
ಸಂಬಾಲ್‌ಪುರ್ (ಆ.01) ಸಿಗ್ನಲ್ ಜಂಪ್, ತ್ರಿಬಲ್ ರೈಡ್, ಹೆಲ್ಮೆಟ್ ಧರಿಸದೆ ರೈಡಿಂಗ್, ರಾಂಗ್ ಸೈಡ್ ಸೇರಿದಂತೆ ಹಲವು ರೀತಿ ಮೋಟಾರು ವಾಹನ ನಿಯಮ ಉಲ್ಲಂಘನೆಗಳು ಪ್ರತಿ ದಿನ ವರದಿಯಾಗುತ್ತದೆ. ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಸ್ಕೂಟರ್ ಮೇಲೆ ಕಾರಿಗಿಂತ ಹೆಚ್ಚು ಮಂದಿ ತೆರಳಿ ನಿಯಮ ಉಲ್ಲಂಘನೆ ಮಾತ್ರವಲ್ಲ, ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ ಘಟನೆಯೊಂದು ವರದಿಯಾಗಿದೆ. ಹೋಂಡಾ ಆ್ಯಕ್ಟೀವಾ ಸ್ಕೂಟರ್ ಮೇಲೆ ಇಬ್ಬರು ಪ್ರಯಾಣಿಸು ಅನುಮತಿ ಇದೆ. ಆದರೆ ಇಲ್ಲಿ ಬರೋಬ್ಬರಿ 7 ಮಂದಿ ಪ್ರಯಾಣಿಸಿದ ಘಟನೆ ಒಡಿಶಾದ ಸಂಬಾಲ್‌ಪುರ್‌ನಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಪುಂಡರ ಪತ್ತೆ ಹಚ್ಚಿ ದುಬಾರಿ ದಂಡ ವಿಧಿಸಿದ್ದಾರೆ.
ಧನುಪಲಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಭಾನುವಾರ ರಾತ್ರಿ ಅಪ್ರಾಪ್ತ ವಯಸ್ಸಿನ 7 ಮಂದಿ ಸ್ಕೂಟರ್ ಮೇಲೆ ತೆರಳಿದ್ದಾರೆ. ಸಂಬಾಲ್‌ಪುರ ರಸ್ತೆಯಲ್ಲಿ ಮಧ್ಯರಾತ್ರಿ ಪುಂಡಾಟಿಕೆ ಮೆರೆದಿದ್ದಾರೆ. ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನಗಳ ಮೇಲೆ ಕಿರುಚಾಡುತ್ತಾ. ಪುಂಡಾಟಕೆ ತೋರಿದ್ದಾರೆ. ಬರೋಬ್ಬರಿ 7 ಮಂದಿ ಅಪಾಯಾಕಾರಿ ರೀತಿ ಸ್ಟಂಟ್ ಮಾಡಿದ್ದರೆ. ಹೋಂಡಾ ಆ್ಯಕ್ಚೀವಾ ಸ್ಕೂಟರ್ ಮೂಲಕ ಈ ಅಪ್ರಾಪ್ತ ವಯಸ್ಸಿನ 7 ಮಂದಿ ಸ್ಟಂಟ್ ಮಾಡಿದ್ದಾರೆ.
ಮಧ್ಯರಾತ್ರಿ ಈ ಅಪ್ರಾಪ್ತರು ಮಸ್ತಿ ಮಾಡಿದ್ದಾರೆ. ತಮ್ಮ ಮೋಜು ಮಸ್ತಿಗಾಗಿ ಅಪಾಯಕಾರಿ ರೀತಿಯಲ್ಲಿ ಸ್ಟಂಟ್ ಮಾಡಿದ್ದರೆ. ಸಾರ್ವಜನಿಕ ರಸ್ತೆಯಲ್ಲಿ ಈ ಸ್ಟಂಟ್ ಮಾಡಿದ್ದಾರೆ. ಈ ಮೂಲಕ ಹಲವು ನಿಯಮ ಉಲ್ಲಂಘಿಸಿದ್ದಾರೆ. ಅಪ್ರಾಪ್ತರ ಮಸ್ತಿ ಕುರಿತ ವಿಡಿಯೋವನ್ನು ಇತರ ವಾಹನ ಸವಾರರು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಬಳಿಕ ಸ್ಕೂಟರ್ ರಿಡಿಸ್ಟ್ರೇಶನ್ ನಂಬರ್ ಸೇರಿದಂತೆ ಮಾಹಿತಿ ಪಡೆದು ನೇರವಾಗಿ ಪುಂಡರ ವಶಕ್ಕೆ ಪಡೆದಿದ್ದಾರೆ. ಸ್ಕೂಟರ್ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪುಂಡರು ಅಪ್ರಾಪ್ತರು ಅನ್ನೋದು ಬಯಲಾಗಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಂದಿ ಸ್ಕೂಟರ್ ಮೂಲಕ ರೈಡ್, ಹೆಲ್ಮೆಟ್ ಹಾಕದೇ ರೈಡಿಂಗ್, ಸಾರ್ವಜನಿಕ ಪ್ರದೇಶದಲ್ಲಿ ಸ್ಟಂಟ್, ಲೈಸೆನ್ಸ್ ಇಲ್ಲದೆ ರೈಡ್ ಸೇರಿದಂತೆ ಹಲವು ಪ್ರಕರಣಗಳು ಈ ಅಪ್ರಾಪ್ತರ ವಿರುದ್ಧ ದಾಖಲಾಗಿದೆ.
ಪುಂಡರ ಪತ್ತೆ ಹಚ್ಚಿದ ಪೊಲೀಸರು ಒಟ್ಟು 21,500 ರೂಪಾಯಿ ದಂಡ ವಿಧಿಸಿದ್ದಾರೆ. ಇತ್ತ ಪೊಲೀಸರು ದುಬಾರಿ ದಂಡ ಹಾಕಿ, ಪುಂಡರ ವಶಕ್ಕೆ ಪಡೆಯುತ್ತಿದ್ದಂತೆ ಪುಂಡರ ಪೋಷಕರು ಠಾಣೆಗೆ ಆಗಮಿಸಿ ಅಪ್ರಾಪ್ತರಿಗೆ ದಂಡ ವಿಧಿಸಿ ಪ್ರಕರಣ ಕೈಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ