Bilkis Bano ಅತ್ಯಾಚಾರಿಗಳ ಬಿಡುಗಡೆ ವಿವಾದ: ತರಾತುರಿಯಲ್ಲಿ ಒಪ್ಪಿಗೆ ನೀಡಿದ್ದ ಕೇಂದ್ರ

Published : Oct 18, 2022, 11:02 AM IST
Bilkis Bano ಅತ್ಯಾಚಾರಿಗಳ ಬಿಡುಗಡೆ ವಿವಾದ: ತರಾತುರಿಯಲ್ಲಿ ಒಪ್ಪಿಗೆ ನೀಡಿದ್ದ ಕೇಂದ್ರ

ಸಾರಾಂಶ

Bilkis Bano rape convict release updates: ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆ ಕುರಿತಂತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಈ ನಡುವೆ ಅತ್ಯಾಚಾರಿಗಳ ಬಿಡುಗಡೆಗೆ ಕೇಂದ್ರ ಸರ್ಕಾರ ಕೂಡ ಅನುಮತಿ ನೀಡಿರುವುದು ತಿಳಿದು ಬಂದಿದೆ. 

ನವದೆಹಲಿ: ಬಿಲ್ಕಿಸ್‌ ಬಾನೊ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಅಪರಾಧಿಗಳನ್ನು ತರಾತುರಿಯಲ್ಲಿ ಗುಜರಾತ್‌ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮಾಡಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದುವರೆಗೂ ಗುಜರಾತ್‌ ಸರ್ಕಾರ ಮಾತ್ರ ಈ ವಿವಾದದ ಕೇಂದ್ರ ಬಿಂದುವಾಗಿತ್ತು. ಆದರೆ ಕೇಂದ್ರ ಸರ್ಕಾರವೂ ಇದರಲ್ಲಿ ಭಾಗಿಯಾಗಿದೆ ಎಂಬ  ವಿಚಾರ ಇದೀಗ ಬೆಳಕಿಗೆ ಬಂದಿದೆ. 2002ರ ಗುಜರಾತ್‌ ಗಲಭೆ ವೇಳೆ ಬಿಲ್ಕಿಸ್‌ ಬಾನೊ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಮತ್ತು ಬಾನೊರ ಮಗುವನ್ನು ಕೊಲೆ ಮಾಡಲಾಗಿತ್ತು. ಸಿಬಿಐ ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಬಾರದು ಎಂದು ಆಕ್ಷೇಪಿಸಿದ್ದರೂ ಅತ್ಯಾಚಾರಿಗಳನ್ನು ಸ್ವತಂತ್ರೋತ್ಸವದಂದು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. 

ಬಿಲ್ಕಿಸ್‌ ಬಾನೊ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಗೊಳಿಸಲು ಅನುಮತಿ ಕೋರಿ ಗುಜರಾತ್‌ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಜೂನ್‌ 28ತಂದು ಕೋರಿತ್ತು. ಅದಾಗಿ ಕೇವಲ ಎರಡು ವಾರಗಳೊಳಗೆ ಗೃಹ ಸಚಿವಾಲಯ ಜುಲೈ 11ರಂದು ಅನುಮತಿ ನೀಡಿ ಆದೇಶಿಸಿದೆ. ಈ ಬಗ್ಗೆ ದಾಖಲೆಗಳು ಲಭ್ಯವಾಗಿದ್ದು ಗೃಹ ಸಚಿವಾಲಯ ಕೂಡ ಅತ್ಯಾಚಾರ ಪ್ರಕರಣದ ಅಪರಾಧಿಗಳು ಬಿಡುಗಡೆಯಾಗಲು ಸಹಕರಿಸಿರುವುದು ಬೆಳಕಿಗೆ ಬಂದಿದೆ.

ಗುಜರಾತ್‌ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಉತ್ತರ ನೀಡಿದ್ದು, ಅಪರಾಧಿಗಳು 14 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಮತ್ತು ಅವರು ಜೈಲಿನಲ್ಲಿ ಉತ್ತಮ ರೀತಿಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ದ ಒಪ್ಪಿಗೆ ಮೇರೆಗೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್‌ ಸರ್ಕಾರ ಉತ್ತರಿಸಿದೆ. 

ಆಗಸ್ಟ್‌ 15ರಂದು ಅತ್ಯಾಚಾರಿಗಳನ್ನು ಬಿಡುಗಡೆ ಗೊಳಿಸಿದಾಗ ಅವರನ್ನು ಹೀರೋಗಳಂತೆ ಜನ ಸಂಭ್ರಮಾಚರಣೆಗಳೊಂದಿಗೆ ಬರಮಾಡಿ ಕೊಂಡಿದ್ದರು. ಆದರೆ ಗುಜರಾತ್‌ ಸರ್ಕಾರದ ಈ ಕ್ರಮ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ನಂತರ ಸುಪ್ರೀಂ ಕೋರ್ಟ್‌ನಲ್ಲಿ ಬಿಡುಗಡೆ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ಅಪರಾಧಿಗಳು ಅರ್ಜಿ ಸಲ್ಲಿಸಿದ್ದರು. ಇದನ್ನು ವಿಶೇಷ ನ್ಯಾಯಾಲಯದಲ್ಲಿ ಸಿಬಿಐ ಕಟುವಾಗಿ ವಿರೋಧಿಸಿತ್ತು. ಬಿಲ್ಕಿಸ್‌ ಬಾನೊ ಅತ್ಯಾಚಾರ ಪ್ರಕರಣ ಗಂಭೀರವಾಗಿದ್ದು, ಅಪರಾಧಿಗಳು ಅತ್ಯಂತ ಕ್ರೂರತೆಯಿಂದ ಅಪರಾಧ ಮಾಡಿದ್ದಾರೆ. ಅವರಿಗೆ ಯಾವುದೇ ರೀತಿಯ ಕನಿಕರ ತೋರಬಾರದು ಎಂದು ಸಿಬಿಐ ಹೇಳಿತ್ತು. ಆದರೆ ಗುಜರಾತ್‌ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸಿಬಿಐ ವಿರೋಧವನ್ನು ವಜಾಗೊಳಿಸಿ ಬಿಡುಗಡೆಗೆ ಅಂಕಿತ ನೀಡಿತ್ತು. 

ವಿಶೇಷ ನ್ಯಾಯಾಲಯದ ನ್ಯಾಯಾಧೀಶರೂ ಸಹ ಅಪರಾಧಿಗಳು ಸಂತ್ರಸ್ಥರು ಒಂದು ಕೋಮಿಗೆ ಸೇರಿದವರು ಎಂಬ ಕಾರಣಕ್ಕೆ ಹೀನ ಕೃತ್ಯ ಮೆರೆದಿದ್ದಾರೆ. ಈ ಪ್ರಕರಣ ಕೋಮು ದ್ವೇಷದ ಪರಾಕಾಷ್ಠೆಯಾಗಿದೆ. ಚಿಕ್ಕ ಮಕ್ಕಳನ್ನೂ ಈ ಅಪರಾಧಿಗಳು ಬಿಟ್ಟಿಲ್ಲ, ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೆಲ್ಲದರ ಹೊರತಾಗಿಯೂ ವಿವಾದಾತ್ಮಕ ನಿರ್ಧಾರವನ್ನು ಗುಜರಾತ್‌ ಮತ್ತು ಕೇಂದ್ರ ಸರ್ಕಾರ ತೆಗೆದುಕೊಂಡಿತ್ತು. 

ಇದರ ಜತೆಗೆ ಅಪರಾಧಿಗಳು ಸಾವಿರಾರು ದಿನಗಳ ಕಾಲ ಪೆರೋಲ್‌ ಮೇಲೆ ಆಚೆ ಇರುವ ಬಗ್ಗೆಯೂ ದಾಖಲೆಗಳಿವೆ. ಹೆಸರಿಗೆ ಜೈಲು ಶಿಕ್ಷೆಗೆ ಒಳಗಾಗಿದ್ದರೂ, ಒಂದಲ್ಲಾ ಒಂದು ಕಾರಣದ ಮೇಲೆ ಅತಿ ಹೆಚ್ಚು ದಿನಗಳ ಕಾಲ ಪೆರೋಲ್‌ ಮೇಲೆ ಈ ಅಪರಾಧಿಗಳು ಆಚೆ ಇದ್ದಾರೆ. ಪೆರೋಲ್‌ ಮೇಲಿದ್ದಾಗ ಬಿಲ್ಕಿಸ್‌ ಬಾನೊ ಮತ್ತವರ ಕುಟುಂಬಕ್ಕೆ ಹಿಂಸೆ ನೀಡಿದ ಬಗ್ಗೆಯೂ ಬಿಲ್ಕಿಸ್‌ ಬಾನೊ ದೂರು ನೀಡಿದ್ದರು. ಹಾಗಾದರೆ ಇದು 'ಸನ್ನಡತೆ'ಯೇ ಎಂಬ ಗಂಭೀರ ಪ್ರಶ್ನೆ ಏಳುತ್ತದೆ. ಅಪರಾಧಿಗಳನ್ನು ಬಿಡುಗಡೆ ಮಾಡುವ ವೇಳೆಯೂ ಬಿಲ್ಕಿಸ್‌ ಬಾನೊ ಅವರ ಸುರಕ್ಷತೆ ಬಗ್ಗೆ ತೆಗೆದುಕೊಳ್ಳಲಿರುವ ಕ್ರಮದ ಬಗ್ಗೆ ಗುಜರಾತ್‌ ಪೊಲೀಸ್‌ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ. 

ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಅಪರಾಧಿಗಳ ಬಿಡುಗಡೆ ಪ್ರಶ್ನಿಸಿದ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಬಿಲ್ಕಿಸ್‌ ಬಾನೊ ಅತ್ಯಾಚಾರವಾದಾಗ ಆಕೆಗಿನ್ನೂ 21 ವರ್ಷ ವಯಸ್ಸಾಗಿತ್ತು. ಜತೆಗೆ ಆಕೆ ಗರ್ಭಿಣಿ ಕೂಡ ಆಗಿದ್ದಳು. 14 ಮಂದಿ ಆಜೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೇ ಮೂರು ವರ್ಚದ ಮಗಳನ್ನು ಕೊಲೆ ಮಾಡಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ