ಕಡಿಮೆ ಖರ್ಚಿನಲ್ಲಿ ಕೊರೋನಾ ಪರೀಕ್ಷಾ ಕಿಟ್‌ ಸಂಶೋಧನೆ!

By Suvarna NewsFirst Published Mar 24, 2020, 3:25 PM IST
Highlights

ಕಡಿಮೆ ಖರ್ಚಿನಲ್ಲಿ ಕೊರೋನಾ ಪರೀಕ್ಷಾ ಕಿಟ್‌ ಸಂಶೋಧಿಸಿದ ದೆಹಲಿ ಐಐಟಿ ತಂಡ|  ಕಿಟ್‌ ಮೂಲಕ ಅತೀ ಕಡಿಮೆ ಖರ್ಚಿನಲ್ಲಿ ಸೋಂಕು ಪತ್ತೆ ಸಾಧ್ಯ

ನವದೆಹಲಿ(ಮಾ.24): ಕಡಿಮೆ ವೆಚ್ಚದಲ್ಲಿ ಕೊರೋನಾ ಪರೀಕ್ಷೆ ಮಾಡುವ ಕಿಟ್‌ ಒಂದನ್ನು ದೆಹಲಿ ಐಐಟಿಯ ಸಂಶೋಧಕರ ತಂಡವೊಂದು ಅಭಿವೃದ್ಧಿ ಪಡಿಸಿದೆ.

ಈ ಕಿಟ್‌ ಮೂಲಕ ಅತೀ ಕಡಿಮೆ ಖರ್ಚಿನಲ್ಲಿ ಸೋಂಕು ಪತ್ತೆ ಸಾಧ್ಯವಿರುವುದರಿಂದ ಸಮಾದ ಎಲ್ಲಾ ವರ್ಗದವರಿಗೆ ಇದು ಅನುಕೂಲವಾಗಲಿದೆ ಎನ್ನುವುದು ಸಂಶೋಧಕರ ವಾದ. ಸದ್ಯ ಈ ಕಿಟ್‌ನ ಮಾನ್ಯತೆಗಾಗಿ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಿ ಕೊಡಲಾಗಿದೆ.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಪ್ರೋಬ್‌ ಫ್ರೀ ಡಿಟೆನ್ಷನ್‌ ಆಸ್ಸೆ’ ಎಂಬ ಹೆಸರಿನ ಕಿಟ್‌ ಆಗಿದ್ದು, ಮಾನ್ಯತೆ ಸಿಕ್ಕರೆ ಅತೀ ಕಡಿಮೆ ಖರ್ಚಿನಲ್ಲಿ ವೈರಾಣು ಪತ್ತೆ ಹಚ್ಚಬಹುದು. ಇದರ ಫಲಿತಾಂಶಗಳು ನಿಖರವಾಗಿರಲಿದೆ ಎಂದು ಸಂಶೋಧರು ಹೇಳಿದ್ದಾರೆ.

click me!