ಸಂಕಷ್ಟದಲ್ಲಿ ರಾಜ ಮನೆತನ: ಕೌಟುಂಬಿಕ ದೌರ್ಜನ್ಯ ದೂರು ದಾಖಲಿಸಿದ ಸೊಸೆ

Published : May 21, 2023, 03:07 PM ISTUpdated : May 22, 2023, 06:40 AM IST
ಸಂಕಷ್ಟದಲ್ಲಿ ರಾಜ ಮನೆತನ: ಕೌಟುಂಬಿಕ ದೌರ್ಜನ್ಯ  ದೂರು ದಾಖಲಿಸಿದ ಸೊಸೆ

ಸಾರಾಂಶ

ಒಡಿಶಾದ ಬಲಂಗೀರ್ ರಾಜ ಮನೆತನದ ವಿರುದ್ಧ ಸೊಸೆ ಅದ್ರಿಜಾ ಮಂಜರಿ ಸಿಂಗ್ ಡೆಹ್ರಾಡೂನ್‌ನಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದು, ಇದರಿಂದ ರಾಜಮನೆತನದವರು ಸಂಕಷ್ಟಕ್ಕೀಡಾಗಿದ್ದಾರೆ.

ಡೆಹ್ರಾಡೂನ್/ಭುವನೇಶ್ವರ: ಒಡಿಶಾದ ಬಲಂಗೀರ್ ರಾಜ ಮನೆತನದ ವಿರುದ್ಧ ಸೊಸೆ ಅದ್ರಿಜಾ ಮಂಜರಿ ಸಿಂಗ್ ಡೆಹ್ರಾಡೂನ್‌ನಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದು, ಇದರಿಂದ ರಾಜಮನೆತನದವರು ಸಂಕಷ್ಟಕ್ಕೀಡಾಗಿದ್ದಾರೆ. ಅದ್ರಿಜಾ ಮಂಜರಿ ಸಿಂಗ್ ಅವರು ದೇಶದ ಮಾಜಿ ಪ್ರಧಾನಿ ವಿಪಿ ಸಿಂಗ್ ಅವರ ಮೊಮ್ಮಗಳಾಗಿದ್ದು, ಒಡಿಶಾ ರಾಜ ಮನೆತನದ ಅರ್ಕೇಶ್ ನಾರಾಯಣ ಸಿಂಗ್ ದಿಯೋ (Arkesh Narayan Singh Deo) ಅವರನ್ನು ವಿವಾಹವಾಗಿದ್ದರು.  ತನ್ನ ಮೇಲೆ ಪತಿ ಕುಟುಂಬದವರು ದೌರ್ಜನ್ಯವೆಸಗಿದ್ದು, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರು ಕ್ರಮ ಕೈಗೊಂಡಿಲ್ಲ ಎಂದು ಈಗ ಅದ್ರಿಜಾ  ಉತ್ತರಾಖಂಡ್‌ನ   ಡಿಜಿಪಿ ಅಶೋಕ್ ಕುಮಾರ್ ಅವರ ಬಳಿ ದೂರು ನೀಡಿದ್ದು,  ಈಕೆ ನೀಡಿದ ದೂರಿನ ಆಧಾರದ ಮೇಲೆ ಬಲಂಗೀರ್ ರಾಜ ಕುಟುಂಬದ ಐವರ ವಿರುದ್ಧ ಡೆಹ್ರಾಡೂನ್‌ನಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಡಿಜಿಪಿ ಈ ಬಗ್ಗೆ ತನಿಖೆ ಮಾಡುವಂತೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ದಿಲೀಪ್ ಸಿಂಗ್ ಕುನ್ವಾರ್ ಅವರಿಗೆ ಆದೇಶಿಸಿದ್ದಾರೆ.

ಇತ್ತ ಈಕೆ ವಿವಾಹವಾಗಿರುವ ಅರ್ಕೇಶ್ ನಾರಾಯಣ್, ಒಡಿಶಾದ ಹಿರಿಯ ರಾಜಕಾರಣಿ, ಬಿಜು ಜನತಾ ದಳದ (Biju Janata Dal) ಹಿರಿಯ ನಾಯಕ ಮತ್ತು ಮಾಜಿ ಸಚಿವ ಎ.ಯು. ಸಿಂಗ್ ದೇವ್ (AU Singh Deo) ಅವರ ಪುತ್ರನಾಗಿದ್ದು,  2019 ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.  2017ರ ನವೆಂಬರ್ 23 ರಂದು ಇವರಿಬ್ಬರ ವಿವಾಹ ನಡೆದಿತ್ತು. 

ಈಗ ಈ ಅರ್ಕೇಶ್ ಕುಟುಂಬದ (Balangir royal family) ವಿರುದ್ಧ ಪತ್ನಿ ಅದ್ರಿಜಾ (Adrija Manjari Singh) ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅದ್ರಿಜಾ,  ಪ್ರತಿ ಗಂಡ ಹೆಂಡತಿ ಮಧ್ಯೆ ಭಿನ್ನಾಭಿಪ್ರಾಯವಿರುತ್ತದೆ. ನನ್ನ ತಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸಮಯದಲ್ಲಿ ನಾನು ಅವರನ್ನು ಭೇಟಿಯಾಗಲು ಬಯಸಿದ್ದೆ. ಈ ಬಗ್ಗೆ  ಗಂಡನ ಮನೆಯವರನ್ನು ಕೇಳಿದಾಗ ನನ್ನನ್ನು ಕಳಿಸಲು ಮುಂದಾಗದೇ ಅದಕ್ಕೆ ಅಡ್ಡಗಾಲಿಟ್ಟರು.  ಆ ನಂತರ ನನಗೆ ಚಿತ್ರಹಿಂಸೆ ಹೆಚ್ಚಾಯಿತು ಎಂದು ಅದ್ರಿಜಾ ಆರೋಪಿಸಿದ್ದಾರೆ.

ಬ್ರಿಟನ್ ರಾಜಕುಮಾರ ಹ್ಯಾರಿ ಆತ್ಮಕತೆ 'ಸ್ಪೇರ್' ಮೊದಲ ದಿನವೇ ದಾಖಲೆಯ ಮಾರಾಟ

ಮೇ 13 ರಂದು, ಈ ವಿಚಾರ ಎಷ್ಟು ವಿಕೋಪಕ್ಕೆ  ಎಂದರೆ ನನ್ನನ್ನು ಕೊಲ್ಲಲು ನನ್ನ ಪತಿ ಕೆಲವು ಮಹಿಳೆಯರನ್ನು ಕಳುಹಿಸಿದ್ದರು. ಅಲ್ಲದೇ ನನ್ನ ಅತ್ತೆ ಮನೆಯವರು ಪರಸ್ಪರ ಒಪ್ಪಿಗೆಯ ವಿಚ್ಛೇದನ (mutual divorce) ಪಡೆಯುವಂತೆ ನನ್ನನ್ನು ಆಗ್ರಹಿಸಿದರು ಎಂದು ಆದ್ರಿಜಾ ಆರೋಪಿಸಿದ್ದು, ಈ ಆರೋಪವನ್ನು ಆಕೆಯ ಪತಿ ಅರ್ಕೇಶ್ ಸಿಂಗ್ ತಳ್ಳಿ ಹಾಕಿದ್ದಾರೆ. ಅದ್ರಿಜಾ ಆರೋಪಗಳು ಸತ್ಯಕ್ಕೆ ದೂರವಾದುದು.  ಅವುಗಳು ಕಟ್ಟುಕತೆಗಳಾಗಿವೆ. ಪ್ರಸ್ತುತ ಡೆಹ್ರಾಡೂನ್ ನ್ಯಾಯಾಲಯದಲ್ಲಿ (Dehradun court) ಈ ಪ್ರಕರಣ ವಿಚಾರಣೆಯಲ್ಲಿದೆ. ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ಸತ್ಯ ಶೀಘ್ರದಲ್ಲೇ ಮುನ್ನೆಲೆಗೆ ಬರುತ್ತದೆ ಎಂದು ಅರ್ಕೇಶ್ ಹೇಳಿದ್ದಾರೆ. 

2019 ರಲ್ಲಿ ಬಲಂಗೀರ್ ವಿಧಾನಸಭಾ (Balangir assembly) ಕ್ಷೇತ್ರದಿಂದ ಅರ್ಕೇಶ್ ಚುನಾವಣೆಗೆ ಸ್ಪರ್ಧಿಸಿದ್ದಾಗ ಅದ್ರಿಜಾ ಅವರು ಪತಿ ಪರ ಸ್ಟಾರ್ ಪ್ರಚಾರಕರಾಗಿದ್ದರು (star campaigner). ಆದರೆ ಚುನಾವಣೆಯಲ್ಲಿ ಸೋತ ನಂತರ ದಂಪತಿಗಳು ಡೆಹ್ರಾಡೂನ್‌ನಲ್ಲಿ ಉಳಿಯಲು ಪ್ರಾರಂಭಿಸಿದರು. ಅದ್ರಿಜಾ ತನ್ನ ವಿರುದ್ಧವೇ ಕೇಸ್ ದಾಖಲಿಸಿದ ನಂತ ನಾನು ಮನೆಬಿಟ್ಟು ಬಂದೇ ಎಂದು ಅರ್ಕೇಶ್ ಹೇಳಿದ್ದಾರೆ. ಪ್ರಸ್ತುತ ಅವಳ ಸಹೋದರಿ ಆಕೆಯ ಜೊತೆ ವಾಸಿಸುತ್ತಿದ್ದಾರೆ. ಅವಳ ತಂದೆಯೂ ಪ್ರತಿ 15 ದಿನಗಳಿಗೊಮ್ಮೆ ಬಂದು ಆಕೆಯ ಜೊತೆಗಿರುತ್ತಾರೆ.  ನಾನು ಅಲ್ಲಿರುವ ನನ್ನ ವಸ್ತುಗಳನ್ನು ತೆಗೆದುಕೊಳ್ಳಲು ತಿಂಗಳಿಗೊಮ್ಮೆ ಆ ಮನೆಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.  

ಎಲಿಜಬೆತ್ ಸಾವು : ಡಯಾನಗಾಗಿ ಮಿಡಿಯುತ್ತಿರುವ ಬ್ರಿಟನ್ ಜನ

ಅದ್ರಿಜಾಳ ತಂದೆ( ಮಾವ) ಸಹರಾನ್‌ಪುರದ ಭೂ ಮಾಫಿಯಾದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದೂ ಅರ್ಕೇಶ್ ಆರೋಪಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Morphing Wing: ಹಾರಾಡುವಾಗಲೇ ಕ್ಷಣ ಮಾತ್ರದಲ್ಲಿ ಬದಲಾಗುತ್ತೆ ಫೈಟರ್‌ ಜೆಟ್‌ ಶೇಪ್‌, ಹೊಸ ಟೆಕ್ನಾಲಜಿ ಪರೀಕ್ಷಿಸಿದ ಡಿಆರ್‌ಡಿಓ
ವೈರಲ್ ಮೀಮ್ಸ್ ಆಗಿದ್ದ ಯುವಕನ ಫೋಟೋದ ಹಿಂದಿದೆ ನೋವಿನ ಕತೆ: 38 ವರ್ಷ ಬರೀ ದ್ರವಾಹಾರದಲ್ಲೇ ಬದುಕಿದ್ದ ಪಂಚಾಲ್