ಕ್ಷೇತ್ರ ಪುನರ್ವಿಂಗಡಣೆ ಬಿಲ್: ಮೋದಿ ಸರ್ಕಾರಕ್ಕೆ ನಮ್ಮ ಬೆಂಬಲ ಎಂದ ಡಿಎಂಕೆ ನಾಯಕ ಸ್ಟಾಲಿನ್!

Published : Nov 28, 2026, 12:54 PM ISTUpdated : Nov 28, 2026, 01:11 PM IST
DMK supports Modi govts delimitation bill

ಸಾರಾಂಶ

DMK supports BJP govt's delimitation bill: ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಡಿಎಂಕೆ ನಾಯಕ ಸ್ಟಾಲಿನ್ ಬೆಂಬಲ ಸೂಚಿಸಿದ್ದಾರೆ. ಪಕ್ಷದ ಸಂಸದರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರದ ಮಹತ್ವದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ತಮಿಳುನಾಡು ಡಿಎಂಕೆ ನಾಯಕ ಸ್ಟಾಲಿನ್ ಬೆಂಬಲ ಸೂಚಿಸುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

ಡಿಎಂಕೆ ನಾಯಕ ಸ್ಟಾಲಿನ್ ಬೆಂಬಲಿಸುವ ನಿರ್ಧಾರಕ್ಕೆ ಮುನ್ನ ಪಕ್ಷದ ಸಂಸದರೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲಿಸಲು ನಿರ್ಧರಿಸಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆಗೆ ಡಿಎಂಕೆ ಬೆಂಬಲ

ಚೆನ್ನೈನಲ್ಲಿರುವ ಡಿಎಂಕೆ ಪ್ರಧಾನ ಕಚೇರಿ ಅಣ್ಣಾ ಅರಿವಲಯಂನಲ್ಲಿಂದು ಪಕ್ಷದ ಅಧ್ಯಕ್ಷ ಸ್ಟಾಲಿನ್ ಅಧ್ಯಕ್ಷತೆಯಲ್ಲಿ ಸಂಸದರ ಸಮಾಲೋಚನಾ ಸಭೆ ನಡೆಯಿತು. ಸಬೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀಲಗಿರಿ ಸಂಸದ ಎ.ರಾಜಾ ಅವರು 'ಎಲ್ಲ ರಾಜ್ಯಗಳಿಗೂ ಒಂದೇ ಪ್ರಮಾಣದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವ ತಿದ್ದುಪಡಿ ಮಾಡಿದ ಕ್ಷೇತ್ರ ಪುನರ್ವಿಂಗಡಣಾ ಬಿಲ್‌ಗೆ ಡಿಎಂಕೆ ಪಕ್ಷ ಬೆಂಬಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಏಕೆ ಬೆಂಬಲಿಸಬೇಕು?

ಕ್ಷೇತ್ರ ಪುನರ್ವಿಂಗಡಣೆ ತಿದ್ದುಪಡಿ ಮಸೂದೆಯನ್ನು ಡಿಎಂಕೆ ಪಕ್ಷ ಏಕೆ ಬೆಂಬಲಿಸಬೇಕು ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು, 1971ರ ಜನಗಣತಿಯ ಪ್ರಕಾರ ಪ್ರತಿ ರಾಜ್ಯಕ್ಕೆ ನೀಡಲಾದ ಪ್ರಾತಿನಿಧ್ಯವನ್ನು ಬದಲಾಯಿಸದೆ ನ್ಯಾಯಯುತವಾಗಿ ಕ್ಷೇತ್ರಗಳನ್ನು ಮರುವಿಂಗಡಿಸುವುದು ಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖ ಬೇಡಿಕೆಯಾಗಿದೆ. ನಾವು ಇಂಡಿಯಾ(INDIA Bloc) ಮೈತ್ರಿಕೂಟದಲ್ಲಿದ್ದಾಗಲೂ, ಅಧಿಕಾರದಲ್ಲಿದ್ದಾಗಲೂ ನಾವು ಯಾವುದೇ ಪರಿಸ್ಥಿತಿಯಲ್ಲೂ ನ್ಯಾಯಯುತವಾಗಿ ಕ್ಷೇತ್ರ ಮರುವಿಂಗಡಣೆಗೆ ಒತ್ತಾಯಿಸುತ್ತಾ ಬಂದಿದ್ದೇವೆ. ಇಂದಿನವರೆಗೆ ಈ ನಿಲುವಿನಲ್ಲಿ ಡಿಎಂಕೆ ಪಕ್ಷ ಯಾವುದೇ ಬದಲಾವಣೆ ಮಾಡಿಲ್ಲ. ನಮ್ಮ ನಿಲುವು ಸ್ಪಷ್ಟವಾಗಿದೆ. 7.18 ರಷ್ಟಿರುವ ತಮಿಳುನಾಡಿನ ಪ್ರಾತಿನಿಧ್ಯ ಮುಂದುವರಿಯಬೇಕು ಎಂದು ಒತ್ತಾಯಿಸಿದ್ದೇವೆ. ವಿರೋಧ ಪಕ್ಷದ ಮೈತ್ರಿಕೂಟವು ಸಹ ಇತರ ರಾಜ್ಯಗಳಿಗೂ ಹಾಗೆ ಮುಂದುವರಿಯಬೇಕು ಎಂದು ಒತ್ತಾಯಿಸಿದೆ. ಆದರೆ ಪ್ರಸ್ತುತ ಡಿಎಂಕೆ ಪಕ್ಷ ಇಂಡಿ ಮೈತ್ರಿಕೂಟದ ಭಾಗವಾಗಿಲ್ಲ ಎಂಬ ಕಾರಣಕ್ಕಾಗಿ ಹೊಸ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳುವುದು ತಪ್ಪು. ಹೀಗಾಗಿ ದೇಶಾದ್ಯಂತ ಕ್ಷೇತ್ರಗಳ ಸಂಖ್ಯೆಯನ್ನು ಶೇಕಡಾ 50 ರಷ್ಟು ಹೆಚ್ಚಿಸುವುದಾದರೆ ನಾವು ಈ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುತ್ತೇವೆ ಎಂದು ಎ.ರಾಜಾ ಸ್ಪಷ್ಟಪಡಿಸಿದರು.

ಮುಂದುವರಿಯುವುದು…

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಮಾನ ನಿಲ್ದಾನವನ್ನೂ ಮೀರಿಸುವಂತಿದೆ ದೇಶದ ಮೊದಲ ಬುಲೆಟ್‌ ಟ್ರೈನ್ ನಿಲ್ದಾಣ, ಹೈಟೆಕ್ ತಂತ್ರಜ್ಞಾನ!
ಜಿಲ್ಲಾಧಿಕಾರಿಗೆ ಅಶ್ಲೀಲ ಮೆಸೇಜ್‌ ಕಳಿಸಿದ ಶಾಸಕ ಅರೆಸ್ಟ್‌, ಉನ್ನತ ಮಟ್ಟದ ತನಿಖೆಗೆ ಕೋರ್ಟ್‌ ಆದೇಶ