ದಾಳಿ ಮಾಡಲು ಬಂದ ಚಿರತೆಯನ್ನು ಧೈರ್ಯವಾಗಿ ಓಡಿಸಿದ ಶ್ವಾನ: ವಿಡಿಯೋ ವೈರಲ್

Published : Nov 07, 2022, 01:36 PM IST
ದಾಳಿ ಮಾಡಲು ಬಂದ ಚಿರತೆಯನ್ನು ಧೈರ್ಯವಾಗಿ ಓಡಿಸಿದ ಶ್ವಾನ: ವಿಡಿಯೋ ವೈರಲ್

ಸಾರಾಂಶ

ಸಾಮಾನ್ಯವಾಗಿ ನಾಯಿಗಳ ಮೇಲೆ ಚಿರತೆಗಳು ದಾಳಿ ನಡೆಸುವುದನ್ನು ನೋಡಿರಬಹುದು. ಆದರೆ ಅಪರೂಪದ ವಿಡಿಯೋವೊಂದರಲ್ಲಿ ಚಿರತೆಯ ಮೇಲೆ ನಾಯಿಯೇ ದಾಳಿ ನಡೆಸಿ ಓಡಿಸಿದೆ.

ಸಾಮಾನ್ಯವಾಗಿ ನಾಯಿಗಳ ಮೇಲೆ ಚಿರತೆಗಳು ದಾಳಿ ನಡೆಸುವುದನ್ನು ನೋಡಿರಬಹುದು. ಆದರೆ ಅಪರೂಪದ ವಿಡಿಯೋವೊಂದರಲ್ಲಿ ಚಿರತೆಯ ಮೇಲೆ ನಾಯಿಯೇ ದಾಳಿ ನಡೆಸಿ ಓಡಿಸಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸೆಲೆಬ್ರಿಟಿಗಳ ಫೋಟೋ ತೆಗೆಯುವುದಕ್ಕೆ ಫೇಮಸ್ ಆಗಿರುವ ವೈರಲ್ ಭಯಾನಿ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 

ವಿಡಿಯೋದಲ್ಲಿ ಕಾಣಿಸುವಂತೆ ನಾಯಿಯನ್ನು ನೋಡಿದ  ಚಿರತೆಯೊಂದು ಅದನ್ನು ಅಟ್ಟಿಸಿಕೊಂಡು ಬಂದಿರುವುದು ಸಿಸಿಟಿವಿ ವಿಡಿಯೋದಲ್ಲಿ ಸೆರೆ ಆಗಿದೆ. ಈ ವೇಳೆ ಸಿಸಿಟಿವಿ ವ್ಯಾಪ್ತಿಯಿಂದ ದೂರ ನಾಯಿಯೂ ಓಡಿ ಹೋಗಿದೆ. ಆದರೆ ಕೆಲವೇ ಕ್ಷಣದಲ್ಲಿ ಇವೆರಡು ಸಿಸಿಟಿವಿ ವ್ಯಾಪ್ತಿಯಲ್ಲಿ ಕಾಣಿಸಿವೆ. ಓಡಿದ ನಾಯಿಯನ್ನು ಚಿರತೆ ಬೇಟೆಯಾಡಿ ಎತ್ತಿಕೊಂಡು ಬಂದಿರಬಹುದು ಎಂದು ನೀವು ಭಾವಿಸಿದ್ದಾರೆ ನಿಮ್ಮ ಊಹೆ ಸುಳ್ಳು. ಇಲ್ಲಿ ಚಿರತೆಯ ಬದಲು ಶ್ವಾನವೇ ಚಿರತೆಯ ಕತ್ತನ್ನು ಕಚ್ಚಿ ಹಿಡಿದುಕೊಂಡಿದ್ದು, ಬಾಲ ಅಲ್ಲಾಡಿಸುತ್ತಿದೆ. ಈ ವೇಳೆ ಚಿರತೆ ನಾಯಿಯಿಂದ ತಪ್ಪಿಸಿಕೊಂಡು ಸ್ಥಳದಿಂದ ಕಾಲ್ಕಿತ್ತಿದೆ. ಈ ವಿಡಿಯೋ ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದು, ನಾಯಿಯ ಸಾಮರ್ಥ್ಯವನ್ನು ಕೊಂಡಾಡಿದ್ದಾರೆ. 

 

ಈ ವಿಡಿಯೋವನ್ನು ಶೇರ್ ಮಾಡಿದ ವೈರಲ್ ಭಯಾನಿ, ಈ ದೃಶ್ಯವನ್ನು @dhavalrajsinhchauhan ಎಂಬುವವರಿಗೆ ಟ್ಯಾಗ್ ಮಾಡಿ ನಿಮ್ಮ ಸ್ಪೂರ್ತಿಯ ಮಾತುಗಳಿಂದ ನಾಯಿಯೂ ಸಿಂಹವಾಗಿದೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಇನ್ನು ಈ ವಿಡಿಯೋಗೆ ಅನೇಕ ನೋಡುಗರು ಕೂಡ ಕಾಮೆಂಟ್ ಮಾಡಿದ್ದಾರೆ. ಬಹುಶ: ಈ ಶ್ವಾನ ಸಂದೀಪ್ ಮಹೇಶ್ವರಿ ಅವರ ವಿಡಿಯೋವನ್ನು ನೋಡಿರಬೇಕು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಈ ಚಿರತೆ ನಗರವನ್ನು ಬೀದಿನಾಯಿ ಮುಕ್ತ ಮಾಡಲು ಬಯಸಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಮ್ಮ ಮೊಹಲ್ಲಾದಲ್ಲಿ ನಾಯಿಯೂ ಸಿಂಹವಾಗುತ್ತಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಬಹುಶಃ ಇದು ಮೋದಿಗೆ ಸೇರಿದ ಚೀತಾ ಇರಬೇಕು ಎಂದು ಕೆಲವರು ಇಲ್ಲೂ ಮೋದಿ ಬಗ್ಗೆ ವ್ಯಂಗ್ಯವಾಡಿದ್ದಾರೆ. ನಾಯಿಯ ಶಕ್ತಿ ಸಾಮರ್ಥ್ಯವನ್ನು ಹೀನವಾಗಿ ಕಾಣಬೇಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಇದು ಚಿನ್ನದ ನೆಕ್ಲೇಸ್ ಅಲ್ಲ: ಸಮುದ್ರ ಚಿರತೆಯ ಸಿಟಿಸ್ಕ್ಯಾನ್ ಫೋಟೋ

ಒಟ್ಟಿನಲ್ಲಿ ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಮಲಗಿದ್ದ ನಾಯಿಯ ಮೇಲೆ ದಾಳಿ ಮಾಡಲು ಬಂದ ಹುಲಿಯೊಂದನ್ನು ನಾಯಿ ಬೊಗಳಿ ಓಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಕಾಡಿನ ಮಣ್ಣು ದಾರಿಯಲ್ಲಿ ನಾಯಿಯೊಂದು ಮಲಗಿತ್ತು. ಇದನ್ನು ನೋಡಿದ ಸಮೀಪದ ಪೊದೆಯಿಂದ ಹುಲಿಯೊಂದು ಹಾರಿ ಬಂದಿದೆ. ಆದರೆ ಈ ವೇಳೆ ನಾಯಿ ಧೈರ್ಯಗೆಡದೇ ಜೋರಾಗಿ ಬೊಗಳುವ ಮೂಲಕ ಹುಲಿಯನ್ನು ಓಡಿಸಿದೆ. ಈ ವಿಡಿಯೋವನ್ನು ಕೂಡ ಲಕ್ಷಾಂತರ ಜನ ವೀಕ್ಷಿಸಿದ್ದರು. ಜೊತೆಗೆ ಶ್ವಾನದ ಸಾಹಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದರು. 

ಗಂಧದಗುಡಿ ಬಿಡುಗಡೆ: ಕಪ್ಪು ಚಿರತೆ ದತ್ತು ಪಡೆದ ಶಾಸಕ ಹರ್ಷವರ್ಧನ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತ- ಚೀನಾ ಯುದ್ಧ ವೇಳೆ 600 ಕೆಜಿ ಚಿನ್ನ ಕೊಟ್ಟಿದ್ದ ರಾಣಿ ಕಾಮಸುಂದರಿ ದೇವಿ ನಿಧನ
ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಜೈಪುರ ಸಾಹಿತ್ಯೋತ್ಸವ ಶುರು