Hijab Ban ಬಟ್ಟೆ ಧರಿಸುವುದು ಮೂಲಭೂತ ಹಕ್ಕಾದ್ರೆ ವಿವಸ್ತ್ರ ಕೂಡ ಹಕ್ಕು, ಸುಪ್ರೀಂ ಪ್ರಶ್ನೆಗೆ ಅರ್ಜಿದಾರರು ಕಕ್ಕಾಬಿಕ್ಕಿ

By Suvarna News  |  First Published Sep 7, 2022, 6:24 PM IST

ಹಿಜಾಬ್ ನಿಷೇಧಿಸಿ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್ ಈ ಕುರಿತು ವಿಚಾರಣೆ ನಡೆಸುತ್ತಿದೆ. ಈ ವೇಳೆ ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಖಡಕ್ ಪ್ರಶ್ನೆ ಕೇಳಿದೆ.  ಈ ಕುರಿತ ವಿವರ ಇಲ್ಲಿದೆ


ನವದೆಹಲಿ(ಸೆ.07):  ಹಿಜಾಬ್ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ವೇಳೆ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟೇಲಿರಿದ ಅರ್ಜಿದಾರರು ನ್ಯಾಯಮೂರ್ತಿಗಳ ಪ್ರಶ್ನೆಗೆ ಕಕ್ಕಾಬಿಕ್ಕಿಯಾಗಿದ್ದಾರೆ. ನಿಮ್ಮ ರೀತಿಯಲ್ಲೇ ವಾದ ಮಾಡುವುದಾದರೆ ಬಟ್ಟೆ ಧರಿಸುವುದು ಮೂಲಭೂತ ಹಕ್ಕಾದರೆ, ವಿವಸ್ತ್ರಗೊಳ್ಳುವುದು ಮೂಲಭೂತ ಹಕ್ಕಾಗಲಿದೆ. ಈ ರೀತಿಯ ವಾದಕ್ಕೆ ತಾರ್ಕಿಕ ಅಂತ್ಯ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಹೇಮಂತ್ ಗುಪ್ತ ಹೇಳಿದ್ದಾರೆ. ಇಷ್ಟೇ ಅಲ್ಲ ಹಿಜಾಬ್ ನಿಷೇಧ ವಿಚಾರಣೆಯನ್ನು ನಾಳೆ(ಸೆ.08) 11ಗಂಟೆಗೆ ಮುಂದೂಡಿದೆ.  ಇದೀಗ ಹಿಜಾಬ್ ನಿಷೇಧ ಮತ್ತೆ ಸದ್ದು ಮಾಡಲು ಆರಂಭಿಸಿದೆ. ಕರ್ನಾಟಕದಿಂದ ಆರಂಭಗೊಂಡು ದೇಶ ಹಾಗೂ ವಿಶ್ವದ ಹಲವು ಭಾಗಗಳಲ್ಲಿ ಹಿಜಾಬ್ ಭಾರಿ ಸಂಚಲನ ಸೃಷ್ಟಿಸಿತ್ತು. ಕರ್ನಾಟಕದಲ್ಲಿ ಗಲಭೆ, ಗದ್ದಲಕ್ಕೆ ಕಾರಣವಾದ ವಿವಾದಕ್ಕೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿತ್ತು. ಶಾಲೆಯಲ್ಲಿ ಹಿಜಾಬ್ ನಿಷೇಧಿಸಿ ತೀರ್ಪ ನೀಡಿತ್ತು. ಈ ಮೂಲಕ ಕರ್ನಾಟಕ ಸರ್ಕಾರ ಆದೇಶವನ್ನು ಎತ್ತಿ ಹಿಡಿದಿತ್ತು. ಆದರೆ ಈ ಆದೇಶ ಉಡುಪಿಯ ವಿದ್ಯಾರ್ಥಿನಿಯರು ಹಾಗೂ ಮುಸ್ಲಿಂ ಸಂಘಟನೆಗಳಿಗೆ ತೀವ್ರ ಹಿನ್ನಡೆ ತಂದಿತ್ತು. ಹೀಗಾಗಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಜಸ್ಟೀಸ್ ಹೇಮಂತ್ ಗುಪ್ತ, ವಿಚಾರಣೆ ಮುಂದೂಡಿದ್ದಾರೆ. 

Hijab Row: ಮೂಗುತಿ ಧಾರ್ಮಿಕ ಆಚರಣೆಯಲ್ಲ, ಮಂಗಳಸೂತ್ರ ಧಾರ್ಮಿಕ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ

Tap to resize

Latest Videos

ಅರ್ಜಿದಾರರ ಪರ ವಕೀಲ ದೇವದತ್ ಕಾಮತ್(devdutt kamath) ವಾದ ಮಂಡಿಸಿದರು. ಹುಡುಗಿಯರು ಹಿಜಾಬ್ ವಸ್ತ್ರವನ್ನು(Hijab) ಒತ್ತಾಯಪೂರ್ವಕವಾಗಿ ಧರಿಸುತ್ತಿಲ್ಲ. ಇಷ್ಟಪಟ್ಟು, ಧರಿಸುತ್ತಿದ್ದಾರೆ. ಆರ್ಟಿಕಲ್ 19ರ ಅಡಿಯಲ್ಲಿ ನಮಗೆ ಇಷ್ಟೇ ಬಂದ ಬಟ್ಟೆ ಧರಿಸಿವುದು ಮೂಲಭೂತ(Fundamental Rights) ಹಕ್ಕಾಗಿದೆ. ಆದರೆ ಕರ್ನಾಟಕದಲ್ಲಿ  ಹಿಜಾಬ್(Karnataka Hijab Ban) ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ದೇವದಾಸ್ ಕಾಮತ್ ವಾದ ಮಂಡಿಸಿದರು. ಕರ್ನಾಟಕ ಹೈಕೋರ್ಟ್‌ನಲ್ಲಿ(Karnataka High Coourt) ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಎಂದು ವಾದಿಸಿದ್ದ ಕಾಮತ್, ಇದೀಗ ಹಿಜಾಬ್ ಕೇವಲ ಬಟ್ಟೆಯಾಗಿದ್ದು, ಇದು ಮೂಲಭೂತ ಹಕ್ಕಿನ ಅಡಿಯಲ್ಲಿ ಬರಲಿದೆ. ಹೀಗಾಗಿ ಇದನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಕಾಮತ್ ವಾದಿಸಿದ್ದಾರೆ.

ನಿಮ್ಮ ರೀತಿಯ ವಾದ ಮಾಡುವುದಾದರೆ ಬಟ್ಟೆ ಧರಿಸುವುದು ಮೂಲಭೂತ ಹಕ್ಕಾದರೆ, ವಿವಸ್ತ್ರಗೊಳ್ಳುವುದು ಕೂಡ ಹಕ್ಕಾಗಲಿದೆ ಎಂದು ಜಸ್ಟೀಸ್ (Justice Hemant Gupta)ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ದೇವದತ್ ಕಾಮತ್, ನಾನು ಕ್ಲೀಷೆ ವಾದಕ್ಕೆ ಬಂದಿಲ್ಲ. ತರಗತಿಗಳಲ್ಲಿ ಯಾರೂ ವಿವಸ್ತ್ರಗೊಳ್ಳುವುದಿಲ್ಲ ಎಂದಿದ್ದಾರೆ.  ಹಾಗಾದರೆ ಹಿಜಾಬ್ ಧರಿಸಲು ನಿರ್ಬಂಧ ಹೇರಿಲ್ಲ, ಕೇವಲ ತರಗತಿಗಳಲ್ಲಿ(Class) ಮಾತ್ರ ನಿಷೇಧಿಸಲಾಗಿದೆ ಎಂದು ಜಸ್ಟೀಸ್ ಹೇಳಿದ್ದಾರೆ.

ಜಾತ್ಯಾತೀತ ರಾಷ್ಟ್ರದಲ್ಲಿ ಯಾಕೇ ಒಂದು ಧರ್ಮದ ಬಟ್ಟೆಗೆ ನಿರ್ಬಂಧ ಎಂದು ದೇವದತ್ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿವಾದ ಮಂಡಿಸಿದ ಜಸ್ಟೀಸ್, ಭಾರತದ ಮೂಲ ಸಂವಿಧಾನದಲ್ಲಿ ಜ್ಯಾತ್ಯಾತೀತೆ ಅನ್ನೋ ಪದವೇ ಇಲ್ಲ ಎಂದಿದ್ದಾರೆ. 

ಹಿಜಾಬ್‌ಗೆ ಸಿಗದ ಅನುಮತಿ ಕರಾವಳಿಯಲ್ಲಿ ಟೀಸಿ ಪಡೆದ ನೂರಾರು ಮುಸ್ಲಿಂ ವಿದ್ಯಾರ್ಥಿನಿಯರು!

ಹಿಜಾಬ್‌ ವಿವಾದಕ್ಕೆ ಸಂಬಂಧಿಸಿ ಮಾ.15ರಂದು ಮಹತ್ವದ ತೀರ್ಪು ನೀಡಿದ್ದ ಹೈಕೋರ್ಚ್‌, ಸರ್ಕಾರದ ಸಮವಸ್ತ್ರ ನೀತಿಯನ್ನು ಎತ್ತಿಹಿಡಿದಿತ್ತು. ಜತೆಗೆ, ಹಿಜಾಬ್‌ ಧರಿಸುವುದು ಇಸ್ಲಾಮಿನ ಅವಿಭಾಜ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ವ್ಯಾಖ್ಯಾನಿಸಿತ್ತು. ಇದನ್ನು ಪ್ರಶ್ನಿಸಿ ಉಡುಪಿ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಆರು ವಿದ್ಯಾರ್ಥಿಗಳು ಸೇರಿ ಒಟ್ಟು 24 ಮಂದಿ ಅರ್ಜಿ ದಾರರು ಸುಪ್ರೀಂ ಕೋರ್ಚ್‌ ಮೆಟ್ಟಿಲೇರಿದ್ದರು. ಈ ಅರ್ಜಿಗಳನ್ನು ನ್ಯಾ. ಹೇಮಂತ್‌ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯಪೀಠವು ವಿಚಾರಣೆ ನಡೆಸಿತು.

click me!