
ಚೆನ್ನೈ: ಇಲ್ಲಿನ ಅಮೆರಿಕ ದೂತವಾಸ ಕಚೇರಿಯ ಮುಖ್ಯಸ್ಥರಾಗಿ (ಕಾನ್ಸಲ್ ಜನರಲ್) ಕ್ರಿಸ್ಟೋಫರ್ ಡಬ್ಲ್ಯು ಹಾಡ್ಜಸ್ ಅವರು ಸೋಮವಾರ ನೇಮಕಗೊಂಡಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಮತ್ತಷ್ಟು ಹತ್ತಿರ ತರುವುದಕ್ಕೆ ಅಮೆರಿಕದ ಪ್ರಜೆಗಳಿಗೆ ಬೆಂಬಲ ಒದಗಿಸುತ್ತಿರುವುದಕ್ಕೆ ಹೆಮ್ಮೆಯಿದೆ ಎಂದು ಅವರು ಹೇಳಿದ್ದಾರೆ.
ಅಧಿಕಾರಿ ವಹಿಸಿಕೊಂಡ ಬಳಿಕ ಮಾತನಾಡಿದ ಹಾಡ್ಜಸ್, ‘ಅಮೆರಿಕ ಮತ್ತು ಭಾರತದ ನಡುವಿನ ಸಹಭಾಗಿತ್ವದ ಮಹತ್ವದ ಹೊತ್ತಿನಲ್ಲಿ ದಕ್ಷಿಣ ಭಾರತದಲ್ಲಿ ಅಮೆರಿಕವನ್ನು ಪ್ರತಿನಿಧಿಸುತ್ತಿರುವ ಗೌರವ ನನ್ನದು. ನಾವು ಸ್ಥಳೀಯ ಮತ್ತು ಪ್ರಾದೇಶಿಕವಾಗಿ ಮಾಡುವ ಕೆಲಸಗಳು ಉಭಯ ದೇಶಗಳ ನಡುವಿನ ವಾಣಿಜ್ಯ ಮತ್ತು ಶೈಕ್ಷಣಿಕ ಸಂಬಂಧಗಳು ಮತ್ತು ಬಾಹ್ಯಾಕಾಶ ವಲಯವೂ ಸೇರಿದಂತೆ ದ್ವಿಪಕ್ಷೀಯ ಸಹಭಾಗಿತ್ವವನ್ನು ವಿಸ್ತಾರಗೊಳಿಸುವಲ್ಲಿ ಕೊಡುಗೆ ನೀಡುತ್ತವೆ’ ಎಂದು ಹೇಳಿದರು.
ಬೆಂಗಳೂರಲ್ಲೂ US ರಾಯಭಾರ ಕಚೇರಿ: H1B Visa ನಿಯಮ ಬದಲಾಗಿ ಭಾರತೀಯ ಟೆಕ್ಕಿಗಳಿಗೆ ಅನುಕೂಲ
‘ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ 2 ಸರ್ಕಾರಗಳ ನಡುವೆ ಮಾತ್ರವಲ್ಲ, ಅದು ಉಭಯ ದೇಶಗಳ ಜನರ ನಡುವಿನ ಸಂಬಂಧವಾಗಿದೆ. ನಮ್ಮ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ, ಕೇರಳ, ತಮಿಳುನಾಡು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ನಿಕೊಬಾರ್ ದ್ವೀಪ ಸಮೂಹ, ಲಕ್ಷದ್ವೀಪ ಮತ್ತು ಪುದುಚೆರಿಗಳಲ್ಲಿ ಸಂಬಂಧವನ್ನು ಮತ್ತಷ್ಟುಗಟ್ಟಿಗೊಳಿಸಲು ಎದುರು ನೋಡುತ್ತಿದ್ದೇನೆ’ ಎಂದು ಅವರು ಹೇಳಿದರು.
ಚೆನ್ನೈ ದೂತವಾಸ ಕಚೇರಿಯ ಮುಖ್ಯಸ್ಥರಾಗುವ ಮೊದಲು ಹಾಡ್ಜಸ್, ಕೋಆರ್ಡಿನೇಟರ್ ಫಾರ್ ಅಫ್ಘನ್ ರಿಲೊಕೇಶನ್ ಎಕ್ಸ್ಫರ್ಟ್ ಕಚೇರಿಯ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಅವರು ಜೆರುಸಲೇಂ, ವಿಯೆಟ್ನಾಂ, ಘಾನಾ, ಆಸ್ಟ್ರಿಯಾ, ಜರ್ಮನಿ, ಸ್ವಿಜರ್ಲೆಂಡ್‌ಗಳಲ್ಲಿ ಅಮೆರಿಕ ಪರವಾಗಿ ಕೆಲಸ ಮಾಡಿದ್ದಾರೆ.
ಭಾರತದ ರಾಷ್ಟ್ರಧ್ವಜ ಕೆಳಗಿಳಿಸಿದ ಓರ್ವನ ಬಂಧನ: ಇನ್ನಷ್ಟು ದೊಡ್ಡ ರಾಷ್ಟ್ರಧ್ವಜ ಹಾರಿಸಿದ ದೂತಾವಾಸ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ