ಹೊಸದಾಗಿ ಮದುವೆಯಾಗಿದ್ದ ದಂಪತಿಯ ಮೊದಲ ರಾತ್ರಿಯ ಫೊಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.
ನವದೆಹಲಿ (ಫೆ.12) ನವ ಜೋಡಿಗೆ ಮೊದಲ ರಾತ್ರಿ ಅವಿಸ್ಮರಣೀಯ. ಆದರೆ, ಮದುಮಗನೊಬ್ಬ ತನ್ನ ಮೊದಲ ರಾತ್ರಿಯಂದು ಕಂಪ್ಯೂಟರ್ ಮುಂದೆ ಕುಳಿತು ಆಫಿಸ್ ಕೆಲಸ ನಿರ್ವಹಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತ ಮದುಮಗ ಕಂಪ್ಯೂಟರ್ ಮುಂದೆ ಕುಳಿತಿದ್ದರೆ, ಅತ್ತ ಮಂಚದ ಮೇಲಿರುವ ವಧು ಆತನಿಗಾಗಿ ಕಾಯುತ್ತಿದ್ದಾಳೆ.
ಈ ಫೋಟೋ ಈಗ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.
ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ರೀತಿಯಲ್ಲಿ ಚರ್ಚೆಯೂ ನಡೆದಿದೆ. ಇಂದಿನ ಯುವ ಪೀಳಿಗೆ ಕೆಲಸದ ಒತ್ತಡದಲ್ಲಿ ಯಾವ ರೀತಿ ಸಿಲುಕಿದ್ದಾರೆಂದು ಸಾಕಷ್ಟು ಚರ್ಚೆಗಳು ನಡೆದಿವೆ.