ಬಿಜೆಪಿ ಮಾಜಿ ಶಾಸಕ ಮನೆ ರೇಡ್‌ ವೇಳೆ ಆದಾಯ ತೆರಿಗೆ ಅಧಿಕಾರಿಗಳಿಗೆ ಸಿಕ್ತು ಮೂರು ಮೊಸಳೆಗಳು!

By Santosh Naik  |  First Published Jan 10, 2025, 10:48 PM IST

ಮಧ್ಯಪ್ರದೇಶದ ಮಾಜಿ ಶಾಸಕ ಹರ್ವಂಶ್ ಸಿಂಗ್ ರಾಥೋಡ್ ಅವರ ಮನೆಯ ಮೇಲೆ ಆದಾಯ ತೆರಿಗೆ ದಾಳಿಯಲ್ಲಿ ಮೂರು ಜೀವಂತ ಮೊಸಳೆಗಳು, ಕೋಟಿಗಟ್ಟಲೆ ಹಣ ಮತ್ತು ಚಿನ್ನ ಪತ್ತೆಯಾಗಿದೆ. ತೆರಿಗೆ ವಂಚನೆ ಆರೋಪದ ಮೇಲೆ ದಾಳಿ ನಡೆದಿದ್ದು, ಬೇನಾಮಿ ಕಾರುಗಳು ಸಹ ಪತ್ತೆಯಾಗಿವೆ.


ಭೋಪಾಲ್‌ (ಜ.10): ಮಧ್ಯಪ್ರದೇಶದಲ್ಲಿ ಬಿಜೆಪಿ ಮಾಜಿ ಶಾಸಕ ಹರ್ವಂಶ್‌ ಸಿಂಗ್‌ ರಾಥೋಡ್‌ ಅವರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಆದಾಯ ತೆರಿಗೆ ಅಧಿಕಾರಿಗಳೂ ಕೂಡ ಅಚ್ಚರಿಪಡುವಂತೆ ಮೂರು ಜೀವಂತ ಮೊಸಳೆಗಳು ಅವರ ಮನೆಯಲ್ಲಿ ಪತ್ತೆಯಾಗಿದೆ. ಮೊಸಳೆಗಳೊಂದಿಗೆ ಆದಾಯ ತೆರಿಗೆ ಅಧಿಕಾರಿಗಳು ಅಪಾರ ಪ್ರಮಾಣದ ಚಿನ್ನ, ಕೋಟಿಗಟ್ಟಲೆ ನಗದು ಹಣ, ಆಮದು ಮಾಡಿಕೊಂಡಿರುವ ಬೇನಾಮಿ ಕಾರ್‌ಗಳು ಕೂಡ ಪತ್ತೆಯಾಗಿದೆ.

ಬೀಡಿ ವ್ಯವಹಾರದಲ್ಲಿ ಪಾಲುದಾರರಾಗಿರುವ ಸಾಗರ್‌ನಲ್ಲಿರುವ ರಾಥೋಡ್ ಮತ್ತು ಮಾಜಿ ಕೌನ್ಸಿಲರ್ ರಾಜೇಶ್ ಕೇಶರ್ವಾನಿ ಅವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಕಳೆದ ಭಾನುವಾರದಿಂದ ದಾಳಿ ನಡೆಸುತ್ತಿದೆ. ಕೋಟ್ಯಂತರ ತೆರಿಗೆ ವಂಚನೆ ಆರೋಪದ ಮೇಲೆ ಇಬ್ಬರೂ ಮೇಲೂ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಧಿಕಾರಿಗಳ ಪ್ರಕಾರ, ಕೇಶರ್ವಾನಿ ಒಬ್ಬರೇ 140 ಕೋಟಿ ರೂ. ತೆರಿಗೆ ವಂಚನೆ ಮಾಡಿದ್ದಾರೆ ಮತ್ತು ದಾಳಿಯ ಸಮಯದಲ್ಲಿ ಸಂಬಂಧಿತ ದಾಖಲೆಗಳು ಪತ್ತೆಯಾಗಿವೆ.

ವರದಿಗಳ ಪ್ರಕಾರ ದಾಳಿಯಲ್ಲಿ 155 ಕೋಟಿ ರೂ. ತೆರಿಗೆ ಅಕ್ರಮ  ಬೆಳಕಿಗೆ ಬಂದಿದೆ. ಅಧಿಕಾರಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳ ಜೊತೆಗೆ 3 ಕೋಟಿ ರೂ.ನಗದು ವಶಪಡಿಸಿಕೊಂಡಿದ್ದಾರೆ.

ದೇಶದ 11 ಡಿಸ್ಟಿಲರಿಗಳಿಂದ ಟ್ಯಾಕ್ಸ್‌ ಮೋಸ, ಸರ್ಕಾರಕ್ಕೆ 13 ಸಾವಿರ ಕೋಟಿ ನಷ್ಟ ಎಂದ ಮಹಾಲೇಖಪಾಲ!

ರಾಥೋಡ್ ಅವರ ಮೇಲೆ ದಾಳಿ ನಡೆಸಿದಾಗ, ಐಟಿ ಅಧಿಕಾರಿಗಳಿಗೆ ಅಚ್ಚರಿಯಾಗುವಂತೆ ಅವರ ಮನೆಯಲ್ಲಿನ ಸಣ್ಣ ಕೊಳದಲ್ಲಿ ಮೂರು ಮೊಸಳೆಗಳು ಕಂಡುಬಂದವು. ಇದರ ಬೆನ್ನಲ್ಲಿಯೇ ಆದಾಯ ತೆರಿಗೆ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Tap to resize

Latest Videos

ಐಟಿ ರೇಡ್‌ಗಳಿಗೆಲ್ಲ ನಾವು ಬಗ್ಗಲ್ಲ: ಬಿಜೆಪಿ ಜೆಡಿಎಸ್ ನಾಯಕರ ಆರೋಪಗಳಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು!

ಕೇಶರ್ವಾನಿ ಅವರ ಕುಟುಂಬಕ್ಕೆ ಸೇರಿದ ಆಸ್ತಿಗಳಲ್ಲಿ ಹಲವಾರು ಬೇನಾಮಿ ಆಮದು ಕಾರುಗಳು ಪತ್ತೆಯಾಗಿವೆ. ಆದಾಯ ತೆರಿಗೆ ಇಲಾಖೆಯು ಸಾರಿಗೆ ಇಲಾಖೆಯಿಂದ ಈ ಕಾರುಗಳ ಮಾಲೀಕರ ಬಗ್ಗೆ ಮಾಹಿತಿ ಕೇಳಿದೆ.

click me!