ಒಂದೇ ವಾಕ್ಯದಲ್ಲಿ ರಿಸೈನ್: ಸೋನಿಯಾ ಆದೇಶ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ!

Published : Mar 16, 2022, 11:30 AM IST
ಒಂದೇ ವಾಕ್ಯದಲ್ಲಿ ರಿಸೈನ್: ಸೋನಿಯಾ ಆದೇಶ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ!

ಸಾರಾಂಶ

* ಪಂಜಾಬ್ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ * ಸೋಲಿನ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಧುಗೆ ಸೋನಿಯಾ ಆದೇಶ * ಒಂದು ವಾಕ್ಯ, ಐದೇ ಪದದಲ್ಲಿ ಸಿಧು ರಾಜೀನಾಮೆ

ಚಂಡೀಗಢ(ಮಾ.16): ಪಂಜಾಬ್ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಇದಾದ ಬಳಿಕ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಐದು ರಾಜ್ಯಗಳ ಕಾಂಗ್ರೆಸ್ ಮುಖ್ಯಸ್ಥರಿಗೆ ರಾಜೀನಾಮೆ ನೀಡುವಂತೆ ಕೇಳಿದ್ದರು. ಇಂತಹ ಪರಿಸ್ಥಿತಿಯಲ್ಲಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕೂಡ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆಯಲ್ಲಿ ಐದು ಪದಗಳ, ಒಂದು ವಾಕ್ಯ ಬರೆದು ರಾಜೀನಾಮೆ ನೀಡಿದ್ದಾರೆ. ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ (ಪಿಪಿಸಿಸಿ) ಎಂದು ಅವರು ಅದರಲ್ಲಿ ಬರೆದಿದ್ದಾರೆ.

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ನಂತರ ಪಂಜಾಬ್ ಉಸ್ತುವಾರಿ ಹರೀಶ್ ಚೌಧರಿ ಅವರು ಸೋಲಿನ ಆತ್ಮಾವಲೋಕನಕ್ಕಾಗಿ ಮಂಗಳವಾರ ಅಭ್ಯರ್ಥಿಗಳ ಸಭೆ ಕರೆದಿದ್ದರು. ಇದಾದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಪ್ರತಿಕ್ರಿಯೆ ಪಡೆದು ಐದು ರಾಜ್ಯಗಳ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿತ್ತು. ಚುನಾವಣಾ ಪ್ರಚಾರದ ವೇಳೆಯೂ ಸಿಧು ರಾಜೀನಾಮೆ ಸಲ್ಲಿಸಿದ್ದರು ಆದರೆ ಆ ವೇಳೆ ಕಾಂಗ್ರೆಸ್ ಹೈಕಮಾಂಡ್ ಅವರ ರಾಜೀನಾಮೆಯನ್ನು ಅಂಗೀಕರಿಸುವ ಸ್ಥಿತಿಯಲ್ಲಿ ಇರಲಿಲ್ಲ.

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾದ ನಂತರ, ನವಜೋತ್ ಸಿಂಗ್ ಸಿಧು ಅವರ ಪ್ರಯತ್ನದಿಂದ ಕ್ಯಾಪ್ಟನ್ ಅಮರಿಂದರ್ ಅವರನ್ನು ಕುರ್ಚಿಯಿಂದ ಕೆಳಗಿಳಿಸಲಾಯಿತು. ನಂತರ ರಾಜ್ಯದಲ್ಲಿ ಕಾಂಗ್ರೆಸ್ ವಿವಾದಗಳಲ್ಲಿ ಮುಳುಗಿತು. ದಲಿತರ ಮತಬ್ಯಾಂಕ್‌ ಕಾರ್ಡ್‌ ಆಟವಾಡಿದ ಕಾಂಗ್ರೆಸ್ ಸಿಧು ಅವರ ಆಸೆಗೆ ವಿರುದ್ಧವಾಗಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ಸಿಎಂ ಆಗಿ ನೇಮಿಸಿತು. 

ಸರ್ಕಾರದಲ್ಲಿ ಅಧಿಕಾರಿಗಳ ಹುದ್ದೆಗೆ ಸಂಬಂಧಿಸಿದಂತೆ ಸಿಧು ಮತ್ತು ಸಿಎಂ ಚನ್ನಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಪೊಲೀಸ್ ಅಧಿಕಾರಿಗಳು ಮತ್ತು ಮೂವರು ಡಿಜಿಪಿಗಳನ್ನು ಬದಲಾಯಿಸಲಾಯಿತು, ಇದನ್ನು ನವಜೋತ್ ಸಿಧು ಅವರು ಕಾಂಗ್ರೆಸ್ ಹೈಕಮಾಂಡ್ ಮತ್ತು ಚನ್ನಿ ಸರ್ಕಾರದ ವಿರುದ್ಧದ ದೊಡ್ಡ ಗೆಲುವು ಎಂದು ಕರೆದರು. ಸಿಧು ತಮ್ಮ ನಾಯಕರ ವಿರುದ್ಧ ಹೋರಾಡುತ್ತಿದ್ದರು ಎಂದರೆ, ತಾವು ವಿದ್ವಾಂಸ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದರು. ಏತನ್ಮಧ್ಯೆ, ಚನ್ನಿ ಸರ್ಕಾರ್ ಅವರು ಸುಖ್ಬೀರ್ ಬಾದಲ್ ಅವರ ಸೋದರ ಮಾವ ಬಿಕ್ರಮ್ ಸಿಂಗ್ ಮಜಿಥಿಯಾ ವಿರುದ್ಧ ಹಳೆಯ ಡ್ರಗ್ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿದರು, ಅದು ಸಿಧು ಕೊರಳಿಗೆ ಹಾಕಿದ ಹಗ್ಗದಂತಿತ್ತು. 

ಸಿಧು ಅವರು ತಮ್ಮ ಸರ್ಕಾರದ ವಿರುದ್ಧ ಪದೇ ಪದೇ ಪಪ್ರತಿಭಟಿಸುವುದು ಮತ್ತು ಕೆಟ್ಟ ಭಾಷೆಯ ಪ್ರಯೋಗ ಈ ಎಲ್ಲಾ ಲಕ್ಷಣಗಳು ಚುನಾವಣೆಯ ಮೊದಲು ಕಾಂಗ್ರೆಸ್ ಪಕ್ಷವನ್ನು ಬಹಳವಾಗಿ ದುರ್ಬಲಗೊಳಿಸಿದವು. ಹೈಕಮಾಂಡ್ ಸೂಚನೆ ಮೇರೆಗೆ ಎಲ್ಲಾ ಕಾಂಗ್ರೆಸ್ ನಾಯಕರು ಸಿಧು ಈ ವರ್ತನೆ ಬಗ್ಗೆ ಮೌನ ವಹಿಸಬೇಕಾಯಿತು. ಎರಡನೆಯದಾಗಿ, ಆಮ್ ಆದ್ಮಿ ಪಕ್ಷ ಭಗವಂತ್ ಮಾನ್ ಅವರನ್ನು ಸಿಎಂ ಹುದ್ದೆಯ ಮುಖ ಎಂದು ಘೋಷಿಸಿ, ಕಾಂಗ್ರೆಸ್ ಸಿಎಂ ಚನ್ನಿ ಅವರನ್ನು ಸಿಎಂ ಮಾಡಿದ ನಂತರ ಸಿಧು ರಾಜಕೀಯ ಪಯಣ ಕೊನರಗೊಳ್ಳುತ್ತಿರುವಂತೆ ಭಾಸವಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ