Viral Video: ಅಟಲ್‌ ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ, ಜುಟ್ಟು ಹಿಡಿದು ರಕ್ಷಿಸಿದ ಕ್ಯಾಬ್‌ ಡ್ರೈವರ್!

By Santosh Naik  |  First Published Aug 17, 2024, 8:55 AM IST

police safeguards woman in Atal Setu ನಾಟಕೀಯ ಎನಿಸುವಂತ ಕ್ಷಣದಲ್ಲಿ ಅಟಲ್‌ ಸೇತುವಿನಿಂದ ಜಿಗಿದು ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸುವಾಗ ಕ್ಯಾಬ್‌ ಡ್ರೈವರ್‌, ಆಕೆಯ ಜುಟ್ಟು ಹಿಡಿದು ಕಾಪಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. 


ಮುಂಬೈ (ಆ.17): ಅಚ್ಚರಿಯ ಘಟನೆಯಲ್ಲಿ ಶುಕ್ರವಾರ ಸಂಜೆ  ಮುಂಬೈನ ಮುಲುಂಡ್‌ನ ರೀಮಾ ಮುಖೇಶ್ ಪಟೇಲ್ ಎಂದು ಗುರುತಿಸಲಾದ 56 ವರ್ಷದ ಮಹಿಳೆಯನ್ನು ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್, ಅಟಲ್ ಸೇತುನಲ್ಲಿ ಆತ್ಮಹತ್ಯೆ ಪ್ರಯತ್ನದಿಂದ ನಾಟಕೀಯವಾಗಿ ರಕ್ಷಣೆ ಮಾಡಲಾಗಿದೆ. ಆಕೆಯ ಆತ್ಮಹತ್ಯೆ ಪ್ರಯತ್ನವನ್ನು ವಿಫಲಗೊಳಿಸಿದ ಸಂಪೂರ್ಣ ಕಾರ್ಯಾಚರಣೆಯ ವಿಡಿಯೋಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ಕ್ಯಾಬ್‌ ಡ್ರೈವರ್‌ ಹಾಗೂ ಪೊಲೀಸ್‌ ಅಧಿಕಾರಿಗಳ ಧೈರ್ಯದ ಕಾರಣದಿಂದಾಗಿ ಮಹಿಳೆಯೊಬ್ಬಳ ಜೀವ ಉಳಿದಂತಾಗಿದೆ. ವೈರಲ್‌ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ಅಟಲ್‌ ಸೇತುವಿನ ಸೇಫ್ಟಿ ಬ್ಯಾರಿಯರ್‌ ಮೇಲೆ ಕುಳಿತುಕೊಂಡಿದ್ದು ಕಾಣಿಸಿದೆ. ಇನ್ನೇನು ಆಕೆ ಸಮುದ್ರಕ್ಕೆ ಹಾರಿ ಪ್ರಾಣ ಕಳೆದುಕೊಳ್ಳಬೇಕು ಎನ್ನುವ ಹಂತದಲ್ಲಿ ಸಮಯಪ್ರಜ್ಞೆ ಮೆರೆದ ಕ್ಯಾಬ್‌ ಡ್ರೈವರ್‌ ಆಕೆಯ ಜುಟ್ಟನ್ನು ಹಿಡಿದುಕೊಂಡಿದ್ದ, ಈ ವೇಳೆ ಅಟಲ್‌ ಸೇತುವಿನಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕ ಆಗಮಿಸಿ ಆಕೆಯನ್ನು ಮೇಲಕ್ಕೆತ್ತುವ ಮೂಲಕ, ಜೀವನದ ಅತ್ಯಂತ ಕಠಿಣ ಹೆಜ್ಜೆ ಇಡಲು ಹೋಗಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಅಂದಾಜು ಒಂದು ನಿಮಿಷದ ಕಾರ್ಯಾಚರಣೆಯ ಬಳಿಕ ಮಹಿಳೆಯನ್ನು ಯಶಸ್ವಿಯಾಗಿ ರಕ್ಷಿಸಲಾಯಿತು.

ಅಟಲ್ ಸೇತು ಸೇತುವೆ ಎಂದೂ ಕರೆಯಲ್ಪಡುವ ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ (MTHL) ನ ಸಿಸಿಟಿವಿ ದೃಶ್ಯಗಳಲ್ಲಿ, ಕ್ಯಾಬ್ ಚಾಲಕ ಮಹಿಳೆಯ ಕೂದಲನ್ನು ಹಿಡಿದುಕೊಂಡಿರುವುದು ದಾಖಲಾಗಿದೆ, ಅದೇ ಸಮಯದಲ್ಲಿ, ಟ್ರಾಫಿಕ್ ಸಿಬ್ಬಂದಿ ರೇಲಿಂಗ್ ಮೇಲೆ ಹತ್ತಿ ಮಹಿಳೆಯನ್ನು ರಕ್ಷಿಸಿದ್ದಾರೆ.

Tap to resize

Latest Videos

"ನಮ್ಮ ಪೆಟ್ರೋಲಿಂಗ್ ವ್ಯಾನ್ ಅದೇ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಪಾರ್ಕ್‌ ಮಾಡಿದ್ದ ಕಾರನ್ನು ಗಮನಿಸಿದರು. ಅಲ್ಲದೆ, ಶೆಲಾರ್ ಟೋಲ್ ನಾಕಾದ ಟೋಲ್ ಬೂತ್ ಸಿಬ್ಬಂದಿ ಸೇತುವೆಯ ಮೇಲೆ ಕಾರು ನಿಲ್ಲಿಸಿರುವುದನ್ನು ಮತ್ತು ಮಹಿಳೆಯೊಬ್ಬರು ರೇಲಿಂಗ್‌ನಲ್ಲಿ ಇರುವುದನ್ನು ಗಮನಿಸಿದ ನಂತರ ಪೊಲೀಸ್ ತಂಡಕ್ಕೆ ಎಚ್ಚರಿಕೆ ನೀಡಿದ್ದರು." ನ್ಹವಾ ಶೇವಾ ಸಂಚಾರ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ಗುಲ್ಫರೋಜ್ ಮುಜಾವರ್ ತಿಳಿಸಿದ್ದಾರೆ.

ಈ ಹಂತದಲ್ಲಿ ಪೊಲೀಸ್ ಪೇದೆಗಳಾದ ಲಲಿತ್ ಅಮರಶೇಟ್, ಕಿರಣ್ ಮ್ಹಾತ್ರೆ, ಯಶ್ ಸೋನಾವಾನೆ ಅವರನ್ನೊಳಗೊಂಡ ತಂಡವು ರೈಲಿಂಗ್ ಮೇಲೆ ಹತ್ತಿ ಮಹಿಳೆಯ ರಕ್ಷಣೆ ಮಾಡಿದ್ದಾರೆ, ಆರಂಭದಲ್ಲಿ ಕ್ಯಾಬ್ ಚಾಲಕ ಸಂಜಯ್ ದ್ವಾರಕಾ ಯಾದವ್ (31) ಆಕೆಯ ಜುಟ್ಟನ್ನು ಹಿಡಿದಿದ್ದರು. ನ್ಹವಾ ಶೇವಾ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ತಾನು ಕೆಲವು ಆಚರಣೆಗಳ ಭಾಗವಾಗಿ ದೇವರ ಫೋಟೋಗಳನ್ನು ನೀರಿಗೆ ಎಸೆಯಲು ಹೋಗಿದ್ದೆ ಎಂದು ಮಹಿಳೆ ಹೇಳಿದ್ದಾರೆ.

ಅಟಲ್ ಸೇತು ಮೇಲೆ ಕಾರು ನಿಲ್ಲಿಸಿ ಸಮುದ್ರಕ್ಕೆ ಹಾರಿದ ಇಂಜಿನಿಯರ್: ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಮೊದಲು ತಾನು ಐರೋಲಿ ಸೇತುವೆಗೆ ಹೋಗಿದ್ದೆ. ಆದರೆ, ಆಕೆಯ ಆಧ್ಮಾತ್ಮಿಕ ಗುರುಗಳು ನೀರು ಸ್ವಲ್ಪ ಆಳವಾಗಿರಬೇಕು ಎಂದು ಹೇಳಿದ್ದರು. ಆ ಕಾರಣದಿಂದಾಗಿ ಆಕೆ ಮುಂಬೈ ಕಡೆಯಿಂದ ಅಟಲ್‌ ಸೇತು ಸೇತುವೆಗೆ ಹೋಗಿ ರೇಲಿಂಗ್‌ಅನ್ನು ಹತ್ತು ಫೋಟೋಗಳನ್ನು ಒಂದೊಂದಾಗಿ ಎಸೆಯುತ್ತಿದ್ದಳು. ಕೆಲವು ಫೋಟೋಗಳನ್ನು ಎಸೆಯುವಾಗ ಆಕೆ ಅಳುತ್ತಿದ್ದಳು ಎಂದು ನ್ಹವಾ ಶೇವಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅಂಜುಮ್ ಬಾಗ್ವಾನ್ ಹೇಳಿದ್ದಾರೆ. ತಾನು ಎಸೆಯುತ್ತಿದ್ದಾಗ ಟ್ರಾಫಿಕ್ ಪೋಲೀಸರ ಜೀಪಿನ ಸದ್ದು ಕೇಳಿ ಬ್ಯಾಲೆನ್ಸ್ ಕಳೆದುಕೊಂಡು ಬಿದ್ದೆ ಎಂದು ಹೇಳಿಕೊಂಡಿದ್ದಾಳೆ. "ಕ್ಯಾಬ್ ಡ್ರೈವರ್‌ಗೆ ಇದು ಅನುಮಾನಾಸ್ಪದವಾಗಿತ್ತು. ಆದ್ದರಿಂದ ಅವಳು ಫೋಟೋಗಳನ್ನು ಎಸೆಯುವಾಗ ಅವನು ಅವಳ ಬಳಿ ನಿಂತಿದ್ದ.

5 ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ದೇಶದ ಅತೀ ಉದ್ದದ ಸೀ ಬ್ರಿಡ್ಜ್‌ ಅಟಲ್‌ ಸೇತುವಿನಲ್ಲಿ ಬಿರುಕು

ಹಾಗೇನಾದರೂ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಲ್ಲಿ ಕೂದಲು ಹಿಡಿದು ಹಿಡಿಯಬಹುದು ಎನ್ನುವ ಪ್ರಜ್ಞೆಯಲ್ಲಿದ್ದ. ಕೊನೆಗೆ ಇದೇ ರೀತಿ ಆದಾಗ ಈ ಸಾಹಸವನ್ನೇ ಮಾಡಿದ್ದಾನೆ. ಬಳಿಕ ಟ್ರಾಫಿಕ್‌ ತಂಡ ಅವಳನ್ನು ರಕ್ಷಣೆ ಮಾಡಿದೆ ಎಂದು ಬಾಗ್‌ವಾನ್‌ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಪಟೇಲ್ ಅವರ ಸಂಬಂಧಿಯೊಬ್ಬರು ನೀಡಿರುವ ಮಾಹಿತಿ ಏನೆಂದರೆ, ಅವರಿಗೆ ಮಕ್ಕಳಿಲ್ಲದ ಕಾರಣ ಕೆಲವು ಸಮಯದಿಂದ ಮಾನಸಿಕವಾಗಿ ತೊಂದರೆಗೀಡಾಗಿದ್ದರು ಎಂದು ಹೇಳಿದ್ದಾರೆ. ಘಟನೆಯ ವೇಳೆ ಪುಣೆಯಲ್ಲಿದ್ದ ಆಕೆಯ ಪತಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

Viewers Discretion Advised

Responding promptly to an attempt to die by suicide at MTHL Atal Setu, the on-duty officials, PN Lalit Shirsat, PN Kiran Mahtre, PC Yash Sonawane & PC Mayur Patil of jumped over the railing & rescued the individual saving her life.

I… pic.twitter.com/h9JYayucLk

— पोलीस आयुक्त, बृहन्मुंबई - CP Mumbai Police (@CPMumbaiPolice)
click me!