ಈ ವೆಬ್ ಸರಣಿಯು 'ಮೋದಿ ಮತ್ತು ಭಾರತದ ಮುಸ್ಲಿಂ ಅಲ್ಪಸಂಖ್ಯಾತರ ನಡುವಿನ ಉದ್ವಿಗ್ನತೆಯತ್ತ ಗಮನ ನೀಡಿದೆ. 2002 ರ ಗಲಭೆಗಳಲ್ಲಿ ಅವರ ಪಾತ್ರದ ಬಗ್ಗೆ ತನಿಖೆ ನಡೆಸಿರುವುದಾಗಿ ಹೇಳಿದೆ.
ನವದೆಹಲಿ (ಜ.19): ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿ ಮಾಡಿರುವ ವೆಬ್ ಸಿರೀಸ್‌ನ ಕಾರಣಕ್ಕೆ ಟೀಕೆಗೆ ಗುರಿಯಾಗಿದೆ, ಇದು ಭಾರತದ ಮುಸ್ಲಿಮರೊಂದಿಗಿನ ಅವರ ಸಂಬಂಧವನ್ನು ಮೇಲ್ನೋಟಕ್ಕೆ ತಿಳಿಸುತ್ತದೆ. 'ಭಾರತ: ಮೋದಿ ಪ್ರಶ್ನೆ' (ಇಂಡಿಯಾ: ದಿ ಮೋದಿ ಕ್ವಶ್ಚನ್) ಎಂಬ ಶೀರ್ಷಿಕೆಯಲ್ಲಿ ಎರಡು ಸರಣಿಯನ್ನು ಬಿಬಿಸಿ ಸಿದ್ಧ ಮಾಡಿದೆ. "ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಮುಸ್ಲಿಂ ಅಲ್ಪಸಂಖ್ಯಾತರ ನಡುವಿನ ಉದ್ವಿಗ್ನತೆಯನ್ನು ಬಗ್ಗೆ ಇದು ತನಿಖೆ ನಡೆಸಿರುವುದಾಗಿ ಹೇಳಿದೆ. ಬಿಬಿಸಿ ಪ್ರಕಾರ, ಈ ಸರಣಿಯು "ಭಾರತದ ಮುಸ್ಲಿಂ ಜನಸಂಖ್ಯೆಯ ಬಗ್ಗೆ ಅವರ ಸರ್ಕಾರದ ವರ್ತನೆಯ ಬಗ್ಗೆ ನಿರಂತರ ಆರೋಪಗಳಿಂದ ನರೇಂದ್ರ ಮೋದಿಯವರ ಪ್ರಧಾನಿ ಹುದ್ದೆಯ ಮೇಲೆ ಯಾವ ರೀತಿ ಪರಿಣಾಮ ಬೀರಿದೆ" ಮತ್ತು "ಈ ಆರೋಪಗಳ ಹಿಂದಿನ ಸತ್ಯವನ್ನು ತನಿಖೆ ಮಾಡುತ್ತದೆ ಮತ್ತು ಇತರ ಪ್ರಶ್ನೆಗಳನ್ನು ಅನ್ವೇಷಿಸಲು ಮೋದಿಯವರ ಹಿಂದಿನ ಕಥೆಗಳ ಬಗ್ಗೆಯೂ ತಿಳಿಸುತ್ತದೆ" ಎನ್ನಲಾಗಿದೆ. ಭಾರತದ ಅತಿ ದೊಡ್ಡ ಧಾರ್ಮಿಕ ಅಲ್ಪಸಂಖ್ಯಾತರ ವಿಷಯಕ್ಕೆ ಬಂದಾಗ ಅವರ ರಾಜಕೀಯದ ದಾಳದ ಬಗ್ಗೆ ಚರ್ಚೆಯಾಗಿದೆ." ಇದು 2002 ರ ಗುಜರಾತ್ ಗಲಭೆಗಳಲ್ಲಿ ಅವರ ಪಾತ್ರ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ಬಗ್ಗೆ ಮೋದಿ ಪಾತ್ರವನ್ನು ತಿಳಿಸಿಕೊಡುತ್ತದೆ. ಆದರೆ, ಈ ವೆಬ್ ಸಿರೀಸ್‌ಗೆ ಟ್ವಿಟರ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
" ಬಿಬಿಸಿ ಹಾಗೂ ರಿಷಿ ಸುನಕ್, 4-10 ಸಂಚಿಕೆಗಳ ಸರಣಿಯೊಂದಿಗೆ ಒಂದು ಒಳ್ಳೆಯ ಸಿರೀಸ್ ಅನ್ನು ಮಾಡಿ. ಅದರ ಶೀರ್ಷಿಕೆ: 'ಯುಕೆ: ಚರ್ಚಿಲ್ ಪ್ರಶ್ನೆ' ಎಂದಿರಲಿ. 1943 ರ ಬಂಗಾಳದ ಕ್ಷಾಮವನ್ನು ಹೈಲೈಟ್ ಮಾಡುವುದು, ಭಾರತದಲ್ಲಿನ ಒಂದು ಪ್ರದೇಶದ ಕಥೆ (ದೇಶ/ಇತರರನ್ನು ಮಾತ್ರ ಬಿಡಿ ವಸಾಹತುಗಳು) ನೇರ ಮತ್ತು ದಾಖಲಿತ ಆದೇಶಗಳಿಂದ ಲಕ್ಷಾಂತರ ಜನರು ಹೇಗೆ ನಾಶವಾದರು ಎನ್ನುವುದನ್ನು ತಿಳಿಸಿಕೊಡಿ. ಅಲ್ಲಿ ಯಾವುದೇ ಊಹಾಪೋಹಗಳಿಲ್ಲ." ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
ಇಂಥವೆಲ್ಲ ಬರುತ್ತಲೇ ಇರಲಿ. ನೀವು ಎಷ್ಟು ಮೂರ್ಖ ವಿಚಾರವನ್ನು ಹರಡುತ್ತೀರೋ, ಯಾರಿಗೆ ವೋಟ್ ಹಾಕಬೇಕು ಎಂದು ಅನುಮಾನದಲ್ಲಿರುವ ವ್ಯಕ್ತಿಗಳಿಗೆ ಮೋದಿಗೆ ವೋಟ್ ಹಾಕುವಂತೆ ನಾವು ಮನವೊಲಿಸುತ್ತೇವೆ ಎಂದು ಇನ್ನೊಬ್ಬರು ಬರೆದಿದ್ದಾರೆ.
ಬಿಬಿಸಿ ವಿಶ್ವಾಸಾರ್ಹತೆಗೆ ಕಪ್ಪುಚುಕ್ಕೆ: ಅಪ್ಘಾನಿಸ್ತಾನದಲ್ಲಿ ಪಾಕ್ ಕುತಂತ್ರ ಹೊಗಳಿದ ನಿರೂಪಕಿ!
“ಮುಂಬರುವ 2024 ರ ಚುನಾವಣೆಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿನ ನಗರ ಜನಸಂಖ್ಯೆಯ ಮೇಲೆ ಪ್ರಭಾವ ಬೀರುವುದು ಸರಣಿಯ ಉದ್ದೇಶದ ಭಾಗವಾಗಿದೆ. ಭಾರತದಲ್ಲಿ ಬಿಬಿಸಿ ಬಳಕೆಯು ಬಹಳ ಸೀಮಿತವಾಗಿದ್ದರೂ, ಇದು ಅಲ್ಲಿನ ಮಾಧ್ಯಮಗಳಿಗೆ ಹಾಗೂ ವಿರೋಧಪಕ್ಷಗಳಿಗೆ ಮದ್ದುಗುಂಡುಗಳನ್ನು ಒದಗಿಸುತ್ತದೆ. ಯಾವುದೇ ವಿಚಾರವನ್ನು ತಿರುಚುವುದರಲ್ಲಿ ಬಿಬಿಸಿಗಿಂತ ನಿಸ್ಸೀಮರು ಯಾರೂ ಇಲ್ಲ ಎನ್ನುವುದು ಹಿಂದಿನ ಸಾಕಷ್ಟು ವಿಚಾರಗಳಿಂದ ಸಾಬೀತಾಗಿದೆ. ಈ ಸರಣಿಯ ಇನ್ನೊಂದು ಭಾಗವೆಂದರೆ ಮೋದಿಯನ್ನು ಅಸಹಿಷ್ಣು ಎಂದು ಬಿಂಬಿಸುವುದು ಹಾಗೂ ಅವರ ಸರ್ಕಾರದಲ್ಲಿ ಮುಸ್ಲಿಮರನ್ನು ಕೀಳಾಗಿ ನಡೆಸಿಕೊಳ್ಳುತ್ತದೆ ಎಂದು ತೋರಿಸುವುದಾಗಿದೆ. ಬ್ರಿಟನ್ ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಅಂಕಿತ ಹಾಕುತ್ತಿರುವುದರಿಂದ ಇದು ಯುಕೆಯಲ್ಲಿ ಬಿಬಿಸಿಯ ದೇಶೀಯ ಬಳಕೆಗಾಗಿಯೂ ಬಳಸಿಕೊಳ್ಳುತ್ತದೆ ”ಎಂದು ಇಂಡಿಕ್ ಸೊಸೈಟಿಯ ಸ್ಥಾಪಕ ಸದಸ್ಯ ಬ್ರಿಟಿಷ್ ಇಂಡಿಯನ್ ಆದಿತ್ ಕೊಠಾರಿ ತಿಳಿಸಿದ್ದಾರೆ.
"ರಾಣಿಯ ಖಾಸಗಿ ಅಂಗವಲ್ಲ"; Queen Elizabeth II ಸಾವಿನ ಕವರೇಜ್‌ನಲ್ಲಿ ಬಿಬಿಸಿ ಬ್ಲಂಡರ್ ಭಾರೀ ವೈರಲ್
"ದೇಶೀಯವಾಗಿ, ಇದನ್ನು ಟೋರಿ ಪಕ್ಷದ ಮೇಲೆ ಮತ್ತು ಇಂಗ್ಲೆಂಡ್‌ನಲ್ಲಿ ಎಡಪಂಥದ ಒಲವಿನ ಬುದ್ಧಿಜೀವಿಗಳು ರಿಷಿ ಸುನಕ್ ಮೇಲೆ ಮಾಡಿರುವ ನೇರ ಆಕ್ರಮಣವೆಂದು ಪರಿಗಣಿಸಬೇಕು. ಬಿಬಿಸಿ ದಶಕಗಳಿಂದ ಭಾರತ ವಿರೋಧಿಯಾಗಿದೆ ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಮೋದಿ ವಿರೋಧಿ ಮತ್ತು ಹಿಂದೂ ವಿರೋಧಿ ಎಂದು ಬದಲಾಗಿದೆ ಏಕೆಂದರೆ ಭಾರತೀಯ ಪ್ರಧಾನಿ ತಮ್ಮ ಹಿಂದಿನವರಂತೆ ವಿದೇಶದಲ್ಲಿ ಅಧ್ಯಯನ ಮಾಡಿದ ನಿರರ್ಗಳ ಇಂಗ್ಲಿಷ್ ಮಾತನಾಡುವ ಅವರ ವ್ಯಾಖ್ಯಾನಕ್ಕೆ ಹೊಂದಿಕೆಯಾಗುವುದಿಲ್ಲ. ಮತ್ತು ಭಾರತೀಯ ರಾಜಕೀಯದಲ್ಲಿ ದಶಕಗಳ ಕಾಲ ಇದ್ದ ವಸಾಹತುಶಾಹಿ ಹ್ಯಾಂಗೊವರ್‌ಗಿಂತ ಈಗಿನ ಆಡಳಿತ ಭಿನ್ನವಾಗಿದೆ" ಎಂದು ಕೊಠಾರಿ ಹೇಳಿದ್ದಾರೆ.