ಟ್ರಾಫಿಕ್‌ ಜಾಮ್‌ಗೆ ಕಾರಣವಾದ ಪಾರ್ಕ್‌ ಮಾಡಿದ್ದ ಕಾರು: ಹತ್ತಿರ ಹೋಗಿ ಕಾರೊಳಗೆ ಇಣುಕಿ ನೋಡಿದವರಿಗೆ ಶಾಕ್

Published : Aug 01, 2025, 02:28 PM ISTUpdated : Aug 01, 2025, 02:34 PM IST
Car Left Abandoned with Dog in Driver's Seat

ಸಾರಾಂಶ

ಮುಂಬೈನಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವಾದ ಕೆಂಪು ಕಾರಿನಲ್ಲಿ ನಾಯಿಯೊಂದು ಚಾಲಕನ ಸೀಟಿನಲ್ಲಿ ಕುಳಿತಿದ್ದ ವಿಡಿಯೋ ವೈರಲ್ ಆಗಿದೆ. ಈ ಘಟನೆ ಲೋಖಂಡ್ವಾಲಾ ಮಾರುಕಟ್ಟೆಯಲ್ಲಿ ನಡೆದಿದ್ದು, ವಾಹನ ಸವಾರರಲ್ಲಿ ಆಶ್ಚರ್ಯ ಮತ್ತು ನಗುವನ್ನುಂಟುಮಾಡಿದೆ.

ಬೆಂಗಳೂರು , ಮುಂಬೈ, ದೆಹಲಿ ಮುಂತಾದ ಮಹಾನಗರಗಳಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ. ವಾಹನಗಳ ಸಂಖ್ಯೆ ಅಡ್ಡಾದಿಡ್ಡಿ ಓಡಿಸುವುದು ವಾಹನಗಳ ಸಂಖ್ಯೆ ಹೆಚ್ಚಾಗಿರುವುದು, ರಸ್ತೆಗಳು ಸರಿಯಾಗಿ ಇಲ್ಲದಿರುವುದು ಈ ವಾಹನ ಸಂದಣಿಗೆ ಕಾರಣವಾಗಿದೆ. ಆದರೆ ಇತ್ತೀಚೆಗೆ ಮುಂಬೈನಲ್ಲಿ ಕೆಂಪು ಬಣ್ಣದ ಕಾರೊಂದು ಟ್ರಾಫಿಕ್ ಜಾಮ್‌ಗೆ ಕಾರಣವಾಗಿ ಕ್ಯೂಗಟ್ಟಲೇ ವಾಹನಗಳು ಕ್ಯೂ ನಿಲ್ಲಲ್ಲು ಕಾರಣವಾಯ್ತು. ಹಿಂದಿದ್ದ ವಾಹನಗಳು ಎಷ್ಟು ಹಾರ್ನ್‌ ಮಾಡಿದರು. ಈ ಕಾರು ಮಾತ್ರ ಮುಂದೆ ಚಲಿಸದೇ ಇದ್ದಲ್ಲೇ ನಿಂತಿತ್ತು. ಇದರಿಂದ ಪಿತ್ತ ನೆತ್ತಿಗೇರಿಸಿಕೊಂಡಿದ್ದ ಹಿಂದೆ ಬರುತ್ತಿದ್ದ ವಾಹನಗಳ ಸವಾರರು ತಮ್ಮ ವಾಹನಗಳಿಂದ ಇಳಿದು ಈ ಕಾರಿನ ಬಳಿ ಬಂದು ನೋಡಿದಾಗ ಕಾರಿ ಚಾಲಕನ ಸೀಟಿನಲ್ಲಿ ಇದ್ದವರನ್ನು ನೋಡಿ ಶಾಕ್ ಆಗಿದ್ದಾರೆ.

ಡ್ರೈವರ್ ಸೀಟ್‌ನಲ್ಲಿತ್ತು ಶ್ವಾನ:

ಮುಂಬೈನ ಲೋಖಂಡ್ವಾಲಾ ಮುಖ್ಯ ಮಾರುಕಟ್ಟೆಯ ಬಳಿ ಈ ಘಟನೆ ನಡೆದಿದ್ದು, ಭಾರಿ ಸಂಚಾರ ದಟ್ಟಣೆಗೆ ಕಾರಣವಾಗಿತ್ತು. ಕೆಂಪು ಬಣ್ಣದ ಕಾರನ್ನು ರಸ್ತೆಮಧ್ಯೆದಲ್ಲೇ ಪಾರ್ಕಿಂಗ್ ಮಾಡಲಾಗಿತ್ತು. ಹೀಗಾಗಿ ಆ ದಾರಿಯಲ್ಲಿ ಸಾಗುತ್ತಿದ್ದವರು ಹತ್ತಿರ ಹೋಗಿ ನೋಡಿದಾಗ ಅಚ್ಚರಿ ಹಾಗೂ ನಗುವಿಗೆ ಕಾರಣವಾಗಿದ್ದು, ಡ್ರೈವರ್‌ ಸೀಟಿನಲ್ಲಿದ್ದ ವಿಶೇಷ ವ್ಯಕ್ತಿ. ಹೌದು ಈ ಕೆಂಪು ಕಾರಿನಲ್ಲಿ ಹಸ್ಕಿ ತಳಿಯ ಶ್ವಾನ ಚಾಲಕನಂತೆ ಕುಳಿತಿದ್ದು, ಆ ದಾರಿಯಲ್ಲಿ ಅತ್ತಿತ್ತ ಹೋಗುವವರನ್ನು ನಾಲಗೆ ಹೊರಗೆ ಹಾಕಿ ಬಹಳ ಕುತೂಹಲದಿಂದ ನೋಡುತ್ತಿತ್ತು.

ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ನಗು ಉಕ್ಕಿಸಲು ಕಾರಣವಾಯ್ತು. ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದು, ಹಾಸ್ಯಕ್ಕೆ ಕಾರಣವಾಯ್ತು, ಅನೇಕರು ಕಾರು ಮಾಲೀಕನ ಬೇಜಾವಾಬ್ದಾರಿತನಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ವೈರಲ್ ಆದ ವೀಡಿಯೋದಲ್ಲಿ ಕಾರು ರಸ್ತೆ ಮಧ್ಯೆ ನಿಂತಿದ್ದರೆ, ಅದರ ಹಿಂದೆ ಬಸ್ ಸೇರಿದಂತೆ ಹಲವು ವಾಹನಗಳು ಸಾಲುಗಟ್ಟಿದ್ದವು, ಹೀಗಾಗ ತಾಳ್ಮೆಗೆಟ್ಟ ವಾಹನ ಸವಾರರು ಹಾಗೂ ದಾರಿಹೋಕರು ಕಾರಿನ ಸಮೀಪ ಹೋದಾಗ ಕಾರಿನ ಚಾಲಕನ ಸೀಟಿನಲ್ಲಿ ಹಸ್ಕಿ ಶ್ವಾನವೊಂದು ಆರಾಮವಾಗಿ ಕುಳಿತು ಸುತ್ತಲು ನೋಡುತ್ತಿದೆ. ಈ ವೀಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ಭಾರಿ ವೈರಲ್ ಆಗಿದೆ.

ಅಂಧೇರಿ ಲೋಕ ಎಂಬ ಇನ್ಸ್ಟಾ ಗ್ರಾಂ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಲೋಖಂಡ್ವಾಲಾ ಮುಖ್ಯ ಮಾರುಕಟ್ಟೆಯ ಮಧ್ಯದಲ್ಲಿ ಕಾರು ನಿಲ್ಲಿಸಲಾಗಿದ್ದು, ಇದರಿಂದ ಹೆಚ್ಚಿನ ಅನಾನುಕೂಲತೆ ಉಂಟಾಗಿದೆ. ಆಘಾತಕಾರಿಯಾಗಿ ಸಾಕು ನಾಯಿಯನ್ನು ಚಾಲಕನ ಸೀಟಿನಲ್ಲಿಯೇ ಕೂರಿಸಲಾಗಿದೆ. ಈ ರೀತಿಯ ಅಸಡ್ಡೆ ಮತ್ತು ಬೇಜವಾಬ್ದಾರಿ ಪಾರ್ಕಿಂಗ್‌ಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಬರೆದುಕೊಂಡಿದ್ದಾರೆ.

ಇದು ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣವಾಗಿದ್ದರೂ ಡ್ರೈವರ್ ಸೀಟಿನಲ್ಲಿದ್ದ ಶ್ವಾನದಿಂದಾಗಿ ಇದು ಹಾಸ್ಯಕ್ಕೆ ಕಾರಣವಾಗಿದೆ. ಇದು ಗಂಭೀರ ಪ್ರಕರಣವೇ ಇರಬಹುದು. ಆದರೆ ಡ್ರೈವರ್ ಸೀಟಿನಲ್ಲಿ ಹಸ್ಕಿಯನ್ನು ನೋಡುವುದಕ್ಕೆ ಖುಷಿಯಾಗುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ತುಂಬಾ ಮುಂದಾಗಿದೆ ಕಾರಿನಲ್ಲಿ ಶ್ವಾನವೊಂದನ್ನೇ ಬಿಟ್ಟು ಹೋಗುವುದು ಬಹಳ ಅಪಾಯಕಾರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಹೀಗೆ ರಸ್ತೆ ನಡುವೆ ವಾಹನವನ್ನು ಬಿಟ್ಟು ಟ್ರಾಫಿಕ್ ಜಾಮ್‌ಗೆ ಕಾರಣವಾದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ಫೋಟೋ ತೆಗೆದು ಮುಂಬೈ ಟ್ರಾಫಿಕ್ ಪೊಲೀಸ್‌ ಆಪ್‌ನಲ್ಲಿ ಅಪ್‌ಲೋಡ್ ಮಾಡಿ ದಂಡ ತಾನಾಗೆ ಬೀಳುವುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..