ಕಾಂಗ್ರೆಸ್ ಕುಸಿಯುತ್ತಿರುವ ಬಗ್ಗೆ ಮತ್ತೊಮ್ಮೆ ಹಿರಿಯ ನಾಯಕರಾದ ಗುಲಮ್ ನಬಿ ಮತ್ತು ಕಪಿಲ್ ಸಿಬಲ್ ಧ್ವನಿ ಎತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸಬೇಕು. ಮುಂದಿನ 50 ವರ್ಷ ವಿರೋಧ ಪಕ್ಷದಲ್ಲಿ ಕೂರುವಂತಾಗುವುದನ್ನು ತಪ್ಪಿಸಬೇಕು ಎಂದಿದ್ದಾರೆ.
ಕಾಂಗ್ರೆಸ್‌ನಲ್ಲಿ ಹೆಚ್ಚಿನ ಬದಲಾವಣೆಗಳಾಬೇಕೆಂದು ಕೋರಿ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಪತ್ರ ಬರೆದ ಅಝಾದ್, ಕಳೆದ ಕೆಲವು ದಶಕಗಳಲ್ಲಿ ನಾನು ಪಕ್ಷದ ಸಂಸ್ಥೆಗಳಿಗೆ ಚುನಾವಣೆ ನಡೆಸಿಲ್ಲ. 10-15 ವರ್ಷದ ಹಿಂದೆ ಚುನಾವಣೆ ನಡೆದಿದೆಯೇನೋ.. ಈಗ ನಾವು ಚುನಾವಣೆಗಳಲ್ಲಿ ಸೋಲುತ್ತಿದ್ದೇವೆ. ನಾವು ಮತ್ತೆ ಅಧಿಕಾರಕ್ಕೆ ಬರಬೇಕಾದರೆ ನಾವು ಚುನಾವಣೆ ನಡೆಸೋ ಮೂಲಕ ಪಕ್ಷ ಬಲಿಷ್ಠಗೊಳಿಸಬೇಕು ಎಂದಿದ್ದಾರೆ.
ಕಾಂಗ್ರೆಸ್ ಕುಸಿಯುತ್ತಿರುವ ಬಗ್ಗೆ ಮತ್ತೊಮ್ಮೆ ಹಿರಿಯ ನಾಯಕರಾದ ಗುಲಮ್ ನಬಿ ಮತ್ತು ಕಪಿಲ್ ಸಿಬಲ್ ಧ್ವನಿ ಎತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸಬೇಕು. ಮುಂದಿನ 50 ವರ್ಷ ವಿರೋಧ ಪಕ್ಷದಲ್ಲಿ ಕೂರುವಂತಾಗುವುದನ್ನು ತಪ್ಪಿಸಬೇಕು ಎಂದಿದ್ದಾರೆ.
ಕಾಂಗ್ರೆಸ್ ಭಿನ್ನರಿಗೆ ಸೋನಿಯಾ ಪರೋಕ್ಷ ಸಂದೇಶ ರವಾನೆ
ನಮ್ಮ ಪಕ್ಷ ಮುಂದಿನ 50 ವರ್ಷವೂ ವಿರೋಧ ಪಕ್ಷ ಸ್ಥಾನದಲ್ಲಿಯೇ ಕುಳಿತುಕೊಳ್ಳುವ ಇರಾದೆ ಇಟ್ಟು ಕೊಂಡಿದ್ದರೆ ಪಕ್ಷದೊಳಗಿನ ಚುನಾವಣೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಆಂತರಿಕ ಚುನಾವಣೆಯನ್ನು ವಿರೋಧಿಸುವವರು ಸ್ಥಾನ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಅವರೆಲ್ಲರೂ ಆಮಂತ್ರಣದ ಮೂಲಕ ಸ್ಥಾನ ಪಡೆದುಕೊಂಡವರು ಎಂದು ಟೀಕಿಸಿದ್ದಾರೆ.
ಅಧ್ಯಕ್ಷರ ಆಯ್ಕೆಗೆ ಈ ಬಾರಿ ಕಾಂಗ್ರೆಸ್‌ನಲ್ಲಿ ಚುನಾವಣೆ!
ಚುನಾವಣೆ ನಡೆಸುವ ನಮ್ಮ ಮನವಿಯನ್ನು ಟೀಕಿಸಿದ ಕಾಂಗ್ರೆಸ್ ಕಚೇರಿ ಪ್ರಮುಖರು, ಬ್ಲಾಕ್ ಜಿಲ್ಲಾ ಅಧ್ಯಕ್ಷರೂ ಚುನಾವಣೆ ನಡೆಯಬಹುದು ಎಂದುಕೊಂಡಿದ್ದಾರೆ. ಪ್ರಾಮಾಣಿಕವಾಗಿ ಪಕ್ಷದಲ್ಲಿ ತೊಡಗಿಸಿಕೊಂಡವರಿಗೆ ಖಂಡಿತ ಸ್ವಾಗತವಿದೆ. ರಾಜ್ಯ, ಜಿಲ್ಲೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕಾರ್ಯಕರ್ತರಿಂದಲೇ ಆಯ್ಕೆಯಾಗಬೇಕು ಎಂದಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕನಿಷ್ಠ ಶೇ.51ನಷ್ಟು ಬೆಂಬಲಿಗರಾದರೂ ನಿಮ್ಮ ಜೊತೆಗಿದ್ದಾರೆ. ಆದರೆ ಅವರು ನೇರವಾಗಿ ಚುನಾಯಿತರಾದಾಗ ನಿಮ್ಮ ಬೆಂಬಲಕ್ಕೆ ಯಾರೂ ಇರುವುದಿಲ್ಲ. ಯಾರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಆಯ್ಕೆ ಮಾಡುತ್ತದೋ ಅವರು ಉಳಿಯುತ್ತಾರೆ ಎಂದಿದ್ದಾರೆ.
'ಹುದ್ದೆಯ ಪ್ರಶ್ನೆ ಅಲ್ಲ, ಇದು ದೇಶದ ಪ್ರಶ್ನೆ' ದಿನದ ನಂತರ ಕಪಿಲ್ ನಿಗೂಢ ಮಾತು
ಕಾಂಗ್ರೆಸ್ ಐತಿಹಾಸಿಕವಾಗಿ ತಳಮಟ್ಟಕ್ಕೆ ಬಂದಿದೆ. 2014 ಹಾಗೂ 2019ರ ಚುನಾವಣೆ ಇದನ್ನು ತೋರಿಸುತ್ತದೆ ಎಂದು ಕಪಿಲ್ ಸಿಬಲ್ ಹೇಳಿದ್ದರು. ಅಝಾದ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷದಲ್ಲಿದ್ದು, ಫೆಬ್ರವರಿ 2021ಕ್ಕೆ ಇವರ ಕಾಲಾವಧಿ ಮುಗಿಯಲಿದೆ. 2002ರ ಜಮ್ಮು ಕಾಶ್ಮೀರ ಎಸೆಂಬ್ಲಿ ಚುನಾವಣೆಯಲ್ಲಿ ಅವರು ಸಕ್ರಿಯವಾಗಿ ಕೆಲಸ ಮಾಡಿದ್ದರು ಎಂದು ಪಕ್ಷದ ಹಿರಿಯ ಸಂಜಯ್ ಗಾಂಧಿ ತಿಳಿಸಿದ್ದಾರೆ.