ಬೆಟ್ಟಿಂಗ್‌ ಜಾಹೀರಾತು ಪ್ರಸಾರ ಬೇಡ: ಮಾಧ್ಯಮಗಳಿಗೆ ಕೇಂದ್ರದ ಸೂಚನೆ

By Kannadaprabha NewsFirst Published Oct 4, 2022, 9:26 AM IST
Highlights

ಆನ್ಲೈನ್‌ ಬೆಟ್ಟಿಂಗ್‌ಗಳನ್ನು ತಡೆಯಬೇಕು ಎಂಬ ತೀವ್ರ ಕೂಗಿನ ನಡುವೆಯೇ ವಾರ್ತಾ ಚಾನಲ್‌ಗಳು, ವೆಬ್‌ಸೈಟ್‌ಗಳು, ಒಟಿಟಿ ಫ್ಲಾಟ್‌ಫಾರಂಗಳು ಮತ್ತು ಖಾಸಗಿ ಉಪಗ್ರಹ ಆಧಾರಿತ ಚಾನಲ್‌ಗಳಲ್ಲಿ ಆನ್ಲೈನ್‌ ಬೆಟ್ಟಿಂಗ್‌ಗಳಿಗೆ ಸಂಬಂಧಿಸಿದಂತಹ ಜಾಹೀರಾತುಗಳನ್ನು ಪ್ರದರ್ಶನ ಮಾಡದಂತೆ ಸರ್ಕಾರ ಸೋಮವಾರ ಸಲಹಾತ್ಮಕ ಸೂಚನೆ ನೀಡಿದೆ.

ನವದೆಹಲಿ: ಆನ್ಲೈನ್‌ ಬೆಟ್ಟಿಂಗ್‌ಗಳನ್ನು ತಡೆಯಬೇಕು ಎಂಬ ತೀವ್ರ ಕೂಗಿನ ನಡುವೆಯೇ ವಾರ್ತಾ ಚಾನಲ್‌ಗಳು, ವೆಬ್‌ಸೈಟ್‌ಗಳು, ಒಟಿಟಿ ಫ್ಲಾಟ್‌ಫಾರಂಗಳು ಮತ್ತು ಖಾಸಗಿ ಉಪಗ್ರಹ ಆಧಾರಿತ ಚಾನಲ್‌ಗಳಲ್ಲಿ ಆನ್ಲೈನ್‌ ಬೆಟ್ಟಿಂಗ್‌ಗಳಿಗೆ ಸಂಬಂಧಿಸಿದಂತಹ ಜಾಹೀರಾತುಗಳನ್ನು ಪ್ರದರ್ಶನ ಮಾಡದಂತೆ ಸರ್ಕಾರ ಸೋಮವಾರ ಸಲಹಾತ್ಮಕ ಸೂಚನೆ ನೀಡಿದೆ.

ಮುಖ್ಯವಾಗಿ ಉಪಗ್ರಹ ಆಧಾರಿತ ಚಾನಲ್‌ಗಳು ಕಡ್ಡಾಯವಾಗಿ ಆನ್ಲೈನ್‌ ಬೆಟ್ಟಿಂಗ್‌ ಜಾಹೀರಾತುಗಳನ್ನು ಪ್ರಸಾರ (broadcast) ಮಾಡದಂತೆ ವಿಶೇಷ ಸೂಚನೆ ನೀಡಲಾಗಿದೆ. ಅಲ್ಲದೇ ಈ ಚಾನಲ್‌ಗಳಿಗೆ ಸಂಬಂಧಿಸಿದ ವೆಬ್‌ಸೈಟ್‌ಗಳು (websites)ಅಥವಾ ಇತರ ಯಾವುದೇ ವೇದಿಕೆಯಲ್ಲಿ ಪ್ರದರ್ಶಿಸದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of Information and Broadcasting) ಸೂಚನೆ ನೀಡಿದೆ. ಅಲ್ಲದೇ ಈ ನಿಯಮವನ್ನು ಮೀರಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಡಿಜಿಟಲ್‌ ಮಾಧ್ಯಮಗಳಲ್ಲಿ(digital media) ಪ್ರಚಲಿತ ಘಟನೆಗಳ ಆಧಾರಿತ ಸುದ್ದಿ ಪ್ರಸಾರ ಮಾಡುವ ಚಾನಲ್‌ಗಳು ಮತ್ತು ಒಟಿಟಿ ಪ್ಲಾಟ್‌ಫಾರಂಗಳು (OTT platforms) ಇಂತಹ ಜಾಹಿರಾತುಗಳನ್ನು (advertisements) ಪ್ರದರ್ಶನ ಮಾಡುವುದನ್ನು ಬಿಡಬೇಕು ಎಂದು ಸೂಚಿಸಿದೆ.

click me!