: ಶಿವಸೇನೆಯಿಂದ ಬಂಡೆದ್ದು ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಅವರ ಬೆಂಬಲಿಗ 16 ಶಾಸಕರ ಅನರ್ಹ ವಿಚಾರಕ್ಕೆ ಎರಡು ವಾರದಲ್ಲಿ ಉತ್ತರ ಕೊಡುವಂತೆ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ಗೆ ನೋಟಿಸ್ ನೀಡಿದೆ.
ನವದೆಹಲಿ: ಶಿವಸೇನೆಯಿಂದ ಬಂಡೆದ್ದು ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಅವರ ಬೆಂಬಲಿಗ 16 ಶಾಸಕರ ಅನರ್ಹ ವಿಚಾರಕ್ಕೆ ಎರಡು ವಾರದಲ್ಲಿ ಉತ್ತರ ಕೊಡುವಂತೆ ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ಗೆ ನೋಟಿಸ್ ನೀಡಿದೆ. ಅನರ್ಹತೆ ಪ್ರಕ್ರಿಯೆ ತ್ವರಿತವಾಗಿ ಮುಗಿಸದೆ ಸ್ಪೀಕರ್ ರಾಹುಲ್ ನಾರ್ವೇಕರ್ ತಡ ಮಾಡುತ್ತಿದ್ದಾರೆ ಎಂದು ಶಿವಸೇನೆ ಉದ್ಧವ್ ಠಾಕ್ರೆ ಬಣದ ಮನವಿ ವಿಚಾರಣೆ ನಡೆಸಿದ ನ್ಯಾಯಾಲಯ, ಈ ವಿಚಾರವಾಗಿ ಎರಡು ವಾರದೊಳಗೆ ಉತ್ತರ ನೀಡುವಂತೆ ಸ್ಪೀಕರ್‌ಗೆ ನೋಟಿಸ್ ನೀಡಿದೆ. ಶಿವಸೇನೆ ಉದ್ಧವ್ ಬಣದ ಶಾಸಕ ಮನೋಜ್ ಮಿಶ್ರಾ ಅವರು, ಅನರ್ಹತೆ ಇತ್ಯರ್ಥಕ್ಕೆ ಸ್ಪೀಕರ್ ಮುಂದಾಗುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಖಾತೆಗಾಗಿ ಅಜಿತ್- ಶಿಂಧೆ ಬಣ ಜಟಾಪಟಿ : ಹಣಕಾಸು, ಗೃಹ ಖಾತೆಗೆ ಅಜಿತ್ ಬೇಡಿಕೆ