಹೊಸ ಪ್ಲಾನ್ ಮಾಡಿದ್ದಾನೆ. ಸ್ಕೂಟರ್ ಅಪಾಘಾತದಲ್ಲಿ ಮೃತಪಟ್ಟ ನಕಲಿ ಕತೆ ಸೃಷ್ಟಿಸಿದ್ದಾನೆ. ಆದರೆ 6 ವರ್ಷದಿಂದ ಪಟ್ಟ ಕಷ್ಟವೆಲ್ಲಾ ಒಂದೇ ಒಂದು ನಕಲಿ ಕತೆಯಲ್ಲಿ ಬಟಾ ಬಯಲಾಗಿದೆ. ಇಬ್ಬರ ಹೆಂಡತಿಯರ ಮುದ್ದಿನ ಗಂಡ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಏನಿದು ಘಟನೆ?

ದೆಹಲಿಯ ಸಮಾಲ್ಕಾ ನಿವಾಸಿ ಮನೋಜ್ ಕುಮಾರ್ 2019ರಲ್ಲಿ ಮದುವೆಯಾದ ಬಳಿಕ ಅಲ್ಮೋರ ಜಿಲ್ಲೆಗೆ ಸ್ಥಳಾಂತರಗೊಂಡಿದ್ದಾನೆ. ಪೋಷಕರು ನಿಶ್ಚಯ ಮಾಡಿದ ಸರ್ಕಾರಿ ಶಾಲಾ ಶಿಕ್ಷಕಿಯನ್ನು ಮದುವೆಯಾಗಿದ್ದಾನೆ. ಆದರೆ ಈ ಮದುವೆಗೂ ಒಂದು ತಿಂಗಳ ಮೊದಲು ಪ್ರೀತಿಸಿದ ಅನ್ಯ ಧರ್ಮದ ಯುವತಿಯನ್ನು ಮನೋಜ್ ಕುಮಾರ್ ಮದುವೆಯಾಗಿದ್ದ.ವಿಶೇಷ ಅಂದರೆ ಮೊದಲ ಪತ್ನಿ ಹಾಗೂ ಎರಡನೇ ಪತ್ನಿ ಇಬ್ಬರೂ ಪತ್ನಿಯರಿಗೆ ಒಂದೊಂದು ಗಂಡು ಮಗು ಕರುಣಿಸಿದ್ದಾನೆ.

ಎರಡನೇ ಪತ್ನಿ ಅಂದರೆ ಪೋಷಕರು ನೋಡಿ ಮದುವೆಯಾದ ಶಿಕ್ಷಕಿಗಿಂತ ತಾನು ಪ್ರೀತಿಸಿ ಮದುವೆಯಾದ ಪತ್ನಿ ಮೇಲೆ ಪ್ರೀತಿ ಹೆಚ್ಚಾಗಿತ್ತು.ಆದರೆ ಹೇಳುವಂತಿಲ್ಲ. ಹೀಗಾಗಿ ಈ ಸಂಕಷ್ಟದಿಂದ ಹೊರಬರಲು ಪ್ಲಾನ್ ಮಾಡಿದ್ದಾನೆ.ಕೆಲಸವೂ ಇಲ್ಲದೆ ಅಲೆದಾಡುತ್ತಿದ್ದ ಈ ಮನೋಜ್ ಕುಮಾರ್ ಡಿಸೆಂಬರ್ 8 ರಂದು ಮೊದಲ ಪತ್ನಿಗೆ ಹೇಳಿ ನೈನಿತಾಲ್‌ಗೆ ಹೊರಟಿದ್ದಾನೆ. ಬ್ಯಾಂಕ್ ಕೆಲಸಕ್ಕಾಗಿ ಸಂದರ್ಶನ ಇದೆ ಎಂದು ಸ್ಕೂಟರ್ ಮೂಲಕ ತೆರಳಿದ್ದಾನೆ. ಸಂಜೆ ವೇಳೆಗೆ ಸಂದರ್ಶನ ಮುಗಿಸಿ ಮರಳಿ ಬರುತ್ತಿರುವುದಾಗಿ ಮೊದಲ ಪತ್ನಿಗೆ ಕರೆ ಮಾಡಿದ್ದಾನೆ. ಆದರೆ ಬರಲೇ ಇಲ್ಲ.

ಪೊಲೀಸರಿಗೆ ಮಿಸ್ಸಿಂಗ್ ದೂರು ದಾಖಲಿಸಿದ ಮೊದಲ ಪತ್ನಿ

ಮರು ದಿನ ಬೆಳಗ್ಗೆ ಅಂದರೆ ಡಿಸೆಂಬರ್ 9 ರಂದು ಮೊದಲ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇತ್ತ ಪೊಲೀಸರು ತನಿಖೆ ಆರಂಭಿಸಿದಾಗ ನೈನಿತಾಲ್ ಪ್ರಪಾತದಲ್ಲಿ ಸ್ಕೂಟರ್ ಪುಡಿ ಪುಡಿಯಾಗಿ ಪತ್ತೆಯಾಗಿದೆ. ಅಪಘಾತವಾಗಿ ಸ್ಕೂಟರ್ ಪ್ರವಾತಕ್ಕೆ ಉರುಳಿವುದಾಗಿ ಈಕ ನಕಲಿ ಕತೆಯೊಂದನ್ನು ಸೃಷ್ಟಿಸಿದ್ದಾನೆ. ಪ್ರಪಾತ, ಕಾಡಿನಲ್ಲಿ ಮನೋಜ್ ಕುಮಾರ್‌ಗಾಗಿ ಹುಡುಕಾಟ ಆರಂಭಗೊಂಡಿದೆ. ಇನ್ನು ಈ ರಸ್ತೆಯ ಸುತ್ತ ಮುತ್ತ ಸಿಸಿಟಿವಿ ಕೂಡ ಇಲ್ಲ. ಎಲ್ಲಾ ಕಡೆ ಹುಡುಕಾಡಿದ್ದಾರೆ. ಮೊಬೈಲ್ ಫೋನ್ ಸ್ವಿಚ್ ಆಫ್. ಲೋಕೇಶನ್ ಕೂಡ ಇದೇ ಅಪಘಾತ ಸ್ಥಳದಲ್ಲಿ ತೋರಿಸಿತ್ತು.

ಇದರ ನಡುವೆ ಮನೋಜ್ ಕುಮಾರ್ ಫೋನ್ ದೆಹಲಿ ಬಳಿ ಲೋಕೇಶನ್ ತೋರಿಸಿತ್ತು. ಅನುಮಾನಗೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾನೆ. ಈ ವೇಳೆ ಮನೋಜ್ ಕುಮಾರ್ ತಾನು ಪ್ರೀತಿಸಿ ಮದುವೆಯಾದ ಮೊದಲ ಪತ್ನಿ ಜೊತೆ ದೆಹಲಿಯಲ್ಲಿ ಹಾಯಾಗಿದ್ದ. ಪೊಲೀಸರು ಮನೋಜ್ ಕುಮಾರ್ ಅರೆಸ್ಟ್ ಮಾಡಿದ್ದಾರೆ. ಇದೀಗ ಮನೋಜ್ ಕುಮಾರ್ ಎರಡು ಮದುವೆ ಬಯಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತೀಯರು ಮನೆಗಳಲ್ಲಿ ಇಟ್ಟಿರುವ ಚಿನ್ನದ ಮೌಲ್ಯ ಎಷ್ಟು ಗೊತ್ತಾ? ಜಿಡಿಪಿಯನ್ನೇ ಮೀರಿಸಿ ದಾಖಲೆ
ಸಿಎಂ ಯೋಗಿ ಆದಿತ್ಯನಾಥ್ ರೀತಿ ಮಾತನಾಡಿ ಸರ್ಕಾರಿ ಶಾಲಾ ಶಿಕ್ಷಕಿ ಅಳುವಂತೆ ಮಾಡಿದ ಯುವಕ: ವೀಡಿಯೋ