ರೈಲ್ವೆ ಟಿಕೆಟ್‌ ಕ್ಯಾನ್ಸಲ್‌ ಮಾಡಬೇಡಿ, ಪೂರ್ತಿ ಹಣ ವಾಪಸ್‌ ಬರುತ್ತೆ!

By Suvarna NewsFirst Published Mar 25, 2020, 10:46 AM IST
Highlights

ರೈಲ್ವೆ ಟಿಕೆಟ್‌ ಕ್ಯಾನ್ಸಲ್‌ ಮಾಡಬೇಡಿ, ಪೂರ್ತಿ ಹಣ ವಾಪಸ್‌ ಬರುತ್ತೆ| ಪ್ರಯಾಣಿಕರ ಬಳಿ ರೆಐಲ್ವೇ ಮನವಿ

ನವದೆಹಲಿ(ಮಾ.25): ಕೊರೋನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಮಾ.31ರವರೆಗೆ ಎಲ್ಲ ಬಗೆಯ ಪ್ರಯಾಣಿಕ ರೈಲು ಸಂಚಾರ ರದ್ದಾಗಿದೆ. ಹೀಗಾಗಿ ಆನ್‌ಲೈನ್‌ ಮೂಲಕ ಮುಂಗಡ ಟಿಕೆಟ್‌ ಕಾದಿರಿಸಿರುವವರು ಆತಂಕಪಡಬೇಕಾಗಿಲ್ಲ. ರದ್ದಾಗಿರುವ ರೈಲುಗಳಲ್ಲಿ ಟಿಕೆಟ್‌ ಕಾದಿರಿಸಿದ್ದವರಿಗೆ ತನ್ನಿಂತಾನೆ ಹಣ ವಾಪಸ್‌ ಆಗಲಿದೆ.

ಹಣ ಪಾವತಿಗೆ ಯಾವ ಖಾತೆ ಬಳಸಲಾಗಿತ್ತೋ, ಅದೇ ಖಾತೆಗೆ ಹಣ ವರ್ಗವಾಗಲಿದೆ. ಆದರೆ ಪ್ರಯಾಣಿಕರು ‘ಕ್ಯಾನ್ಸಲ್‌’ ಆಯ್ಕೆಯನ್ನು ಬಳಸಬಾರದು. ಹಾಗೆ ಮಾಡಿದಲ್ಲಿ, ಕಡಿಮೆ ಹಣ ರೀಫಂಡ್‌ ಆಗಬಹುದು ಎಂದು ರೈಲ್ವೆ ತಿಳಿಸಿದೆ.

ವಿಶ್ವದ 260 ಕೋಟಿ ಜನ​ರಿಗೆ ಗೃಹ​ ಬಂಧ​ನ

ಭಾರ​ತ​ದಲ್ಲೂ ಸಂಪೂರ್ಣ ಲಾಕ್‌​ಡೌನ್‌ ಘೋಷಣೆ ಮಾಡು​ವು​ದ​ರೊಂದಿಗೆ ಇಡೀ ವಿಶ್ವ​ದ ಮೂರನೇ ಒಂದ​ರ​ಷ್ಟು ಅಥವಾ 260 ಕೋಟಿ ಜನರು ಈಗ ಗೃಹ ಬಂಧ​ನಕ್ಕೆ ಒಳ​ಗಾಗಿದ್ದಾರೆ. ಕೊರೋನಾ ವೈರಸ್‌ ಹಿನ್ನೆ​ಲೆ​ಯ​ಲ್ಲಿ ಬ್ರಿಟನ್‌, ಫ್ರಾನ್ಸ್‌, ಇಟಲಿ, ಸ್ಪೇನ್‌ ಸೇರಿ​ದಂತೆ 42 ದೇಶ​ಗಳು ಲಾಕ್‌​ಡೌನ್‌ ಘೋಷಣೆ ಮಾಡಿದ್ದು ತಮ್ಮ ಗಡಿ​ಗ​ಳನ್ನು ಬಂದ್‌ ಮಾಡಿವೆ. ಲಾಕ್‌ಡೌನ್‌ ಘೋಷಿ​ಸಿದ ದೇಶ​ಗಳ ಸಾಲಿಗೆ ಈಗ ಭಾರತ ಮತ್ತು ನ್ಯೂಜಿ​ಲೆಂಡ್‌ ದೇಶ​ಗಳು ಹೊಸ​ದಾಗಿ ಸೇರ್ಪಡೆ ಆಗಿವೆ. ಈ ದೇಶ​ಗ​ಳಲ್ಲಿ ಅಗತ್ಯ ಸೇವೆ​ಗ​ಳನ್ನು ಹೊರ​ತು​ಪ​ಡಿಸಿ ಉಳಿದ ಎಲ್ಲಾ ಸೇವೆ​ಗ​ಳನ್ನು ಸ್ಥಗಿ​ತ​ಗೊ​ಳಿ​ಸ​ಲಾ​ಗಿದೆ. 18.9 ಕೋಟಿ ಜನರು ಇರುವ 15 ದೇಶ​ಗ​ಳಲ್ಲಿ ಕಫä್ರ್ಯ ಘೋಷಣೆ ಮಾಡ​ಲಾ​ಗಿದೆ.

Close

click me!