ಭಾರತದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ ಫೋಟೋಗ್ರಾಫರ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ.
ಒಡಿಶಾ(ಫೆ.12): ಭಾರತದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ(DRDO) ಕಾಂಟ್ರಾಕ್ಟ್ ಫೋಟೋಗ್ರಾಫರ್ ಈಶ್ವರ್ ಬೆಹೆರಾಗೆ ಒಡಿಶಾ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. DRDO ಅಭಿವೃದ್ಧಿ ಪಡಿಸಿದ ಮಿಸೈಲ್ ಗುರಿ ಕುರಿತ ರಸಹ್ಯ ಮಾಹಿತಿಗಳ ಫೋಟೋಗಳನ್ನು ಪಾಕಿಸ್ತಾನದ ಇಂಟೆಲೆಜೆನ್ಸಿ ಎಜೆನ್ಸಿ(ISI)ಗೆ ಸೋರಿಕೆ ಮಾಡಿದ್ದರು.
ಶತ್ರು ರಾಷ್ಟ್ರದಲ್ಲಿ ನಡುಕ: 2 ತಿಂಗಳಲ್ಲಿ ಭಾರತ ಯಶಸ್ವಿಯಾಗಿ ಪರೀಕ್ಷಿಸಿದ ಕ್ಷಿಪಣಿ ಲಿಸ್ಟ್!
undefined
ಮಿಸೈಲ್ ಟೆಸ್ಟಿಂಗ್ ವೇಳೆ, ಈಶ್ವರ್ ಬೆಹ್ರಾ ಸನಿಹದಲ್ಲಿದ್ದು ಫೋಟೋ, ವಿಡಿಯೋಗಳನ್ನು ಸೆರೆಹಿಡಿದ್ದಾರೆ. ಬಳಿಕ ಕ್ಯಾಮಾರ ರಿಪೇರಿ ಇದೆ ಎಂದು ಕೋಲ್ಕತಾ ತೆರಳಿದ್ದಾರೆ. ಬಳಿಕ ಕೋಲ್ಕತಾದಲ್ಲಿ ರಹಸ್ಯ ಫೋಟೋ ಹಾಗೂ ವಿಡಿಯೋಗಳನ್ನು ಪಾಕಿಸ್ತಾನದ ISI ಎಜೆಂಟ್‌ಗೆ ಹಸ್ತಾಂತರಿಸಿದ್ದಾರೆ.
ಭಾರತೀಯ ವಾಯುಸೇನೆಗೆ ಮತ್ತಷ್ಟು ಬಲ: ರುದ್ರಂ ಆ್ಯಂಟಿ ರೇಡಿಯೇಶನ್ ಕ್ಷಿಪಣಿ ಪರೀಕ್ಷೆ ಯಶಸ್ವಿ!
ಮಿಸೈಲ್ ಗುರಿ ಹಾಗೂ ಇತರ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪದಡಿ ಈಶ್ವರ್ ಬೆಹ್ರಾನನ್ನು ಅರೆಸ್ಟ್ ಮಾಡಲಾಗಿತ್ತು. ವಿಚಾರಣೆಯಲ್ಲಿ ಪೊಲೀಸರು ಹಲವು ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದರು. ISI ಎಜೆಂಟ್ ಜೊತೆ 10ಕ್ಕೂ ಹೆಚ್ಚು ಭಾರಿ ಫೋನ್ ಸಂಭಾಷಣೆ ನಡೆಸಿದ್ದರು. ಇಷ್ಟೇ ಅಲ್ಲ, ಅಬು ಧಾಬಿ, ಮುಂಬೈ, ಮೀರತ್, ಆಂಧ್ರ ಪ್ರದೇಶ ಹಾಗೂ ಬಿಹಾರದಿಂದ ಈಶ್ವರ್ ಬೆಹ್ರಾ ಖಾತೆಗೆ ಹಣ ವರ್ಗಾವಣೆಯಾಗಿದೆ.
ಈಶ್ವರ್ ಬೆಹ್ರಾ ಬಂಧನಕ್ಕೆ ಮುಂಚಿತವಾಗಿ ಗುಪ್ತಚರ ಇಲಾಖೆ (ಐಬಿ) ಕಣ್ಗಾವಲಿನಲ್ಲಿದ್ದರು. ಬೆಹೆರಾ ಅವರನ್ನು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 121 A ಮತ್ತು 120 B ಮತ್ತು ರಹಸ್ಯ ಕಾಯ್ದೆಯ (OSA) 3, 4, ಮತ್ತು 5 ರ ಅಡಿಯಲ್ಲಿ ಶಿಕ್ಷೆಗೊಳಪಡಿಸಲಾಗಿದೆ. ದೇಶದ ಭದ್ರತೆ ಕುರಿತು ಮಾಹಿತಿ ಸೋರಿಗೆ ಮಾಡಿದ ಹಾಗೂ ಪ್ರಕರಣದ ಗಂಭೀರತೆ ಅರಿತ ಕೋರ್ಟ್ ಜೀವಾವಾಧಿ ಶಿಕ್ಷೆ ವಿಧಿಸಿದೆ.