'ಈ ಬಾರಿ ಮೋದಿ ವಿಕಾಸ, ಮಮತಾ ವಿನಾಶ ಸಮರ'

By Kannadaprabha NewsFirst Published Feb 12, 2021, 10:43 AM IST
Highlights

ಮಮತಾ ಬ್ಯಾನರ್ಜಿ ಅವರೊಬ್ಬ ವಿಫಲ ಆಡಳಿತಗಾರ್ತಿ ಎಂದು ಗೃಹ ಸಚಿವ ಅಮಿತ್‌ ಶಾ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಮೋದಿ ವಿಕಾರ ಮಮತಾ ವಿನಾಶ ಎಂದು ಹೇಳಿದರು. 

ಕೂಚ್‌ಬೆಹರ್‌ (ಪಶ್ಚಿಮ ಬಂಗಾಳ): ಮುಂಬರುವ ಪಶ್ಚಿಮ ಬಂಗಾಳ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಾಸ್‌’ ಮಾದರಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ‘ವಿನಾಶ್‌’ ಮಾದರಿಯ ನಡುವಿನ ಸಮರವಾಗಿದೆ. ಮಮತಾ ಬ್ಯಾನರ್ಜಿ ಅವರೊಬ್ಬ ವಿಫಲ ಆಡಳಿತಗಾರ್ತಿ ಎಂದು ಗೃಹ ಸಚಿವ ಅಮಿತ್‌ ಶಾ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯ ಪರಿವರ್ತನ್‌ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಯಾತ್ರೆ ಮುಖ್ಯಮಂತ್ರಿಯನ್ನು, ಶಾಸಕರನ್ನು ಅಥವಾ ಮಂತ್ರಿಗಳನ್ನು ಬದಲಿಸುವ ಕಾರಣಕ್ಕಾಗಿ ಹಮ್ಮಿಕೊಂಡಿಲ್ಲ. ಬದಲಾಗಿ ರಾಜ್ಯದಲ್ಲಿ ನಡೆಯುತ್ತಿರುವ ಒಳನುಸುಳುವಿಕೆ ಮತ್ತು ಪಶ್ಚಿಮ ಬಂಗಾಳದ ಪರಿಸ್ಥಿತಿಯನ್ನು ಬದಲಿಸುವ ಸಲುವಾಗಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ನೀವು ಬಿಜೆಪಿಗೆ ಮತಹಾಕಿ ಅಧಿಕಾರಕ್ಕೆ ತಂದುನೋಡಿ. ಅಕ್ರಮ ವಲಸಿಗರ ಸಮಸ್ಯೆ ಇರುವುದಿಲ್ಲ. ಒಂದೇ ಒಂದು ಪಕ್ಷಿ ಕೂಡ ಗಡಿಯನ್ನು ದಾಟಿ ರಾಜ್ಯದ ಒಳಕ್ಕೆ ಪ್ರವೇಶಿಸಲು ಆಗುವುದಿಲ್ಲ ಎಂದು ಹೇಳಿದರು.

ಪೌರತ್ವ ಕಾಯ್ದೆ ಜಾರಿಗೆ ದಿನಾಂಕ ಫಿಕ್ಸ್ ಮಾಡಿದ ಅಮಿತ್ ಶಾ!

ಇದೇ ವೇಳೆ ಮೇನಲ್ಲಿ ನಡೆಯಲಿರುವ ಚುನಾವಣೆಯ ಬಳಿಕ ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಆಗಿ ಇರುವುದಿಲ್ಲ. ಆ ಬಳಿಕ ಮಮತಾ ಕೂಡ ಜೈ ಶ್ರೀರಾಮ್‌ ಎಂದು ಹೇಳಲು ಆರಂಭಿಸುತ್ತಾರೆ. ಒಂದು ವೇಳೆ ಬಂಗಾಳದಲ್ಲಿ ಅಲ್ಲದೇ ಇದ್ದರೆ ಪಾಕಿಸ್ತಾನದಲ್ಲಿ ಜೈ ಶ್ರೀರಾಮ್‌ ಘೋಷಣೆಯನ್ನು ಕೂಗಲು ಅಗುವುದೇ? ಬಂಗಾಳದಲ್ಲಿ ಯಾವ ರೀತಿಯ ವಾತಾವರಣ ಸೃಷ್ಟಿಆಗಿದೆಯೆಂದರೆ ಜೈ ಶ್ರೀರಾಮ್‌ ಎಂದು ಘೊಷಣೆ ಕೂಗುವುದು ಕೂಡ ಅಪರಾಧವಾಗಿದೆ ಎಂದು ವಾಗ್ದಾಳಿ ನಡೆಸಿದರು.

click me!